+918310000414
contact@kannadabookpalace.com
+918310000414
contact@kannadabookpalace.com
₹100.00 Original price was: ₹100.00.₹90.00Current price is: ₹90.00.
4 in stock
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಪ್ರಗತಿಪರ ಚಿಂತನೆಯ ಕವಿ, ಸಂಘಟಕ, ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಲೇಖಕ ಹೀಗೆ ನಾನಾ ವಿಧವಾಗಿ ಗುರುತಿಸಿಕೊಂಡಿರುವ ಯುವ ಮಿತ್ರ ಮೈಬೂಬಸಾಹೇಬ ಸುಮಾರು ವರ್ಷಗಳಿಂದ ಕಥೆ, ಕವಿತೆ, ಕನ್ನಡ ಜಗತ್ತಿಗೆ ಗುರುತಿಸಿಕೊಂಡಿರುವ ಹೋಸ ಮಾದರಿಯ ಸಾಹಿತ್ಯ ಗಜಲ್ ಇದರಲ್ಲಿಯೂ ಸಾಕಷ್ಟು ಕೃಷಿ ಮಾಡಿದ್ದು, ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ಕೊಡುವ ಸಹಾಯ ಧನದೊಂದಿಗೆ ಪ್ರಕಟಗೊಳ್ಳುತ್ತಿದೆ. ಗಾಲ್ ಎಂದ ತಕ್ಷಣ ಅರಿವಿಗೆ ಬರುವುದು ಪ್ರೀತಿ, ಪ್ರೇಮ, ನೋವು, ಅಜ್ಞಾಪನೆ ಮತ್ತು ವಿನೋದಪ್ರೀತಿ ಆದರೆ ಈ ಕೃತಿಯಲ್ಲಿ ಅದನ್ನು ಹೊರತು ಪಡಿಸಿದ ದಂತತೆಯ ಛಾಯೆ, ಸಾಮಾಜಿಕ ಕಂದಾಚಾರಗಳ ವಿರುದ್ಧದ ಹೋರಾಟ, ಸತ್ಯ ಅಸತ್ಯದ ನಡುವೆ ಕಂಡುಬರುವ ವ್ಯಾಪಕ ಡಿಸ್ಟನ್ಸ್ ತೋರ್ಪಡಿಸಬಹುದಾಗಿ ಇಡಿ ಕಾವ್ಯ ಮತ್ತು ಒಳಹರವು ಅನುಭವಜನ್ಯವಾಗಿದೆ ಎ ವುದಕ್ಕೆ ಒಂದೆರಡು ಗಲ್
ಸಾಲುಗಳನ್ನು ಇಲ್ಲಿ ದಾಖಲಿಸಬಹುದು.
‘ಸತ್ತವರ ಮನೆಯ ಮುಂದೆ ಅತ್ತುಹೋಗಲು ಬಂದಿದ್ದೀರಿ ಅತ್ತವರೆದುರು ಸತ್ತವರಿಗೆ ಸುಳ್ಳುಹೊಗಳಲು ಬಂದಿದ್ದೀರಿ’
ಎನ್ನುವ ಈ ಗಜಲ್ ಗಲ್‌ನ ದಿಸೆಯನ್ನು ಬದಲಿಸಿತು. ಈ ಇಡಿ ಗಜಲ್ ಅಸಮಾನತೆ, ರಾಜಕೀಯ ದುರಂತ ನಾಯಕನ ಮಿತ್ಯ ಆದರ್ಶಗಳು ಮತ್ತು ಸಮಾಜಕ್ಕೆ ಕಂಟಕವಾಗಿರುವ ವ್ಯಕ್ತಿಗಳಿಂದಲೇ ನೈತಿಕ ಮೌಲ್ಯಗಳ ಅದಪತನ ಹೀಗೆ ನಾನಾವಿಧವಾದ ಅನಿಷ್ಟತೆಗಳ ವಿರುದ್ಧ ಒಂದೇ ಗಜಲ್ ತುಂಡರಿಸಿದಂತೆ ಮಾತನಾಡುತ್ತದೆ. ಇಂತಹ ಸಾಕಷ್ಟು ಗಜಲ್‌ಗಳು ಕನಿಯಿಂದ ರಚಿತವಾಗಿದ್ದು ಅವು ಓದುಗನನ್ನ, ಓದುಗ ವಲಯವನ್ನ ವ್ಯಾಪಿಸಿಕೊಂಡು ಸಾಮಾನ್ಯರೊಳಗಿನ ಅಸಮಾನ್ಯ ಚಿಂತನೆಗಳಿಗೆ ಮೊಳಕೆಯಾಗಿಸುತ್ತದೆ. ಅಂತಹ ಪ್ರಯೋಜನದಾಯಕ ಚಿಂತನೆಗೆ ಸಮಾಜ ಒಗ್ಗಿಕೊಳ್ಳಲಿ ಕವಿತೆಯಂತೆ ಕಾವಿ, ಖಾದಿಗಳು ಗಾದಿಗೆ ಅಂಟಿಕೊಳ್ಳದೆ ಸಾಮಾಜಿಕ ನಂಟಸ್ತಿಕೆ ಬೆಳೆಸಿಕೊಂಡು ಸಮೃದ್ಧ, ಸುಸಂಸ್ಕೃತ ಸಮಾಜದ ಕೇಂದ್ರಗಳಾಗಲಿ ಎಂದು ಆಶಿಸುತ್ತ, ಬಹಳ ವರ್ಷಗಳ ಕಾಲ ಕಾವ್ಯದಲ್ಲಿ ತೊಡಗಿಕೊಂಡು ಪ್ರಾಧಿಕಾರದಿಂದ ತನ್ನ ಮೊದಲ ಕೃತಿಯನ್ನು ಪ್ರಕಟಿಸುತ್ತಿರುವ ಕವಿ ಮೈಬೂಬನಿಗೆ ಮತ್ತು ಅಝಾದ್ ಮದಿರೆಯ ಸುತ್ತ ಎನ್ನುವ ಕೃತಿಗೆ ಒಳಿತಾಗಲಿ ಎಂದು ಶುಭಗೈಯುತ್ತೇನೆ.
ಡಾ. ಷಕೀಬ್ ಎಸ್ ಕಣದನೆ ನವಿಲೇಹಾಳ್
ಅಧ್ಯಕ್ಷರು,
ಕನ್ನಡ ಸಾಂಸ್ಕೃತಿಕ ಗತವೈಭವ ಅಕಾಡೆಮಿ ಕರ್ನಾಟಕ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
ವಿಜುಗೌಡ ಕೆ –
ಹೊಸ ಪುಸ್ತಕಗಳ , ಹೊಸ ಲೇಖಕರ ಪರಿಚಯ ಅವರ ಪುಸ್ತಕ ಸಿಗುವಂತಾಗಲಿ ಅಂತ ಮಾಡಿದ ಈ ವೇದಿಕೆ ಲಕ್ಷಾಂತರ ಓದುಗರಿಗೆ ತಲುಪಲಿ ಪುಸ್ತಕ ಸಂಸ್ಕೃತಿ ಬೆಳೆಯಲಿ ..
ಶರಣಯ್ಯ ಮಠಪತಿ (verified owner) –
ತುಂಬಾ ಉತ್ತಮವಾದ ಪುಸ್ತಕ 👍