SKU: 2145

Asamanya Srisamanya M R Pai

100

ಲೇಖಕರು : Shyamala Madav

PUBLISHERS ADDRESS : IBH Prakashana # 18/1, 2nd main 2nd cross, N R Colony, Bangalaore-560004

Ph: 080-26676003

Email: ibhprakashana@gmail.com

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಶ್ಯಾಮಲಾ ಮಾಧವ್ ಮಂಗಳೂರಲ್ಲಿ ಜನಿಸಿ, ಶಾಲಾ ಕಾಲೇಜ್ ವಿದ್ಯಾಭ್ಯಾಸದ ಬಳಿಕ, ದಾಂಪತ್ಯ ನಿಮಿತ್ತ ಮುಂಬಯಿ ವಾಸ. ಹನ್ನೊಂದರ ಹರೆಯದಲ್ಲಿ ಪ್ರಥಮ ರಚನೆ, ‘ಕಡಲಿನ ಕರೆ’ ಕವನ, ‘ರಾಷ್ಟ್ರಬಂಧು’ ಪತ್ರಿಕೆಯಲ್ಲಿ ಪ್ರಕಟವಾಯ್ತು. ಇದುವರೆಗೆ, ನಾಡಿನ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನ, ಅನುವಾದ ಕೃತಿಗಳು ಪ್ರಕಟಿತ. ‘ನಿತ್ಯವಾಣಿ’ ‘ಮುಂಬಯಿವಾಣಿ” ಪತ್ರಿಕೆಗಳ ಸಂಪಾದಕೀಯ ವಿಭಾಗದಲ್ಲಿ ಪರಿಶ್ರಮ. ‘ಪುಕಾರ್’ ಸಂಸ್ಥೆಗಾಗಿ ‘ಮುಂಬಯಿ ಬೇಸ್ಟ್ ಕನ್ನಡ ಫಿಕ್ಷನ್’ ಬಗ್ಗೆ ಸಂಶೋಧನ ಪ್ರಬಂಧ ಮಂಡನೆ. ‘ಸೃಜನಾ,’ ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿಯಾಗಿ ಎರಡು ವರ್ಷಗಳ ಕಾರ್ಯಭಾರ, ‘ಸ್ವಾರೋ” ಸಂಸ್ಥೆಗಾಗಿ ಟ್ರಾನ್ಸಿಷ್ಠನ್ ಮತ್ತು ಟ್ರಾನ್ಸ್‌ಲೇಶನ್ ಕಾರ್ಯದಲ್ಲಿ ಸಹಯೋಗ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ “ದ ಸ್ಟೋರಿ ಆಫ್ ಸಿವಿಲಿಸೆಹನ್” ಸಂಪುಟದ ಭಾಗಗಳನ್ನು ಇಂಗ್ಲಿಷ್‌ನಿಂದ ಹಾಗೂ ಅಂಬೇಡ್ಕರ್ ಸಂಪುಟದ ಭಾಗಗಳನ್ನು ಮರಾಠಿಯಿಂದ ಕನ್ನಡಕ್ಕೆ ತರುವ ಅನುವಾದ ಕಾರ್ಯ ಪೂರೈಕೆ.

ಪೈ ಅವರ ನಿರಂತರ ಕ್ರಿಯಾಶೀಲತೆಗೆ ಕಾರಣವಾದರೂ ಏನು? ಪೈ ಹೇಳುತ್ತಾರೆ : “ಬಹಳಷ್ಟು ಮಂದಿ ಭಾರತೀಯರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿವಳಿಕೆ ಇರುವುದಿಲ್ಲ. ಆದ್ದರಿಂದಲೇ ಅವರು ಮೋಸ ಹೋಗುತ್ತಾರೆ. ನಮ್ಮ ಪ್ರಜಾಪ್ರಭುತ್ವವನ್ನು ಇನ್ನೂ ಸ್ವಲ್ಪ ಅರ್ಥಪೂರ್ಣಗೊಳಿಸಬೇಕೆಂಬುದೇ ನನ್ನ ಪ್ರಯತ್ನ ಪ್ರಜೆಗಳು ಸಾರ್ವಜನಿಕ ವ್ಯವಹಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸದ ಹೊರತು ಪ್ರಜಾಪ್ರಭುತ್ವ ಕೆಲಸ ಮಾಡಲು ಸಾಧ್ಯವಿಲ್ಲ.”

“ಆದ್ದರಿಂದಲೇ ಪ್ರಜ್ಞಾವಂತ ಪ್ರಜೆಯಾಗಿ ಪೈ ಅವರು ಜನರ ವಿಶೇಷ ಪ್ರೀತಿಗೆ ಭಾಜನರಾಗಿದ್ದಾರೆ. ಅವರು ಮುಂಬೈಯಲ್ಲಿ ವಾಸಿಸುತ್ತಿರುವುದು ಮುಂಬೈಗೆ ಒಂದು ಹೆಮ್ಮೆಯ ಸಂಗತಿ” ಎನ್ನುತ್ತಾರೆ ಖ್ಯಾತ ಕಾನೂನು ತಜ್ಞ ಹಾಗೂ ಯುನೈಟೆಡ್ ಸ್ಟೇಟ್ಸ್ನ ಭಾರತದ ಮಾಜಿ ರಾಯಭಾರಿ ನಾನೀ ಪಾಲ್ಟಿವಾಲ ಅವರು.

-ರೀಡರ್ಸ್ ಡೈಜೆಸ್ಟ್, ಅಕ್ಟೋಬರ್ 1995

ನಿನ್ನೆ ದಿನ ನಿಧನರಾದ ಎಂ. ಆರ್. ಪೈ ಅವರು ಎಲ್ಲರ ಮಿತ್ರ ಹಾಗೂ ಆಜಾತಶತ್ರುವಾಗಿದ್ದರು. ಅವರೊಬ್ಬ ಸ್ನೇಹಮಯೀ ಸಂಭಾವಿತ ಹಾಗೂ ಎಲ್ಲರಿಗೂ ಒಳಿತನ್ನೇ ಬಯಸುವಂಥವರಾಗಿದ್ದರು. ಯಾರಿಗಾದರು ಆಮಿಷ ತೋರಿಸಿಯೂ ಅವರ ಬಗ್ಗೆ ಒಂದೇ ಒಂದು ಕೆಟ್ಟಮಾತನ್ನು ಹೊರಡಿಸುವುದೂ ಅಸಾಧ್ಯ ಯಾವ ಸಮಯದಲ್ಲಾದರೂ, ಎಂಥದೇ ವಿಚಾರದಲ್ಲಾದರೂ, ಅವರನ್ನು ಅವಲಂಬಿಸಬಹುದಾಗಿತ್ತು.

-ಆಪ್ಟರ್‌ನೂನ್ ಡಿಸ್ಪ್ಯಾಚ್ ಕೊರಿಯರ್, ಜುಲೈ 4, 2003

Rating This Book

Reviews

There are no reviews yet.

Be the first to review “Asamanya Srisamanya M R Pai”

Your email address will not be published. Required fields are marked *

Top Books