SKU: 17399

ಛತ್ರಪತಿ ಶಿವಾಜಿ

360.00

THE GREAT MARATHA

ಚಾರಿತ್ರಿಕ ಕಥನ

Author : ಗುರುಪ್ರಸಾದ ಭಟ್

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಛತ್ರಪತಿ ಶಿವಾಜಿ ಮಹಾರಾಜರ ಜೀವನಚರಿತ್ರೆಯೆಂದರೆ ಅದೊಂದು ನಂಬಲಸಾಧ್ಯವಾದ ಆದರೂ ನಂಬಲೇಬೇಕಾದ ವಾಸ್ತವ ಘಟನೆಗಳಿಂದ ಕೂಡಿದ ಮಹಾ ಇತಿಹಾಸವೇ ಆಗಿದೆ. ಕೇವಲ ಐವತ್ತು ವರ್ಷ ಬದುಕಿದ ಛತ್ರಪತಿ ಶಿವಾಜಿ ಮಹಾರಾಜರು ೩,೩೩೧ ಕೋಟೆಗಳನ್ನು ಗೆದ್ದಿದ್ದರು. ಪರಕೀಯರ ದುರಾಡಳಿತದಿಂದ ನರಳುತ್ತಿದ್ದ ಭಾರತದಲ್ಲಿ ಸ್ವರಾಜ್ಯವನ್ನು ಸ್ಥಾಪಿಸಿದ ಮೊಟ್ಟಮೊದಲ ಚಕ್ರವರ್ತಿ ಅವರಾಗಿದ್ದರು.

ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಡಳಿತವು ಆದರ್ಶ ರಾಜ್ಯದ ಪ್ರತಿಬಿಂಬವಾಗಿದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಭೂಮಿಯನ್ನು ಅಳೆದು ಅದನ್ನು ರೈತರಿಗೆ ನೀಡಿದ ರೈತಪರ ರಾಜ ಅವರಾಗಿದ್ದರು. ತಮ್ಮ ರಾಜ್ಯಾಭಿಷೇಕವಾದ ನಂತರ ಹೊರಡಿಸಿದ ಮೊಟ್ಟಮೊದಲ ಆಜ್ಞೆಯಲ್ಲಿ ಅವರು ರೈತರಿಗೆ ಮತ್ತು ಪ್ರಜೆಗಳಿಗೆ ವಿನಾಕಾರಣವಾಗಿ ಹಿಂಸೆ ಮತ್ತು ತೊಂದರೆ ನೀಡುವ ಅಧಿಕಾರಿಗಳು ಅಥವಾ ಸೈನಿಕರು ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆಂಬ ಎಚ್ಚರಿಕೆಯನ್ನು ನೀಡಿದ್ದರು. ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದ ಶಿವಾಜಿ ಮಹಾರಾಜರು ಮಹಿಳೆಯರನ್ನು ಅವಮಾನ ಮಾಡಿದ ತನ್ನ ಸ್ವತಃ ಸಂಬಂಧಿಕರ ಕಣ್ಣು ಕೀಳಿಸಿ ಅವರ ಕೈಕಾಲುಗಳನ್ನು ಕಡಿಸುವ ಶಿಕ್ಷೆ ವಿಧಿಸಿದ್ದರು.

