SKU: 8572

ಅಂತರಂಗದ ಬೆಳಕು

80.00

Author : ಹುಸೇನಸಾಬ ವಣಗೇರಿ 

PUBLISHERS Name: Husenasab Vanageri

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಭಾರತದ ಬೆನ್ನೆಲುಬು ಎನಿಸಿಕೊಂಡ ರೈತಾಪಿ ಕುಟುಂಬದ ಹಿನ್ನೆಲೆ ಹೊಂದಿರುವ, ಈಗಾಗಲೇ ಕನ್ನಡ ಸಾರಸ್ವತ ಸಾಹಿತ್ಯಕ್ಷೇತ್ರದಲ್ಲಿ ಎರಡು ಕೃತಿಗಳ ಪ್ರಕಟಣೆಯೊಂದಿಗೆ ಮತ್ತೆರಡು ಕೃತಿಗಳನ್ನು ಸಂಪಾದಿಸಿರುವ ಹುಸೇನಸಾಬ ವಣಗೇರಿ ಅವರು ತಮ್ಮ ಈವರೆಗಿನ ತಮ್ಮ ಬದುಕಿನ ವಯಕ್ತಿಕ ಅನುಭವಗಳನ್ನು, ತಾವು ಹುಳ್ಳಿ ಬೆಳೆದ ಗ್ರಾಮೀಣ ಪರಿಸರ- ಅಲ್ಲಿನ ಸಂಸ್ಕೃತಿ, ಬದುಕು – ಬವಣೆ, ಸಾಮಾಜಿಕ ಸಮಸ್ಯೆಗಳನ್ನು, ಸಾಂಸ್ಕೃತಿಕ ಸಂಬಂಧಗಳನ್ನು, ಇತ್ಯಾದಿ ವಿಚಾರಗಳನ್ನು ತಾವು ತಮ್ಮದೇ ಆದ ದೃಷ್ಟಿಕೋನದ ಮುಖೇನ ಸೂಕ್ಷ್ಮವಾಗಿ ಅವಲೋಕಿಸುತ್ತಾ, ಪರಿಚಯಿಸುತ್ತಾ, ಜೊತೆ ಜೊತೆಗೆ ಚರ್ಚೆಗೆ ಇಂಬು ನೀಡುತಾ ವ್ಯವಧಾನದ ಬದುಕಿನ ನಡುವೆ ಧ್ಯಾನಸ್ತನಾಗಿ ಬರೆದ ಲೇಖನಗಳನ್ನು ಪ್ರಕಟಿಸುವುದರ ಮುಖಾಂತರ ಇದೀಗ ಮತ್ತೊಂದು ಹೆಜ್ಜೆ ಇಡಲು ಸನ್ನದ್ಧರಾಗಿದ್ದಾರೆ.

