SKU: 16604

ಅವಲೋಕನ

Original price was: ₹199.00.Current price is: ₹189.00.

Book Details
Author : Ganesh Joshi Sankolli
Publisher ‏ : ‎ The Write Order Publications
Language ‏ : ‎ Kannada
Paperback ‏ : ‎ 87 pages
ISBN-10 ‏ : ‎ 8195964117
ISBN-13 ‏ : ‎ 978-8195964116

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಅವಲೋಕನವೆಂದರೆ,

ಮಕ್ಕಳ ಬಗ್ಗೆ ಪಾಲಕರು ಕನಸು ಕಟ್ಟುವುದು ಸಹಜ. ಕನಸನ್ನು ನನಸಾಗಿಸಲು ಶೈಕ್ಷಣಿಕ ಮಾರ್ಗದಲ್ಲಿ ಅನೇಕ ವಿಧದ ಹೊಸ ಹೊಸ ಪ್ರಯತ್ನಗಳು ಪಾಲಕರಿಂದ ನಡೆಯುವುದುಂಟು. ಈ ಸಂದರ್ಭದಲ್ಲಿ ಮಗುವಿನ ಕಲಿಕೆ ಕೇವಲ ತರಗತಿ ಕೋಣೆಯಲ್ಲಿ ಮಾತ್ರವಲ್ಲ, ಪ್ರತಿ ಹಂತದಲ್ಲಿಯೂ ಮಗುವಿಗೆ ಶಿಕ್ಷಣ ನೀಡಬೇಕಾಗಿರುವುದು ಅಗತ್ಯ. ಇಂತಹ ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ಪಾಲಕರು ಗಮನಿಸಲೇಬೇಕಾದ ಕೆಲವು ಅಂಶಗಳನ್ನು ಈ ಪುಸ್ತಕ ನಿಮ್ಮ ಮುಂದೆ ತೆರೆದಿಡುತ್ತದೆ.

ಏನಾಗುತ್ತಿದೆ..? ಏನಾಗಿದೆ..? ಏನಾಗಬೇಕು..? ಹೇಗೆ ಮಾಡಬೇಕು..? ಇವೆಲ್ಲದಕ್ಕೂ ಉತ್ತರ ಕೊಡುವ ಪ್ರಯತ್ನಗಳು ಈ ಪುಸ್ತಕದಲ್ಲಿ ನಡೆದಿದೆ. ಇಂದಿನ ನೈಜ ಸನ್ನಿವೇಶದಲ್ಲಿ ಪಾಲಕರು ಎದುರಿಸುತ್ತಿರುವ ಸಮಸ್ಯೆ ಹಾಗೂ ಶಿಕ್ಷಕರು ಗಮನಿಸಲೇಬೇಕಾದ ಅಂಶಗಳನ್ನು ಒಳಗೊಂಡ ಈ ಹೊತ್ತಿಗೆ ಹೊಸ ಚಿಂತನೆಗೆ ನಿಮ್ಮನ್ನು ಹಚ್ಚುವುದು.

ನಮ್ಮೊಳಗೆ ನಾವು ಕೇಳಿಕೊಳ್ಳುವ ಅನೇಕ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಅಕ್ಷರ ರೂಪ ದೊರೆತಿದೆ. ಅದಲ್ಲದೆ ಅಲ್ಲಲ್ಲಿ ಸೂಕ್ಷ್ಮ ಪರಿಹಾರಗಳನ್ನು ಕಂಡುಕೊಳ್ಳಲೂ ಈ ಪುಸ್ತಕ ಅನುಕೂಲಕಾರಿಯಾಗಿದೆ.

ಕೈಲಾಸಂ ಹೇಳಿದಂತೆ “ಮುಂದಕ್ ಬರಬೇಕು” ಎಂಬುದಷ್ಟನ್ನೇ ಮಕ್ಕಳಿಗೆ ಕಲಿಸಿದರೆ ಸಾಲದು. ಸೋಲಿನ ಅನುಭವವೂ ಅವರಿಗೆ ಆಗುವಂತೆ ಮಾಡಬೇಕು. ಅದು ಬಹುದೊಡ್ಡ ಪಾಠವೇ. ಏಕೆಂದರೆ ಜೀವನದಲ್ಲಿ ಗೆಲುವು ಮಾತ್ರ ಸಿಗುವುದಲ್ಲ, ಸೋಲನ್ನೂ ಅನುಭವಿಸಬೇಕಾಗುತ್ತದೆ. ಆಧುನಿಕ ಶಿಕ್ಷಣ ಪದ್ಧತಿ ಅನೇಕ ಸಲ ಆತಂಕವನ್ನೇ ಹುಟ್ಟಿಸುತ್ತದೆ. ಶಿಸ್ತಿಗೂ ಮಿತಿ ಬೇಕು. ಮಕ್ಕಳಿಗೆ ಶ್ರಮದ ಬೆಲೆ ಗೊತ್ತಾಗಬೇಕು. ಹಾಗಾಗಿಯೇ ವಿಚಾರಕ್ಕೂ ವಿದ್ಯೆಗೂ ಅಂತರ ಹೆಚ್ಚಾಗುತ್ತಿದೆ ಎಂಬ ಗುಮಾನಿ ಸುಳ್ಳಲ್ಲ.

ಗಣೇಶ ಜೋಶಿ ಒಳ್ಳೆಯ ಅಧ್ಯಾಪಕರು, ಕ್ರಿಯಾಶೀಲ, ಹಾಗಂತ ಬಣ್ಣಬೇಗಡೆಗಳ ತಳಕು ಬೆಳಕಿನ ನಡೆಯವರಲ್ಲ. ಅವರ ಬರವಣಿಗೆಯಲ್ಲಿಯೂ ಅದನ್ನೇ ಕಾಣುತ್ತೇವೆ.

ಈ ಪುಸ್ತಕದಲ್ಲಿ ಒಂದು ಆತ್ಮೀಯ ನಿವೇದನೆ ಇದೆ, ಒಂದು ಸಾತ್ವಿಕ ವೇದನೆಯಿದೆ. ಸ್ನೇಹಿತನೊಬ್ಬನ ಮೃದು ಮಧುರ ಸಂದೇಶವಿದೆ. ಓರ್ವ ಪರಿಣತ ಶಿಕ್ಷಕನ ಮನದುಂಬುವ ಮಾತುಗಳಿವೆ. ಈ ಕಾರಣದಿಂದ ಈ ಕೃತಿ ತುಂಬಾ ಮಹತ್ವದ ಕೊಡುಗೆಯಾಗಿದೆ.

-ಡಾ. ಜಿ.ಎಲ್ ಹೆಗಡೆಯವರ ಮುನ್ನುಡಿಯಿಂದ

Rating This Book

Reviews

There are no reviews yet.

Be the first to review “ಅವಲೋಕನ”

Your email address will not be published. Required fields are marked *

Top Books