ಛತ್ರಪತಿ ಶಿವಾಜಿ ಮಹಾರಾಜರ ಕರ್ನಾಟಕದ ಜೊತೆಗಿನ ಸಂಬಂಧ ಕರಳುಬಳ್ಳಿಯ ಸಂಬಂಧವಾಗಿದೆ. ಅವರ ವಂಶದ ಮೂಲ ಪುರುಷನಾದ ಬಳಿಯಪ್ಪನು ಗದಗ ಜಿಲ್ಲೆಯ ಸೊರಟೂರಿನವನಾಗಿದ್ದನೆಂದು ಇತಿಹಾಸವು ಹೇಳುತ್ತದೆ. ಮಹಾರಾಜರ ತಂದೆಯಾದ ಶಹಾಜಿಯವರು ಬೆಂಗಳೂರಿನ ಗವರ್ನ‌್ರರಾಗಿ ೨೭ ವರ್ಷಗಳ ಕಾಲ ಆಡಳಿತವನ್ನು ನಡೆಸಿದ್ದರು. ಅವರ ಸಮಾಧಿಯು ದಾವಣಗೆರೆ ಜಿಲ್ಲೆಯ ಹೊದಿಗೆರೆಯಲ್ಲಿದೆ. ಛತ್ರಪತಿ ಶಿವಾಜಿ ಮಹಾರಾಜರ ಹಿರಿಯಣ್ಣ ಸಂಭಾಜಿಯವರ ಸಮಾಧಿಯು ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿದೆ. ಶಿವಾಜಿ ಮಹಾರಾಜರ ಬಾಲ್ಯವು ಕರ್ನಾಟಕದಲ್ಲಿಯೇ ಕಳೆಯಿತು. ಅವರ ಒಂದು ಮದುವೆಯು ವಿಜಾಪುರದಲ್ಲಿ ನಡೆಯಿತೆಂದು ಇತಿಹಾಸವು ಹೇಳುತ್ತದೆ. ಶಿವಾಜಿ ಮಹಾರಾಜರ ಉಬ್ಬುಶಿಲ್ಪವನ್ನು ಬೆಳವಡಿ ಮಲ್ಲಮ್ಮಳು ಕಲ್ಲಿನಲ್ಲಿ ಕಟೆಸಿ ತನ್ನ ಸಂಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದಳು. ಆ ಶಿಲ್ಪವು ಮಹಾರಾಜರ ಪ್ರಪ್ರಥಮ ಶಿಲ್ಪಚಿತ್ರವೆಂದು ಗುರುತಿಸ್ಪಡುತ್ತದೆ. ಅದೀಗ ಧಾರವಾಡ ಹತ್ತಿರದ ಯಾದವಾಡ ಗ್ರಾಮದಲ್ಲಿದೆ. ಶಿವಾಜಿ ಮಹಾರಾಜರ ಮನೆತನದ ಕುಲದೇವರು ಶ್ರೀಶೈಲದ ಮಲ್ಲಿಕಾರ್ಜುನನಾಗಿದ್ದು, ಅವರಿಗೆ ಹಂಪಿಯ ವಿರೂಪಾಕ್ಷನು ಶ್ರದ್ಧೆಯ ಕೇಂದ್ರವಾಗಿದ್ದ, ಡಾ. ಸರಜೂ ಕಾಟ್ಕರ್‌ರು ಛತ್ರಪತಿ ಶಿವಾಜಿ ಮಹಾರಾಜರ ಇಡಿಯ ಜೀವನಚರಿತ್ರೆಯನ್ನು ಸಮಗ್ರ ವಾಗಿ ಅಭ್ಯಸಿಸಿ, ಆ ಕಾಲದ ಸಾವಿರಾರು ಪುಟಗಳ ಬಖರದ ಬರೆಹಗಳನ್ನು ಪರಿಶೀಲಿಸಿ ಸಂಶೋಧನಾತ್ಮಕ ವಾದ ಈ ಚಾರಿತ್ರಿಕ ಕಥನವನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನದಲ್ಲಿ ನಡೆದ ಸಮಗ್ರ ಘಟನೆಗಳನ್ನು ವಿವರವಾಗಿ ಮತ್ತು ದಾಖಲೆ ಸಹಿತವಾಗಿ ಈ ಕೃತಿಯು ನಿರೂಪಿಸುತ್ತದೆ. ಇದೊಂದು ರೀತಿಯಲ್ಲಿ ‘Complete Shivaji’ ಮಹಾ ಕಥಾನಕವಾಗಿದೆ.

Rating This Book

Reviews

There are no reviews yet.

Be the first to review “ಛತ್ರಪತಿ ಶಿವಾಜಿ”

Your email address will not be published. Required fields are marked *

Top Books