SKU: 9215

ಕಾವ್ಯ ಚಂದ್ರಿಕೆ

Original price was: ₹120.00.Current price is: ₹110.00.

Author : ರೇಣುಕಾ ಶಿವಕುಮಾರ

Publishers Name: HSRA ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ನನ್ನ “ಕಾವ್ಯ ಚಂದ್ರಿಕೆ”ಗೆ ನಿಮಗೆಲ್ಲ ನಲ್ಮೆಯ ಸ್ವಾಗತ. ಹಾಲಕ್ಕಿ ನುಡಿಯುವ ಯಾಲಕ್ಕಿ ಕಂಪಿನ ನಗರಿ ಹಾವೇರಿ ಜಿಲ್ಲೆಯ ಪುಟ್ಟ ಹಳ್ಳಿ ನನ್ನ ತವರೂರು .

ನಾನೊಬ್ಬಳು ಉತ್ತಮ ಗೃಹಿಣಿ,ಇತಿಹಾಸದಲ್ಲಿ ಸ್ನಾತ್ತಕೊತ್ತರ ಪದವೀಧರೆ , ಹಾಗೂ ಬಿಇಡಿ ಪದವೀಧರೆ,ಸ್ನೇಹಜೀವಿ ಕನಸುಗಾರ್ತಿ ,ಭಾವಜೀವಿ ,ಛಲಗಾರ್ತಿ. ನನಗೆ ಬರೆಯುವ ಗೀಳು ಮೊದಲಿಂದಲೂ ಇತ್ತು.ಅದೊಂದು
ಬಿಡಿಸಿಕೊಳ್ಳಲಾಗದ ಒಂದು ಆತ್ಮೀಯ ನಂಟು ಎಂದರೆ ತಪ್ಪಾಗಲಾರದು. ನನಗೆ
ಕಾಲೇಜು ದಿನಗಳಿಂದಲೂ ಮನದಲ್ಲಿ ಮೂಡಿದ ಭಾವಗಳನ್ನು ಆಗಾಗ ಬರೆಯುವದನ್ನ ಹವ್ಯಾಸವಾಗಿ ರೂಡಿಸಿಕೊಂಡಿದ್ದೆ.ಬರಹ ಎಂದರೆ ನನಗೆ ತುಂಬ ಇಷ್ಟದ ಕೆಲಸವಾಗಿತ್ತು ಲೇಖನಿ ಹಿಡಿದರೆ ಏನಾದರೂ ಗೀಚಬೇಕೆಂಬ ತವಕ ಮನದಲ್ಲಿ ಮೂಡುತ್ತಿತ್ತು.ನನ್ನ ಸುತ್ತಮುತ್ತಲಿನ ಪರಿಸರ, ವಾತಾವರಣ ,ಹಾಗೂ ಶಾಲಾ ಕಾಲೇಜುಗಳಲ್ಲಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದ ಅನೇಕ ಸುಂದರ ಪ್ರೇಕ್ಷಣಿಯ ಸ್ಥಳಗಳು ರಮಣೀಯ ಜಲಪಾತಗಳು ಪ್ಯಕೃತಿಯ ಸೊಬಗು ಕವಿತೆಗಳನ್ನ ಬರೆಯಲು ನನಗೆ ಪ್ರೇರಣೆಯಾಗಿದ್ದವು.

12 ನೇ ಶತಮಾನದ ಭಕ್ತಿ ಭಂಡಾರಿ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ವಿಶ್ವಗುರು, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ಬದುಕು, ತತ್ವ, ವಚನಗಳ ಸಂದೇಶ ನಿಜಕ್ಕೂ ನನಗೆ ಪ್ರೇರಣೆಯಾಗಿವೆ.

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ! ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ! ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ! ಇದಾವ ಪರಿಯಲ್ಲಿ ಕಾಡಿತ್ತು ಮಾಯೆ ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ, ನೀವೇ ಬಲ್ಲಿರಿ ಕೂಡಲಸಂಗಮದೇವಾ.

ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದು ಹಲವಾರು ಭಕ್ತರಿಗೆ ಮಾದರಿಯಾಗಿ
ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರಾಗಿ, ಹಾಗೂ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾದ ಅಕ್ಕಮಹಾದೇವಿಯ ಜೀವನ ಚರಿತ್ರೆಯನ್ನು ,ಹಾಗೂ ಅವರು ಬರೆದ ವಚನಗಳನ್ನು ಓದುತ್ತಿದ್ದೆ. ಕದಳಿಯ ಕರ್ಪುರ ಎಂಬ ಅಕ್ಕಮಹಾದೇವಿಯ ಜೀವನ ಚರಿತ್ರೆಯು ನನಗೆ ಸ್ಪೂರ್ತಿದಾಯಕ ಎಂದು ಹೇಳಲು ಎರೆಡು ಮಾತಿಲ್ಲ.

ಉದಾ: ‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನಸ್ಸು ಬೀಜ’,

‘ಬೆಟ್ಟದಾ ಮೇಲೊಂದು ಮನೆಯ ಮಾಡಿ , ಮೃಗಗಳಿಗೆ ಅಂಜಿದೊಡೆಂತಯ್ಯಾ’ ,

‘ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳಗಳುಂಟು’- ಮುಂತಾದ ವಚನಗಳು ಅವರ ಲೋಕಾನುಭವ, ಜ್ಞಾನ ಸಂಪನ್ನತೆ, ಅಭಿವ್ಯಕ್ತಿ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ.ಇದರಿಂದ ನನಗೆ ಕವಿತೆಗಳನ್ನು ಬರೆಯಲು ಸ್ಪೂರ್ತಿಯಾಯಿತು.ಹಾಗೂ
ಪ್ರತಿಭಾವಂತ ಕವಿಗಳಾದ ರಾಷ್ಟ್ರಕವಿ ಕುವೆಂಪು,ದ ರಾ ಬೇಂದ್ರೆ ,ನಿತ್ಯೋತ್ಸವ ಕವಿ ಕೆ ಎಸ್, ನಿಸಾರ್ ಅಹಮದ್ ಅವರ ಕವಿತೆಗಳನ್ನು ಹೆಚ್ಚು ಓದುತ್ತಿದ್ದೆ . ಇದರಿಂದ ನನಗೆ ಕವಿತೆಗಳನ್ನ
ಬರೆಯಲು ಸುಲಭವಾಯಿತು
.
ಬೇಂದ್ರೆ ಅಜ್ಜನು ಹೇಳಿದ ಹಾಗೆ “ ಕಾವ್ಯ ಅಂದರೆ ಓಂಕಾರದ ಶಂಖನಾದಕಿಂತ ಕಿಂಚಿದೂನ ಆನಂದ ನೀಡುವಂಥದ್ದು ”.ವೈಚಾರಿಕ ಮಂಥನ, ಆಸ್ವಾದನದ ಸಂತಸ, ಸಾಮಾಜಿಕ ಕಾಳಜಿ ಕಳಕಳಿ, ಜವಾಬ್ದಾರಿಯ ಸಂದೇಶ ಒಂದು ಉತ್ತಮ ಕಾವ್ಯದ ಲಕ್ಷಣ ಎಂದು ಹೇಳಿದ ಮಾತು ಸತ್ಯವಾದುದು.

*ಸಾವಿರಾರು ಕೋಟಿ ಒಡತಿಯಾಗಿದ್ದರೂ ಸರಳತೆ, ಸಜ್ಜನಿಕೆಯಿಂದ ಜನರ ಮನಸ್ಸಿಗೆ ಹತ್ತಿರವಾಗುತ್ತಾ ಆದರ್ಶ ವ್ಯಕ್ತಿ, ಸಮಾಜಸೇವಕಿ ,
ಬರಹಗಾರ್ತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ , ಸುಧಾಮೂರ್ತಿ ಅಮ್ಮನವರು ಬರೆದ ಅನೇಕ ಕಥಾ ಸಂಕಲನಗಳು ಡಾಲರ್‌ ಸೊಸೆ
ಕಾವೇರಿಯಿಂದ ಮೆಕಾಂಗಿಗೆ
ಋಣ
ಹಕ್ಕಿಯ ತೆರದಲಿ
ಗುಟ್ಟೊಂದ ಹೇಳುವೆ ..ಇಂತಹ ಪುಸ್ತಕಗಳು ನನಗೆ ಪ್ರೇರಣೆಯಾದವು.

