SKU: 350

ಮೆಂಟಲ್ ಎಬಿಲಿಟಿ (ಮಾದರಿ ಪ್ರಶ್ನೆ-ಪತ್ರಿಕೆಗಳೊಂದಿಗೆ) Mental Ability (with sample question-papers)

200

ಲೇಖಕರು : ಎ.ಎನ್. ಆಂಜನಪ್ಪ

PUBLISHERS ADDRESS : Vasantha Prakashana Publisher & Book Seller # 360, 10th B Main, Jayanagar, 3rd Block, Bangalore – 560 011.

Mobile: 7892106719

Ph: 080-40917099

Email: vasantha_prakshana@yahoo.com

Website: www.vasanthaprakashana.com

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಮೆಂಟಲ್ ಎಬಿಲಿಟಿ (ಬೌದ್ಧಿಕ ಸಾಮರ್ಥ್ಯ) ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅತ್ಯಂತ ಸುಲಭವಾಗಿ, ಪ್ರತಿ ಪ್ರಶ್ನೆಗೂ ಎರಡು/ಮೂರು ಪರ್ಯಾಯ ವಿಧಾನಗಳ ಮೂಲಕ ಸರಳವಾಗಿ ಬಿಡಿಸುವುದನ್ನು ಹಂತಹಂತವಾಗಿ ವಿವರಿಸುವ, ಕನ್ನಡದ ಏಕೈಕ ಕೃತಿ ವಿ.ಎನ್. ಆಂಜನಪ್ಪ ಅವರ ‘ಮೆಂಟಲ್ ಎಬಿಲಿಟಿ ಪ್ಲಸ್ – Sharpen Your Brain’ ಇದೀಗ ನಿಮ್ಮ ಕೈಯಲ್ಲಿದೆ ಮತ್ತು ಇದು ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ, ಶಿಕ್ಷಕರಿಗೆ, ತರಬೇತುದಾರರಿಗೆ ಅತ್ಯಮೂಲ್ಯ ಕೈಪಿಡಿಯಾಗಿದೆ.

ಕಳೆದ ಇಪ್ಪತ್ತು ವರ್ಷಗಳಿಂದ ರಾಜ್ಯದ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತಾ ಕೇಂದ್ರಗಳಲ್ಲಿ ಮೆಂಟಲ್ ಎಬಿಲಿಟಿ ವಿಷಯವನ್ನು ಬೋಧಿಸುತ್ತಾ, ವಿವಿಧ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿನ ತಮ್ಮ ಅಂಕಣ ಬರಹಗಳ ಮೂಲಕ ಇದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸರಳ ವಿಧಾನದ ಮೂಲಕ ಬಿಡಿಸುವುದನ್ನು ಹೇಳಿಕೊಡುತ್ತಿರುವ ಆಂಜನಪ್ಪ ಅವರು ಇದುವರೆಗೆ ಕೇವಲ ಇಂಗ್ಲಿಷ್ ನಲ್ಲಿ ಮಾತ್ರವೇ ಸಿಗುತ್ತಿದ್ದ ಫೋರ್ಸ್, ಅಗರವಾಲ್ ಅವರಂತಹ ದಿಗ್ಗಜರ ಉದ್ದಂಥಗಳ ರೀತಿಯಲ್ಲಿ ಕನ್ನಡದಲ್ಲೂ ಮೆಂಟಲ್ ಎಬಿಲಿಟಿ ಗ್ರಂಥ ರಚಿಸಬಹುದು, ವಿವರಣೆ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆಂಜನಪ್ಪ ಅವರ ಮೊದಲ ಕೃತಿ ‘ಮೆಂಟಲ್ ಎಬಿಲಿಟಿ’ ಕಳೆದ ಹನ್ನೆರಡು ವರ್ಷಗಳಲ್ಲಿ ಹಲವು ಮುದ್ರಣಗಳನ್ನು ಕಂಡಿದೆ.