ಪ್ರಸ್ತುತ ಕಾಲಘಟ್ಟದಲ್ಲಿ ಯುವ ಪೀಳಿಗೆ ತುತ್ತಾಗುತ್ತಿರುವ ತಲ್ಲಣಗಳು, ಅವರ ಮುಂದಿರುವ ಭವಿಷ್ಯದ ಸವಾಲುಗಳು, ಪ್ರೀತಿ ಪ್ರೇಮದ ಹಾಲಕ್ಕೆ ಸಿಲುಕಿ ಜೀವಕ್ಕೆ ಕುತ್ತು ತಂದುಕೊಳ್ಳುವ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕದಡುವಂತಹ ದುರಭ್ಯಾಸಗಳು, ಕೋಪ, ತಾಪ, ಅತಿಯಾದ ಮೊಬೈಲ್ ಬಳಕೆ, ಅದರ ಸಾಧಕ ಬಾಧಕಗಳು ಇತ್ಯಾದಿ ಸೂಕ್ಷ್ಮ ವಿಚಾರಗಳ ಕುರಿತು ಚರ್ಚಿಸುತ್ತ, ಓದುಗನೊಂದಿಗೆ ಸಂವಾದ ನಡೆಸುತ್ತ ಮತ್ತೆ ಮತ್ತೆ ತಮ್ಮ ಬಾಲ್ಯದ ನೆನಪಿನ ಬುತ್ತಿಯನ್ನು ಬಿಚ್ಚಿ, ಅಂದಿನ ಆಟ – ಪಾಠ, ಮುಗ್ಧತೆ, ಮೈತ್ರಿಗಳ ತುತ್ತುಗಳನ್ನು ತುಂಬು ಅಪ್ತತೆಯಿಂದ ಉಣಬಡಿಸುತ್ತ Generation gap ನಿಂದಾಗಿ ಆದ ಬದಲಾವಣೆಗಳನ್ನು ಹಂಚಿಕೊಳ್ಳುತ್ತಾರೆ. “ಪ್ರತಿ ಕ್ಷಣಗಳನ್ನು ಜೀವಿಸಿ” ಎನ್ನುವ ಲೇಖನದಲ್ಲಿ ಕಂಬಳಿ ಹುಳುವೊಂದು ಕಾಲಾಂತರದಿ ಚಿಟ್ಟೆಯಾಗಿ ರೂಪಾಂತರ ಹೊಂದಿದಂತೆ, ಕಬ್ಬಿಣದ ಹಲಗೆಯೊಂದು ಕುಲುಮೆಯಅ ಬೆಂದು ಮೆದುವಾಗಿ ನಂತರ ನಿರ್ದಿಷ್ಟ ಆಕಾರ ಪಡೆದುಕೊಂಡು ಮತ್ತಷ್ಟು ಗಟ್ಟಿಯಾದಂತೆ ಹುಸೇನಸಾಬ ವಣಗೇರಿ ಅವರು ಲೋಕದನುಭವಗಳನ್ನು ತಮ್ಮ ಅನುಭವಗಳನ್ನಾಗಿಸಿಕೊಂಡು ಒಬ್ಬ ತತ್ವಜ್ಞಾನಿಯಂತೆ, ದಾರ್ಶನಿಕನಂತೆ ತಮ್ಮ ಮಾಗಿದ ಚಿಂತನೆಗಳನ್ನು ಬಿತ್ತರಿಸುತ್ತಾರೆ! ಜೀವನದಲ್ಲಿ ಖುಷಿಯಿಂದ ಇರಬೇಕಾದರೆ ಖುಷಿಯನ್ನು ನಾವು ಎಲ್ಲೋ ಹುಡುಕುವ ಅಗತ್ಯವಿಲ್ಲ, ಅದು ನಮ್ಮಲ್ಲೇ ಅಡಗಿರುತ್ತದೆ. ಒತ್ತಡದಿಂದ ಹೊರಬಂದು ಜೀವನದ ಪ್ರತಿಕ್ಷಣಗಳನ್ನು ನಾವು ಜೀವಿಸಬೇಕು ಎಂಬ ಹುಸೇನಸಾಬ ವಣಗೇರಿ ಅವರ ಮಾತುಗಳು ಲೆಬನಾನಿನ ದಾರ್ಶನಿಕ ಕವಿ ‘ಐಲೀಲ್‌ಗಿಬ್ರಾನ್’ ನ “ಹುಚ್ಚ ಜಾನ್” ನ ವಾಕ್ಯಗಳಂತೆ ಸಂಮೋಹಿಸಿದರೆ ಅಚ್ಚರಿಪಡಬೇಕಿಲ್ಲ.

ಜಬೀವುಲ್ಲಾ ಎಂ ಅಸದ್

ಸಾಹಿತಿ ಹಾಗೂ ಚಿತ್ರಕಲಾವಿದರು.

ಮೊಳಕಾಲ್ಮುರು.

Rating This Book

Reviews

There are no reviews yet.

Be the first to review “ಅಂತರಂಗದ ಬೆಳಕು”

Your email address will not be published. Required fields are marked *

Top Books