ಸಂಸಾರವೆಂಬ ಜಂಜಾಟದಲ್ಲಿ ಎಷ್ಟೋ ವರುಷಗಳ ಕಾಲ ನನ್ನ ಬರವಣಿಗೆ ನಿಂತೇ ಹೋಗಿತ್ತು. ಕಲ್ಪನೆಯ ಸಮ್ರಾಜ್ಯದಲ್ಲೆಲ್ಲಾ ವಿಹರಿಸಿ ಭಾವದೈಸಿರಿಯ ಸವಿಯನ್ನು ಕವನದ ಮೂಲಕ ಮತ್ತೆ ವರ್ಣಿಸಬೇಕು.ಮತ್ತೆ ಬರಹದಲ್ಲಿ ತೃಪ್ತಿ /ಸಂತಸವನ್ನು ಕಾಣಬೇಕು ಅನ್ನುವ ತುಡಿತ ಹೆಚ್ಚಾಯಿತು.ನಿಂತಲ್ಲೇ ನಿಂತ ನೀರಾಗದೇ ನದಿಯ ಹಾಗೆ ಸದಾ ಹರಿಯಬೇಕು , ಅದಕ್ಕಾಗಿಯೇ ನನ್ನ ಪ್ರಯತ್ನ ನಿರಂತರವಾಗಿರಬೇಕೆಂಬುದು ನನ್ನ ಬಯಕೆ ಹೆಚ್ಚಾಯಿತು. ಮನಸ್ಸಿಗೆ ತೋಚಿದನ್ನ ಗೀಚಿ ಕವನದ ಶೀರ್ಷಿಕೆಯನ್ನ ಕೊಟ್ಟು ಬರೆದಿರುವೆ.ನನ್ನ ಚಿಕ್ಕ ಪ್ರಯತ್ನವನ್ನು ನಿಮ್ಮ ಮುಂದಿಡುತ್ತಿದ್ದೇನೆ.

“ಸಾಹಿತ್ಯವೆಂಬ ಸಮುದ್ರ”ದಲ್ಲಿ ಈಜಾಡುವ ಚಿಕ್ಕ ಮೀನು ನಾನು.ನನ್ನ ” ಕಾವ್ಯ ಚಂದ್ರಿಕೆ ” ಎಂಬ ಕವನ ಸಂಕಲನವು ನನ್ನ ಚೊಚ್ಚಲ ಕವನ ಸಂಕಲವಾಗಿದ್ದರಿಂದ , ನಿಮೆಲ್ಲರ ಸಹಕಾರ,ಪ್ರೋತ್ಸಾಹ,ಮಾರ್ಗದರ್ಶನ,
ಆಶಿರ್ವಾದ ನನಗೆ ಬೇಕು.ನಿಮ್ಮ ಅಭಿಪ್ರಾಯಗಳೇ ನನಗೆ ಇನ್ನೂ ಬರೆಯಲು,ಹಾಗೂ ಸುಧಾರಣೆ ಯಾಗಲು ಸಾಧ್ಯ ಮತ್ತು ಸ್ಪೂರ್ತಿ. ಏನಾದರೂ ತಪ್ಪಿದ್ದರೆ ಮನ್ನಿಸಿ,ಹರಸಿ ಹಾರೈಸಿರಿ

Rating This Book

Reviews

There are no reviews yet.

Be the first to review “ಕಾವ್ಯ ಚಂದ್ರಿಕೆ”

Your email address will not be published. Required fields are marked *

Top Books