ಮೆಂಟಲ್ ಎಬಿಲಿಟಿ ಪ್ಲಸ್ – Sharpen Your Brain’ ಕೃತಿಯಲ್ಲಿನ 25 ಅಧ್ಯಾಯಗಳಲ್ಲಿ ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುತ್ತಿರುವ ವಿವಿಧ ರೀತಿಯ ಪ್ರಶ್ನೆಗಳನ್ನು ಉದಾಹರಣೆಗಳ ಸಹಿತ ವಿವರಿಸಲಾಗಿದೆ. ಆಂಜನಪ್ಪ ಅವರು ಇಲ್ಲಿ ಸರಳೀಕರಣ (Simplification), ಗಣಿತದ ಪ್ರಶ್ನೆಗಳು (Mathematical Questions), ಸರಾಸರಿ (Average), ವಯಸ್ಸುಗಳು (Ages), ಶೇಕಡಾ (Percentage), ಲಾಭ ಮತ್ತು ನಷ್ಟ (Profit & Loss), ಅನುಪಾತ ಮತ್ತು ಸಮಾನುಪಾತ (Ratio & Proportion), 5 (Partnership), ಸರಣೀ ಕ್ರಮ (Chain Rule), ರೈಲುಗಳು (Trains), ಸಮಯ ಮತ್ತು ಕೆಲಸ (Time & Work), ಸರಳ ಬಡ್ಡಿ (Simple Interest), ಚಕ್ರ ಬಡ್ಡಿ (Compound Interest), ಆಸನ ವ್ಯವಸ್ಥೆ ಮತ್ತುಗೂಢ ಪ್ರಶ್ನೆಗಳು (Seating Arrangement & Puzzle Test), ಕ್ಯಾಲೆಂಡರ್ (Calendar), ಕೋಡಿಂಗ್ ಮತ್ತು ಡೀ – ಕೋಡಿಂಗ್ (Coding & De-coding), ವೆನ್ನನ ಚಿತ್ರಗಳು (Venn Diagrams), ಪೈ ಚಿತ್ರಗಳು (Pie Charts) – ಇವೇ ಮೊದಲಾದ 25 ಅಧ್ಯಾಯಗಳಿದ್ದು ಪ್ರತಿಯೊಂದು ವಿಷಯಕ್ಕೂ ಮೂವತ್ತರಿಂದ ಅರವತ್ತು ಸಮಸ್ಯೆಗಳನ್ನು ಆಯ್ದುಕೊಂಡು, ಸರಳವಾದ ವಿವರಣೆ ಮತ್ತು ವಿಶ್ಲೇಷಣೆ ನೀಡಿ, ಮನೋಸಾಮರ್ಥ್ಯದ ಸಮಸ್ಯೆಗಳನ್ನು ಯಾರು ಬೇಕಾದರೂ ಬಿಡಿಸಬಹುದು ಎಂಬ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ. ಕೊನೆಯ ಅಧ್ಯಾಯದಲ್ಲಿನ ಸಮಸ್ಯೆಗಳಿಗೆ (Data Interpretation : Pie Charts – Tabulation – Bar Graphs – Line Graphs) ನೀಡಿರುವ ವಿಶ್ಲೇಷಣೆ ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವುದು ಈ ಕೃತಿಯ ವಿಶೇಷ ಎನ್ನಬಹುದು.

ಇದನ್ನು ನೀವೂ ಓದಿ, ಓದಿಸಿ, ಸ್ನೇಹಿತರೊಂದಿಗೆ ಚರ್ಚಿಸಿ, ಲೆಕ್ಕಗಳನ್ನು ಬಿಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಿ. ಆಲ್ ದ ಬೆಸ್ಟ್!

ಯಾಜ್ಞವಲ್ಕ್ಯ , ಮೈಸೂರು

Rating This Book

Reviews

There are no reviews yet.

Be the first to review “ಮೆಂಟಲ್ ಎಬಿಲಿಟಿ (ಮಾದರಿ ಪ್ರಶ್ನೆ-ಪತ್ರಿಕೆಗಳೊಂದಿಗೆ) Mental Ability (with sample question-papers)”

Your email address will not be published. Required fields are marked *

Top Books