+918310000414
contact@kannadabookpalace.com
+918310000414
contact@kannadabookpalace.com
₹240.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಕಲ್ಪಿತಕತೆಗಳ ಮಹಾಪೂರಕ್ಕೊಂದು ಅಣೆಕಟ್ಟು
ಛತ್ರಪತಿ ಶಿವಾಜಿ ಮಹಾರಾಜ್
ಭಾರತಮಾತೆಯ ಈ ಸುಪುತ್ರನನ್ನು ಅವಹೇಳನ ಮಾಡುವುದನ್ನೇ ಕಾಯಕವಾಗಿರಿಸುವ ಕೆಲವೊಂದು ಇತಿಹಾಸ ಕಾರರು ಶಿವಾಜಿ ಮಹಾರಾಜರ ಸಾಧನೆಗಳನ್ನು ಅಲ್ಲಗಳೆಯುವಂತಹ ಕಲ್ಪಿತಕತೆಗಳನ್ನು ಸೃಷ್ಟಿಸಿ ಅಮಾಯಕ ಓದುಗರಿಗೆ ತಪ್ಪು ಮಾಹಿತಿಯನ್ನು ಉಣಿಸುತ್ತಿದ್ದಾರೆ. ‘ಶಿವಾಜಿ’ ಎಂಬ ಹೆಸರೇ ಎಂದೂ ಬತ್ತದ ರಾಷ್ಟ್ರ ನಿರ್ಮಾಣ ಸ್ಫೂರ್ತಿಯ ಚಿಲುಮೆ. ಶತಮಾನಗಳು ಉರುಳಿದರೂ ಭಾರತವಾಸಿಗಳ ಕ್ಷಾತ್ರತೇಜವನ್ನು ಉದ್ದೀಪನಗೊಳಿಸುವ ಶಕ್ತಿಯು ‘ಶಿವಾಜಿ’ ಎಂಬ ಹೆಸರಿಗಿದೆ. ಅದನ್ನು ಮರೆಮಾಚಲು, ನಮ್ಮ ಕ್ಷಾತ್ರತ್ವವನ್ನು ಕೊನೆಗಾಣಿಸಲು ಕೆಲವು ಇತಿಹಾಸಕಾರರು ಕಳೆದ ಇನ್ನೂರು ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದಾರೆ. ಅವರ ಕಲ್ಪಿತಕತೆಗಳನ್ನು (Imaginary Pseudo Narratives) ಐತಿಹಾಸಿಕ ಪುರಾವೆಗಳ ಸಮೇತ ಖಂಡಿಸಿ, ಸತ್ಯವನ್ನು ಓದುಗರ ಮುಂದಿಡುವುದೇ ಈ ಗ್ರಂಥದ ತಿರುಳು.
ಕಲ್ಪಿತಕತೆಗಳ ಮಹಾಪೂರಕ್ಕೊಂದು ಅಣೆಕಟ್ಟನ್ನು ಕಟ್ಟಿ, ದೇಶಭಕ್ತರ ಬೇಗುದಿಯ ದಿಸೆಯನ್ನು ರಚನಾತ್ಮಕ ಕರ್ತವ್ಯದೆಡೆಗೆ ತಿರುಗಿಸುವುದೇ ಈ ಗ್ರಂಥದ ಉದ್ದೇಶ. ಈ ನಿಟ್ಟಿನಲ್ಲಿ ಲೇಖಕರ ಸಂಶೋಧನಾತ್ಮಕ ಪರಿಶ್ರಮ ಮತ್ತು ಉತ್ತೇಕ್ಷೆ ರಹಿತ ತಾರ್ಕಿಕ ನಿರೂಪಣೆ ಗ್ರಂಥದುದ್ದಕ್ಕೂ ಕಂಡುಬರುತ್ತದೆ. ಛತ್ರಪತಿ ಶಿವಾಜಿ ಮಹಾರಾಜರ ಕುರಿತಾಗಿ ಸಮಾಜಕ್ಕೆ ಅತ್ಯಗತ್ಯ ಸಕಾರಾತ್ಮಕ ಚಿಂತನೆಯನ್ನು ಸಮರ್ಪಕವಾಗಿ ನೀಡಿರುವ ಉಡುಪಿಯ ಶ್ರೀ ಗುರುಪ್ರಸಾದ ಭಟ್ಟರು ನಮ್ಮೆಲ್ಲರ ಅಭಿನಂದನೆಗಳಿಗೆ ಪಾತ್ರರು.
ಎಲ್ಲರಿಗೂ ಶುಭವಾಗಲಿ. ಜೈ ಹಿಂದ್!
ಶ್ರೀ ಕೋಟ ಶ್ರೀನಿವಾಸ ಪೂಜಾರಿ
ಸನ್ಮಾನ್ಯ ಸಂಸದ ಸದಸ್ಯರು
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.