ವಚನ ಮಂದಾರ
₹100.00
| Book Details |
|---|
| Author : ಸಿದ್ದು ಮೂಲಿಮನಿ |
| Publisher : ಪವನ ಪುತ್ರ ಪ್ರಕಾಶನ |
| Total Pages: 84 |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಬೀಳಗಿ ಮೂಲದವರಾದ ಕವಿ, ಲೇಖಕ ಸಿದ್ದು ಮೂಲಿಮನಿ ಅವರು ಬಾಗಲಕೋಟೆ ಜಿಲ್ಲೆಯ ಕ್ರಿಯಾಶೀಲ ಬರಹಗಾರರಲ್ಲೊಬ್ಬರು. ಸದಾ ನಗುಮುಖದ ಶ್ರೀಯುತರು ಬದುಕಿನಲ್ಲಿ ಆಧ್ಯಾತ್ಮದ ಒಲವನ್ನು ಬೆಳೆಸಿಕೊಂಡವರು. ಅಂತೆಯೇ ವಚನಕಾರರಾದ ಮಾದಾರ ಚೆನ್ನಯ್ಯ ಮತ್ತು ಮಾದಾರ ಧೂಳಯ್ಯನವರ ಸಂಕ್ಷಿಪ್ತ ಜೀವನ ದರ್ಶನ ಮಾಡಿಸಬಲ್ಲ ‘ವಚನ ಮಂದಾರ’ ಎಂಬ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡಮಾಡುತ್ತಿರುವುದು ಸಂತಸದ ಸಂಗತಿ. ಅಲಕ್ಷಿತ ವಚನಕಾರರ ಬಗ್ಗೆ ಸಾಮಾಜಿಕವಾಗಿ ಸರಿಯಾಗಿ ಗುರುತಿಸುವಿಕೆ ಆಗದೆ ಇರುವ ಸಂದರ್ಭದಲ್ಲಿ ಸರ್ಕಾರ ಇವರ ಜಯಂತಿಗಳ ಆಚರಣೆ ಮಾಡಲು ಆದೇಶ ಮಾಡಿದ್ದು ಹೆಮ್ಮೆ ಪಡುವ ಸಂದರ್ಭ. ಸಿದ್ದು ಮೂಲಿಮನಿಯವರು ಈ ವಚನಕಾರರ ಜೀವನ ದರ್ಶನ ಮಾಡಿಸಿಕೊಡಬಲ್ಲ ಹಾಗೂ ಇವರಿಂದ ರಚಿತವಾದ ವಚನಗಳ ಒಳಸತ್ವ ತಿಳಿಸಿ ಕೊಡುವ ಮೌಲಿಕ ಕೃತಿಯನ್ನು ನೀಡುತ್ತಿರುವುದು ತೀರ ಅಭಿಮಾನದ ಸಂಗತಿಯಾಗಿದೆ.
ಶರಣರ ಗಂಧದ ಬದುಕಿನ ಸುಂದರ ಕ್ಷಣಗಳ ತಿಳುವಳಿಕೆ ಇಂದಿನ ಹೊಸ ಪೀಳಿಗೆಗೆ ಆಗಬೇಕಾಗಿರುವ ಅಗತ್ಯತೆ ಬಹಳಷ್ಟು ಇದೆ. ಅದು ವಿಶೇಷವಾಗಿ ಕಾಯಕ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡು ದಾಸೋಹ ಪರಂಪರೆಯನ್ನು ನಿತ್ಯ ನಿಯಮ ವಾಗಿಸಿಕೊಂಡು ಮಾದರಿಯ ಬದುಕನ್ನು ನೀಡಿದವರು ಶರಣರು. ಅಂತಹ ಶರಣರ ವಚನಗಳು ನಮ್ಮ ಬದುಕಿಗೆ ಸೂಳ್ಳುಡಿಗಳು ನಿಜ, ಆದರೆ ಅವರು ನಡೆದು ಬಂದ ದಾರಿಯು ಹೊಸ ಪೀಳಿಗೆಗೆ ಸತ್ವರಂಪರೆಯ ಬೆಳಕಾಗಿ ನಿಲ್ಲಬೇಕಾಗಿದೆ. ಆ ನಿಟ್ಟಿನಲ್ಲಿ ಸಿದ್ದು ಮೂಲಿಮನಿಯವರು ರಚಿಸಿದ ಈ ಕೃತಿಯು ಓದುಗರಿಗೆ ಹಾಗೂ ಹೊಸ ಜನಾಂಗಕ್ಕೆ ದಾರಿದೀಪವಾಗಲಿಯೆಂದು ಮತ್ತು ಸಿದ್ದು ಮೂಲಿಮನಿಯವರಿಂದ ಇಂತಹ ಇನ್ನಷ್ಟು ಮೌಲಿಕ ಕೃತಿಗಳು ಪ್ರಕಟವಾಗಲೆಂದು ಆಶಿಸುವೆ.
ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ. ಬಾಗಲಕೋಟ


Reviews
There are no reviews yet.