+918310000414
contact@kannadabookpalace.com
+918310000414
contact@kannadabookpalace.com
₹160.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಪ್ರಕಾಶ ವಸ್ತ್ರದ ಅವರದು ಪ್ರಶ್ನಾತೀತ ಲೋಕ ನಿಷ್ಠೆ ಜೊತೆಗೆ ಬಹು ಆಯಾಮಗಳ ಲೋಕದೃಷ್ಟಿ: ವೃತ್ತಿಯಲ್ಲಿ ವಕೀಲರು. ಆದರೆ, ಪ್ರವೃತ್ತಿಯಲ್ಲಿ ಬದುಕಿನ ವೈರುಧ್ಯ- ವೈವಿಧ್ಯಗಳನ್ನು ಚಿತ್ರಿಸುವ ಬರಹಗಾರರು. ವೃತ್ತಿ ಹಾಗೂ ಪ್ರವೃತ್ತಿಗಳು ಪರಸ್ಪರ ಪೂರಕವಾದಾಗ ಸಮಾಜಮುಖಿ ಬೆಳವಣಿಗೆಗಳು ಸ್ವಾಭಾವಿಕವೇ. ಅಂತರಂಗದ ಅರಿವಿನಲ್ಲಿ ಕಂಡರಸುವ ಸತ್ಯ-ಸತ್ವಗಳು ಬಹಿರಂಗದ ನೆಲೆಯ ಅಗ್ನಿ ಪರೀಕ್ಷೆಯಲ್ಲಿ ಅದಲು ಬದಲಾಗುವ ಸಾಧ್ಯತೆಗಳನ್ನು ಎಚ್ಚರದ ಕಣ್ಣಿನಿಂದಲೇ ಗಮನಿಸುವ ವಿಜ್ಞಾನಿಯಂತೆ, ಕಲಾವಿದನಂತೆ ಅದರ ಬಹುರೂಪಗಳ ಆಯಾಮಗಳನ್ನು ಅಕ್ಷರಗಳಲ್ಲಿ ಸೆರೆ ಹಿಡಿಯುವ ಸಾಮರ್ಥ್ಯಕ್ಕೆ ಬೇಕಾದದ್ದು ಚಲನಶೀಲ ಮನಸ್ಸು ಅವರದು.
ಕೋರ್ಟಿನಲ್ಲಿ ಕಕ್ಷಿದಾರರ ಪರವಾಗಿ ಕಾನೂನಿನ ಕಣ್ಣಿನಲ್ಲಿಯೇ ವಾದ ಮಂಡಿಸು ತಲೇ, ಸಾಮಾಜಿಕ ನಿಷ್ಠುರ ಸತ್ಯಗಳನ್ನು ಪೋಣಿಸಿ, ನ್ಯಾಯ ಸಮ್ಮತವಾದದ್ದು ಹೇಗೆ ಧರ್ಮಸಮ್ಮತವೂ ಆಗುತ್ತದೆ ಎಂಬುದನ್ನು ಹೇಳುತ್ತಾ, ಮಾತಿನ ನಡುವೆ ಮೌನ ಸೃಷ್ಟಿಸಿ ಓದುಗರ ಜೊತೆ ವಿಶಿಷ್ಟ ಸಂವಹನದ ಅನುಭವ ಒದಗಿಸುವ ವಸ್ತ್ರದ ಅವರಿಗೆ ಬರಹದ ಕೌಶಲ್ಯ ಸಿದ್ಧಿಸಿದೆ. ‘ಮುಖಗವಸು’ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ, ಈಗ ಅಂಕಣಕಾರರಾಗಿ ಅಡಿ ಇಟ್ಟಿದ್ದಾರೆ.
“ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ‘ಅಡ್ವಕೇಟ್ ಡೈರಿ’ ಅಂಕಣದಲ್ಲಿ ಲೇಖನದ ಮೂಲಕ ಕೋರ್ಟಿನಲ್ಲಿ ತಾವು ನಡೆಸಿದ ಪ್ರಕರಣಗಳ ಸಂಗತಿ, ಕಾನೂನು ಜನಸಾಮಾನ್ಯರಿಗೂ ತಿಳಿಯುವಂತೆ ವಿಶಿಷ್ಟ ನಿರೂಪಣೆಯಿಂದ ಮನಗೆದ್ದು, ಓದುಗರ ಬಳಗ ಸೃಷ್ಟಿಸಿಕೊಂಡಿದ್ದಾರೆ. ನಿಯಮಿತವಾಗಿ ಅಂಕಣ ಬರೆಯುವುದು ಕಷ್ಟ. ಏಕತಾನತೆಯನ್ನು ನಿವಾರಿಸಿಕೊಂಡು ವಸ್ತುವನ್ನು ಗುರುತಿಸಿ, ಕಾಣದ ಓದುಗರಿಗೆ ಕಥಾನಕ ರೀತಿಯಲ್ಲಿ ನಿವೇದಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಪ್ರಕಾಶ ಅವರು ಈ ಸವಾಲನ್ನು ತಮ್ಮ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ರೀತಿಯಲ್ಲಿ ಪ್ರತಿ ಅಂಕಣದಲ್ಲಿ ಹೊಸತನ ಮೂಡಿಸುತ್ತಿರುವುದು ಅಭಿಮಾನದ ಸಂಗತಿ.
-ಹುಣಸವಾಡಿ ರಾಜನ್
ಸಮೂಹ ಸಂಪಾದಕ
ಸಂಯುಕ್ತ ಕರ್ನಾಟಕ-ಕರ್ಮವೀರ-ಕಸ್ತೂರಿ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.