SKU: 14607

ಆಟದ ಮೇಳ

220.00

(ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥನ)

ನಿರೂಪಣೆ : ಕೆರೆಮನೆ ಶಿವಾನಂದ ಹೆಗಡೆ

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

‘ಎಲ್ಲವನ್ನೂ ಮರೆತು ಬಾಳು ಸಾಗಬೇಕು ಅಲ್ಲವೇ?’ ಶ್ರೀಯುತ ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥನದಲ್ಲಿ ಈ ಒಂದು ಮಾತು ಬರುತ್ತದೆ. ಅವರ ಅನುಭವ ಕಥನವನ್ನು ಸುಂದರವಾಗಿ ನಿರೂಪಿಸಿದ ಕಲಾವಿದ ಕೆರೆಮನೆ ಶಿವಾನಂದ ಹೆಗಡೆಯವರು. ಉತ್ತರ ಕನ್ನಡದ ಮೂರು ತಲೆಮಾರುಗಳ ಯಕ್ಷಗಾನ ಚರಿತ್ರೆಯ ಒಳನೋಟವನ್ನು ನಾನು ವಿಸ್ಮಯದಿಂದ ಅವಲೋಕಿಸಿದ್ದೇನೆ. ಸಾವು, ನೋವು, ಅನೇಕ ಯಾತನೆಗಳಿಂದ ಕೂಡಿದ ಅವರ ಬಾಳಿನಲ್ಲಿ ಸ್ವೀಕಾರವೊಂದೇ ಬಾಳಿನ ಶಾಂತಿಗಿರುವ ಮಾರ್ಗ. ಸತ್ಯ ಸೌಂದರ್ಯಗಳನ್ನು ಜತನಗೊಳಿಸಿಕೊಂಡು ಬಾಳುವ ಮಾರ್ಗ. ಜತೆಗೇ ಒಂದು ಚಾರಿತ್ರಿಕ ಜೀವನ ಸಾಹಸವನ್ನು ಸೃಷ್ಟಿಸಿ, ಅನುಭವಿಸಿ ನಿವೃತ್ತಿಯಲ್ಲಿ ಯಾವ ಕಹಿಯನ್ನೂ ಇಟ್ಟು ಕೊಳ್ಳದೆ ಇರುವ ಮಾರ್ಗ ಎಂಬುದು ಸಂತೆಗುಳಿ ನಾರಾಯಣ ಭಟ್ಟರ ಜೀವನ ಅನುಭವ ಕಥನದಲ್ಲಿ ಮಾರ್ಮಿಕವಾಗಿ ಮೂಡಿ .

ಇವರ ಅನುಭವವನ್ನು ಓದುವಾಗ ಉತ್ತರ ಕನ್ನಡದ ಮಹತ್ವದ ಸಾಹಿತಿ ವಿ.ಟಿ.ಶೀಗೇಹಳ್ಳಿಯವರ ‘ತಲಗಳಿ’ ಕಾದಂಬರಿಯ ನೆನಪು ಜತೆಗೇ ಹುಟ್ಟಿಕೊಳ್ಳುತ್ತದೆ. ಸಂತೆಗುಳಿ ನಾರಾಯಣ ಭಟ್ಟರು ಎಲ್ಲವನ್ನು ನೆಚ್ಚಿ, ಹಚ್ಚಿ, ಮೆಟ್ಟಿ, ಮೆರೆದು ಬಾಳಿ ಎಲ್ಲವನ್ನು ಮರೆತು ಬಾಳಿದ ಬದುಕು ಉತ್ತರ ಕನ್ನಡದ ಹಿರಿಯ ಬಾಳಿಗ ನೊಬ್ಬನ ಸೃಜನಶೀಲತೆಯ ಮೆರಗನ್ನೂ ತೋರಿಸುತ್ತದೆ. ಸನ್ನಿತ್ರ ಕಲಾವಿದ ಕೆರೆಮನೆ ಶಿವಾನಂದ ಹೆಗಡೆಯವರ ಅನೇಕ ಸಾಹಸಗಳಲ್ಲಿ ‘ಸಂತೆಗುಳಿ ನಾರಾಯಣ ಭಟ್ಟರ ಅನುಭವ ಕಥನ’ದ ಸಂಗ್ರಹ ಅನೇಕ ರೀತಿಯ ಯಕ್ಷಗಾನದ ಆಯಾಮ ಗಳನ್ನು ಅಭಿವ್ಯಕ್ತಗೊಳಿಸುತ್ತದೆ. ವಿಸ್ಕೃತಿಯ ಈ ತಲೆಮಾರಿಗೆ ಇದೊಂದು ಅಪೂರ್ವ ಸಾಕ್ಷಿಯೆಂದು ನಾನು ಭಾವಿಸುತ್ತೇನೆ.

-ಗುರುರಾಜ ಮಾರ್ಪಳ್ಳಿ

 

Rating This Book

Reviews

There are no reviews yet.

Be the first to review “ಆಟದ ಮೇಳ”

Your email address will not be published. Required fields are marked *

Top Books