SKU: 18120

ಅವಲೋಕನ

150.00

Book Details
Author : ಪೂರ್ಣಿಮಾ ರಾಜೇಶ್
Publisher : ಪುಷ್ಕರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಬೆಂಗಳೂರು

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

ಶ್ರೀಮತಿ ಪೂರ್ಣಿಮಾ ರಾಜೇಶ್ ರವರು ನನಗೆ ಬೆಂಗಳೂರಿನ ಕವಿಗೋಷ್ಠಿಗಳಲ್ಲಿ ಪರಿಚಯವಾದವರು. ಬಹಳಷ್ಟು ಸಾಹಿತ್ಯದ ಗ್ರೂಪ್ ಗಳಲ್ಲಿ ಸಾಹಿತ್ಯದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಕವಿತೆ, ಕಥೆ. ಲೇಖನಗಳನ್ನು ಬರೆಯುತ್ತಾ ತಮ್ಮದೇ ಸ್ನೇಹವಲಯವನ್ನು ಸೃಷ್ಟಿಕೊಂಡು ಬರೆದ ಕವಿತೆಗಳನ್ನ ಒಟ್ಟುಗೂಡಿಸಿ, “ಪೂರ್ಣ ಕಾವ್ಯ’ವೆಂಬ ಚೊಚ್ಚಲ ಕವನಸಂಕಲನವನ್ನು ಲೋಕಾರ್ಪಣೆ ಮಾಡಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ಗುರುತಿಸಿಕೊಂಡವರು. ನಂತರದಲ್ಲಿ ‘ದಿವ್ಯ ಯೋಗಿನಿ” ಎಂಬ ತಮ್ಮ ಎರಡನೇ ಕೃತಿಯನ್ನು ಪ್ರಕಟಿಸಿದರು. ಇವರಿಗೆ ಹಲವಾರು ಸಂಸ್ಥೆ ಸಂಘಟನೆಗಳು ಇವರಿಗೆ ಹಲವಾರು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದ್ದಾರೆ.
ಈಗ ಮೂರನೆಯ ಕೃತಿ ‘ಅವಲೋಕನ” ಎಂಬ ಪುಸ್ತಕ ವಿಮರ್ಶೆಯ ಕೃತಿಯನ್ನು ಹೊರತರುತ್ತಿರುವುದು ಖುಷಿ ವಿಚಾರ.
ಇವರಿಗೆ ಕಾರ್ಯಕ್ರಮಗಳಲ್ಲಿ ಲೇಖಕರು ಗೌರವಪೂರ್ವಕವಾಗಿ ಕೊಟ್ಟ ಕೃತಿಗಳನ್ನು ಓದದೇ ಮನೆಯ ಗ್ರಂಥಾಲಯವನ್ನು ಸೇರಿಸದೇ ಇಲ್ಲ ಹಳೆಯ ಲದ್ದಿಪೇಪರ್ ಗೆ ಪುಸ್ತಕವನ್ನು ಮಾರಾಟ ಮಾಡದೇ, ತಮ್ಮ ಕೈಗೆ ಬಂದ ಪ್ರತಿಯೊಂದು ಕೃತಿಯನ್ನು ಓದಿ ತನ್ನ ಜ್ಞಾನದ ಮಟ್ಟಿಗೆ ಆ ಪುಸ್ತಕದ ಬಗ್ಗೆ ಒಂದಷ್ಟು ಸಾಲುಗಳನ್ನು ಬರೆದು ಲೇಖಕರ ಕೃತಿಗೆ ಒಂದು ಅರ್ಥವನ್ನು ತಂದುಕೊಟ್ಟವರು ಶ್ರೀಮತಿ ಪೂರ್ಣಿಮಾ ರಾಜೇಶ್ ರವರು.

ಬಹಳಷ್ಟು ಬರಹಗಾರರು ಕೃತಿಗಳನ್ನು ಓದಿದರೂ ತಾನು ಓದಿದ ಪುಸ್ತಕದ ಬಗ್ಗೆ ಒಂದೆರಡು ಸಾಲು ಬರೆದು ಆ ಬರಹದೊಳಗಿನ ನ್ಯೂನತೆಗಳನ್ನು ತಿದ್ದುವ ಅರ್ಥಪೂರ್ಣ ಬರಹದ ಬಗ್ಗೆ ಒಂದೆರಡುವ ಮಾತನಾಡುವ ಗೋಜಿಗೆ ಹೋಗುವುದಿಲ್ಲ. ಅದರೆ ಶ್ರೀಮತಿ ಪೂರ್ಣಿಮಾ ರಾಜೇಶ್ ರವರು ಸುಮಾರು ನಲವತ್ತು ಜನ ಲೇಖಕರ, ಕವಿಗಳ, ಕವಯತ್ರಿಯರ ಕೃತಿಗಳಲ್ಲಿ ಅಡಕವಾಗಿರುವ ಪ್ರೌಡಿಮೆಯ ಸಾಲುಗಳನ್ನ, ಕವಿತೆಯ ತಿರುಳನ್ನು ಕಥೆಗಳ ಸಾರವನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ. ಇವರ ಪ್ರಯತ್ನ ಸಫಲವಾಗಲಿ ಓದುಗರಿಗೆ ಬರಹಗಾರರಿಗೆ ಇವರು ಇವರ ಬರಹ ಅದರ್ಶವಾಗಿಲಿ ಎಂದು ಅಶಿಸುತ್ತಾ…

ಇವರ ಮುಂದಿನ ಭವಿಷ್ಯ ಉಜ್ವಲವಾಗಲಿ ತಮ್ಮ ಸಾಹಿತ್ಯ ಓದಿನ ಪ್ರೀತಿಯನ್ನು ಇನ್ನಷ್ಟು ವೃದ್ಧಿಸಿಕೊಂಡು ಮತ್ತಷ್ಟು ಸಾಹಿತ್ಯ ಕೃತಿಗಳನ್ನು ಹೊರತರಲಿ ಎಂದು ಹಾರೈಸುತ್ತೇನೆ…
ನಾರಾಯಣಸ್ವಾಮಿ (ನಾನಿ)

ಬಂಡಹಳ್ಳಿ. ಮಾಲೂರು

Rating This Book

Reviews

There are no reviews yet.

Be the first to review “ಅವಲೋಕನ”

Your email address will not be published. Required fields are marked *

Top Books