+918310000414
contact@kannadabookpalace.com
+918310000414
contact@kannadabookpalace.com
₹120.00
Book Details |
---|
Author : ರೇಣುಕಾ ಶಿವಕುಮಾರ |
Publisher : ಹೆಚ್ ಎಸ್ ಆರ್ ಪ್ರಕಾಶನ |
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಶ್ರೀಮತಿ ರೇಣುಕಾ ಶಿವಕುಮಾರ್ ರವರದು ಇಂದಿನ ಉದಯೋನ್ಮುಖ ಕವಯಿತ್ರಿಯರ ಪೈಕಿ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರು. ಇವರ ಕವನಗಳೆಲ್ಲ ವಾಸ್ತವಕ್ಕೆ ಹತ್ತಿರವಾಗಿದ್ದು ಅತ್ಯಂತ ಮನೋಜ್ಞವಾಗಿರುತ್ತವೆ. ತನ್ನ ಓದು ಮತ್ತು ಬರವಣಿಗೆಯನ್ನು ಕೇವಲ ಹವ್ಯಾಸಕ್ಕೆ ಸೀಮಿತವಾಗಿ-ರಿಸದೆ, ಈಗಾಗಲೇ “ಕಾವ್ಯ ಚಂದ್ರಿಕೆ” ಮತ್ತು “ಕಾವ್ಯ ಕನ್ನಿಕೆ” ಎಂಬ ಕವನ ಸಂಕಲನಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿ ಜನಮನ ಗೆದ್ದಿದ್ದಾರೆ. ಬಲ್ಲವರೇ ಬಲ್ಲರು ಬೆಲ್ಲದ ಸವಿಯ ಎನ್ನುವ ಹಾಗೆ ಇವರ ಕವನಗಳನ್ನು ಓದಿಯೇ ಆಸ್ವಾದಿಸಬೇಕು. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ನಿಷ್ಣಾತರಾದ ರೇಣುಕಾರವರು ಇದೀಗ ತಮ್ಮ ಚೊಚ್ಚಲ ಕಾದಂಬರಿ “ಆರದ ನಂದಾದೀಪ”ದ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ತಮ್ಮ ಚೊಚ್ಚಲ ಪ್ರಯತ್ನಕ್ಕೆ ಸಾಮಾಜಿಕ ವಿಷಯವನ್ನು ಆಯ್ಕೆ ಮಾಡಿಕೊಂಡಿರುವ ಇವರು ಕಾದಂಬರಿಯಲ್ಲಿ ಒಡಹುಟ್ಟಿದವರ ಅಂತಃಕರಣ, ಸಹೋದರಿಯ ಬಗೆಗಿನ ಪ್ರೀತಿ ಮಮತೆಯನ್ನು ಎತ್ತಿ ಹಿಡಿದಿದ್ದಾರೆ. ತನ್ನ ಕುಟುಂಬದ ಸಂಗತಿಗಳನ್ನೇ ವಸ್ತುವನ್ನಾಗಿಸಿರುವುದು ಈ ಕಾದಂಬರಿಯ ಮತ್ತೊಂದು ವಿಶೇಷ. ಸಹೋದರತ್ವ, ಒಡಹುಟ್ಟಿದವರು ಎಂಬ ಪದಗಳ ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಸಹೋದರಿಯ ಕಡೆಗಿನ ವಾತ್ಸಲ್ಯ ಸಾರುವ “ಅರದ ನಂದಾದೀಪ” ದೇದೀಪ್ಯಮಾನವಾಗಿ ಬೆಳಗಿ, ಸಾಹಿತ್ಯ ಪ್ರೇಮಿಗಳ ಮನಸ್ಸು ಗೆದ್ದು, ಈ ಕಾದಂಬರಿ ಪ್ರಖ್ಯಾತವಾಗುವುದರಲ್ಲಿ ಸಂಶಯವೇ ಇಲ್ಲ. ಕನ್ನಡ ಸಾರಸ್ವತ ಲೋಕದಲ್ಲಿ ಶ್ರೀಮತಿ ರೇಣುಕಾ ಶಿವಕುಮಾರ್ ರವರು ಕಾದಂಬರಿಗಾರ್ತಿಯಾಗಿ ಅಪಾರ ಯಶಸ್ಸು ಗಳಿಸಲಿ ಎಂದು ಹಾರೈಸುತ್ತೇನೆ.
ಸುಮ ಉಮೇಶ್ ಕವಯಿತ್ರಿ,
ಲೇಖಕಿ, ಬೆಂಗಳೂರು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.