SKU: 13576

ಅಂತರಂಗದ ಧ್ಯಾನ

120.00

ಗಜಲ್ ಕೃತಿ

Author : ನಾರಾಯಣಸ್ವಾಮಿ (ನಾನಿ)

Publishers Name : ಆಶಾ ಪ್ರಕಾಶನ 

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಎದೆ ಕಲಕುವ ಅಂತರಂಗದ ಧ್ಯಾನ ಗಜಲ್‌ಗಳೊಂದಿಗೆ ಒಂದಷ್ಟು ಮಾತು !

ನಾನಿ ಎಂಬ ಕಾವ್ಯನಾಮದಿಂದ ಗಜಲ್ ಬರೆಯುತ್ತಿರುವ ನಾರಾಯಣ ಸ್ವಾಮಿಯವರ ‘ನಾನಿಯ ಗಜಲ್ ಅಂತರಂಗದ ಧ್ಯಾನ’ದ ಗಜಲ್‌ಗಳು ತಮ್ಮ ಸಹಜ ಮತ್ತು ಬಡತನದ ನೋವುಗಳಿಂದ ನಮ್ಮ ಎದೆಯನ್ನು ಕಲಕುತ್ತವೆ. ಗಜಲ್‌ಕಾರನು ತಾನು ಉಂಡ, ಕಂಡ ನೋವುಗಳನ್ನು ಪ್ರಾಮಾಣಿಕವಾಗಿ ಇಲ್ಲಿ ಹಿಡಿದಿಟ್ಟಿರುವುದು ಓದುಗರ ಗಮನ ಸೆಳೆಯುತ್ತದೆ. ಮೊದಲನೆಯ ಗಜಲ್‌ನಲ್ಲಿಯ ಬಡತನದ ಚಿತ್ರ ಅಮ್ಮನೊಂದಿಗೆ ಮಾತನಾಡುತ್ತ..

ಬಣ್ಣವೇ ಮಾಸಿ ಹೋದ ಅಂಗಿಯನ್ನು ಅದೆಷ್ಟು ಬಾರಿ ಹೊಲಿಯುವೆ ಅಮ್ಮ ಹರಿದು ಕುಂಡಿಯು ಕಾಣುವ ಪ್ಯಾಂಟಿಗೆ ಎಷ್ಟು ಬಾರಿ ತೇಪೆ ಹಾಕುವೆ ಅಮ್ಮ

ನಿಜಕ್ಕೂ ಇಲ್ಲಿ ವಯಸ್ಸಿಗೆ ಬಂದ ಮಗನಿಗೆ ತೇಪೆ ಹಾಕಿದ ಪ್ಯಾಂಟು ಹಾಕಿಕೊಳ್ಳುವುದು ತರಿಸಿದ ನೋವು ಅಷ್ಟಿಷ್ಟಲ್ಲ. ತಾಯಿಯನ್ನು ಪ್ರಶ್ನಿಸುವ ನೆಪದಲ್ಲಿ ತಾನು ಸಾರ್ವಜನಿಕವಾಗಿ ಅನುಭವಿಸಿದ ನೋವನ್ನೇ ಇಲ್ಲಿ ಗಜಲ್ಕಾರ ಗಜಲ್ ಆಗಿಸಿದ್ದಾನೆ. ಕನ್ನಡದಲ್ಲಿ ಇಂತಹ ದಾರುಣ ಬಡತನದ ನೋವಿನ ಚಿತ್ರಣವನ್ನು ನೀಡಿರುವುದು ವಿರಳ ಅನಿಸುತ್ತದೆ. ಹೀಗಾಗಿ ನಾನಿಯವರ ಗಜಲ್‌ಗಳು ನಮ್ಮ ಮೆಚ್ಚುಗೆಗೆ ಪಾತ್ರವಾಗುತ್ತವೆ. ಇಲ್ಲಿಯವರೆಗೂ ಬಾರದೇ ಇದ್ದ ಅಪರೂಪದ ಚಿತ್ರಣಗಳು ಇಲ್ಲಿವೆ ಎಂದು ಅನಿಸದೇ ಇರದು. ಹಾಗೆಂದು ಇಲ್ಲಿ ಪ್ರೀತಿಯ ಭಾವಗಳು ಇಲ್ಲವೆಂದಲ್ಲ. ತನಗೆ ಪ್ರೀತಿಯ ಜೇನು ತುಂಬಿದ ಒಲವಿನವಳಿಗೆ ಋಣಿಯಾಗಿರುವೆ ಎನ್ನುತ್ತಾನೆ ಗಜಲ್‌ಕಾರ. ಇಲ್ಲಿ ಕೆಲವು ಗಜಲ್‌ಗಳಲ್ಲಿ ಸಾಮಾಜಿಕ ಚಿಂತನೆಗಳು ಮೂಡಿ ಬಂದಿವೆ. ಮತಾಂಧತೆಯ ವಿಷಬೆಳೆಯನ್ನು ಕಿತ್ತೊಗೆಯುವ ಹವಣಿಕೆ ಎದ್ದು ಕಾಣುತ್ತದೆ. ಕವಿಯು ತನ್ನ ಪ್ರೇಯಸಿಯನ್ನು ಗಜಲ್‌ನ ನೆನೆಯುತ್ತಾನೆ. ಅವಳು ಕೂಡಾ ಅವನೊಡನೆ ಐಕ್ಯವಾದಂತೆ ಇದ್ದಾಳೆ. ಗಜಲ್‌ಕಾರ ಮರೆತಿಲ್ಲ. ಇಡೀ ಜೀವನದುದ್ದಕ್ಕೂ ಅವಳ ಋಣ ನನ್ನ ಮೇಲಿದೆ ಎನ್ನುವ ಭಾವಜೀವಿ ಅವನು. ಬಹಳ ಮಹತ್ವದ ಅಂಶವೆಂದರೆ ಪ್ರೇಮದ ಓಘದಲ್ಲಿ ಸಾಮಾಜಿಕ ಚಿಂತನೆ ಮಾಡುವುದನ್ನು

ಅಂತರಂಗದ ಧ್ಯಾನ ನಾನಿಯ ಗಜಲ್‌ಗಳು ಹೆಚ್ಚಾಗಿ ಕವಿಯ ಪ್ರೇಮ ಮತ್ತು ಬಡತನದ ನೋವಿನ ಸುತ್ತ ಸುತ್ತುತ್ತವೆ. ಇನ್ನಷ್ಟು ಸಾಮಾಜಿಕವಾಗುತ್ತ ಹೋಗಿ ಇನ್ನೂ ಹೆಚ್ಚಿನ ಗಜಲ್ ಕಾವ್ಯವನ್ನು ಅವರು ಧ್ಯಾನಿಸಲಿ. ನಾನಿಯ ಅಂತರಂಗದ ಧ್ಯಾನ ಗಜಲ್ ಕೃತಿಯು ಅವರಿಗೆ ಒಳ್ಳೆಯ ಹೆಸರು ತಂದು ಕೊಡಲಿ ಎಂದು ಆಶಿಸುವೆ.

ಶ್ರೀಮತಿ: ಅರುಣಾ ನರೇಂದ್ರ ಶಿಕ್ಷಕರು, ಗಾಲ್‌ಕಾರರು, ಕೊಪ್ಪಳ

Rating This Book

Reviews

There are no reviews yet.

Be the first to review “ಅಂತರಂಗದ ಧ್ಯಾನ”

Your email address will not be published. Required fields are marked *

Top Books