SKU: 17396

ಬಹುಮುಖಿ

240.00

ಮೋಹನ ಕುಂಟಾರ್ ವ್ಯಕ್ತಿತ್ವ ಮತ್ತು ಸಾಹಿತ್ಯ

Author : ಡಾ. ಸುಭಾಷ್ ಪಟ್ಟಾಜೆ

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಡಾ. ಮೋಹನ ಕುಂಟಾರ್ ಅವರು ನನ್ನ ವಿದ್ಯಾರ್ಥಿಯಾಗಿದ್ದರು. ತರಗತಿಯಲ್ಲಿ ಮತ್ತು ತರಗತಿಯ ಹೊರಗೆ ಅವರ ಕ್ರಿಯಾಶೀಲ ಚೇತನವು ಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದುದನ್ನು ನಾನು ಪ್ರೀತಿ ಮತ್ತು ಅಭಿಮಾನದಿಂದ ನೆನೆಯುತ್ತೇನೆ. ಗ್ರಾಮೀಣ ಪ್ರದೇಶದ ಬಡ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದ ಅವರು ಸಾಧನಶೀಲರಾಗಿ ಮುಂದುವರಿದು ಹಲವು ವಿಧದ ಮಾನ ಸನ್ಮಾನಗಳಿಗೆ ಪಾತ್ರರಾದರೂ ಹುಟ್ಟೂರಿನ ಹೊಕ್ಕುಳ ಬಳ್ಳಿಯ ಸಂಬಂಧವನ್ನು ಮರೆತಿಲ್ಲ. ದೂರದ ಹಂಪಿಯಲ್ಲಿದ್ದುಕೊಂಡು ಕಾಸರಗೋಡಿನ ಕನ್ನಡಂಗಳ, ಇಲ್ಲಿನ ಜಾನಪದ ವೈವಿಧ್ಯದ, ಯಕ್ಷಗಾನ ರಂಗಭೂಮಿಯ, ಇಲ್ಲಿನ ಬಹು ಭಾಷಿಕ ಸಂಸ್ಕೃತಿಯ ವಿವಿಧ ನೆಲೆಗಳನ್ನು ಶೋಧಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಮಲಯಾಳವನ್ನು ಕಲಿತು ಅವರು ಕನ್ನಡಕ್ಕೆ ಅನುವಾದಿಸಿದ ಕೃತಿಗಳು ಕೂಡ ಈ ಮಣ್ಣಿನ ಋಣವನ್ನು ತೀರಿಸುವ ಹೆಜ್ಜೆಯೆಂದು ಖಂಡಿತವಾಗಿ ಹೇಳಬಹುದು.

ಹುಟ್ಟೂರಿಂದ ಹೊರಗೆ ಹೋಗಿ ಹೆಸರು ಮಾಡಿದ ತಿರುಮಲೇಶ್, ಕೆ.ಟಿ.ಗಟ್ಟಿ ಮುಂತಾದವರ ಹಿರಿಯ ಪರಂಪರೆಯ ಮುಂದುವರಿದ ಕೊಂಡಿಯಾಗಿ ‘ಇವನಾರವ ಇವನಾರವ’ ಎಂದೆನಿಸದೆ ‘ಇವ ನಮ್ಮವ’ ಎಂದು ಅಭಿಮಾನದಿಂದ ಗುರುತಿಸಿಕೊಳ್ಳು ವಂತೆ ಮಾಡಿದ ಮೋಹನ ಅವರಿಂದ ಇನ್ನಷ್ಟು ಒಳ್ಳೆಯ ಕೆಲಸಗಳು ನಡೆಯಲಿವೆ ಎಂಬ ನಂಬಿಕೆಯಿದೆ. ಅವರ ಸಾಧನೆಯ ಕುರಿತು ನನ್ನ ಇನ್ನೊಬ್ಬ ಕ್ರಿಯಾಶೀಲ ವಿದ್ಯಾರ್ಥಿ, ಡಾ. ಸುಭಾಷ್ ಪಟ್ಟಾಜೆ ಈ ಹೊತ್ತಗೆಯನ್ನು ಬರೆದಿರುವುದು ತುಂಬ ಸಂತೋಷದ ವಿಚಾರ. ಬಹುಮುಖ ಆಸಕ್ತಿಗಳನ್ನು ಬೆಳೆಸಿಕೊಂಡು ಪರಿಶ್ರಮಪಡುವ ಅವರ ಬದುಕಿನ ದಾರಿ ಇಂದಿನ ತರುಣ ಪೀಳಿಗೆಗೆ ಪ್ರೇರಣಾದಾಯಕವಾಗಿದೆ.

ಡಾ. ಮಹೇಶ್ವರಿ ಯು.

Rating This Book

Reviews

There are no reviews yet.

Be the first to review “ಬಹುಮುಖಿ”

Your email address will not be published. Required fields are marked *

Top Books