SKU: 19260

ಸಂಕ್ರಾಂತಿ ಸುಂದರಿ

130.00

Book Details
Author : ಶ್ರೀಧರ ದೊಡಮನಿ
Publisher : ಅಕ್ಷರನಾದ ಪಬ್ಲಿಕೇಶನ್
Total Pages: 60

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ನನ್ನ ಪ್ರೀತಿಯ ಓದುಗರೇ, ನನ್ನ ಎರಡನೇ ಕವನ ಸಂಕಲನ ‘ಸಂಕ್ರಾಂತಿ ಸುಂದರಿ’ಯನ್ನು ನಿಮ್ಮ ಕೈಗಿಡಲು ಹೆಮ್ಮೆಯೆನಿಸುತ್ತಿದೆ. ಮೊದಲ ಪ್ರಯತ್ನ ‘ಹೃದಯದರಸಿ’ ಪುಸ್ತಕಕ್ಕೆ ದೊರೆತ ಪ್ರೀತಿಯ ನಂತರ, ಕಾವ್ಯದ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಇಡುತ್ತಿದ್ದೇನೆ. ಈ ಪುಸ್ತಕ ಬರೀ ಪುಟಗಳ ಸಂಗ್ರಹವಲ್ಲ, ನನ್ನ ಬದುಕಿನ ಹಾದಿಯಲ್ಲಿ ನಾನು ಕಂಡುಕೊಂಡ ಪ್ರೀತಿ, ವಿರಹ, ಒಲವು ಮತ್ತು ನಂಬಿಕೆಯ ಅಭಿವ್ಯಕ್ತಿ.

ಈ ಸಂಕಲನದಲ್ಲಿರುವ “ನನ್ನ ಒಲವು”, “ಒಲವಿನ ಆಗಮನ”, “ಒಲವಿನ ಲಹರಿ”, “ಒಲವಿನ ಸುಂದರಿ” ಮತ್ತು “ಒಲವಿನ ಹಾಡು” ಮುಂತಾದ ಕವಿತೆಗಳು, ಮಾನವೀಯ ಸಂಬಂಧಗಳ ಸೂಕ್ಷ್ಮತೆಯನ್ನು ಕಟ್ಟಿಕೊಡುತ್ತವೆ. ಪ್ರಕೃತಿಯ ಸೌಂದರ್ಯದೊಂದಿಗೆ ಬೆರೆತ ನನ್ನ ಒಲವಿನ ಅಭಿವ್ಯಕ್ತಿಗಳು, ಸರಳವಾದ ಭಾಷೆಯಲ್ಲಿ ಓದುಗರ ಮನಸ್ಸನ್ನು ತಟ್ಟುವ ಪ್ರಯತ್ನ ಮಾಡುತ್ತವೆ. ನಾನು ಈ ಕವಿತೆಗಳನ್ನು ಬರೆಯುವಾಗ ಎಷ್ಟು ಆಪ್ತವಾಗಿ ಅನುಭವಿಸಿದ್ದೇನೋ, ಅಷ್ಟೇ ಆಪ್ತವಾಗಿ ಓದುಗರಿಗೆ ತಲುಪಬೇಕೆಂಬುದು ನನ್ನ ಹಂಬಲ.

ಸಾಹಿತ್ಯದ ಹಾದಿಯಲ್ಲಿ ಸಾಗುವ ಈ ನನ್ನ ಸಣ್ಣ ಪ್ರಯತ್ನವು, ನಿಮ್ಮ ಬದುಕಿನ ಒಂದಷ್ಟು ಕ್ಷಣಗಳಿಗೆ ಸಾಥ್ ನೀಡಿದರೆ ನನ್ನ ಕಾವ್ಯದ ಸಾರ್ಥಕತೆ ಎನ್ನಬಹುದು. ಪ್ರತಿಯೊಬ್ಬ ಕವಿಗೆ ಓದುಗನೇ ನಿಜವಾದ ಬಲ. ನನ್ನ ಈ ಸಾಹಿತ್ಯಿಕ ಪಯಣದಲ್ಲಿ ನೀವು ಭಾಗಿಯಾಗಿ, ಈ ಕವನಗಳನ್ನು ಆಸ್ವಾದಿಸುತ್ತೀರಿ ಎಂಬ ಭರವಸೆ ನನ್ನದು. ಅಕ್ಷರಗಳ ಮೂಲಕ ನಿಮ್ಮೊಂದಿಗೆ ಸಂವಾದ ನಡೆಸಲು ನಾನು ಕಾತರನಾಗಿದ್ದೇನೆ. ಪ್ರೇಮ ಮತ್ತು ಭಾವನೆಗಳನ್ನು ಗೌರವಿಸುವ ಪ್ರತಿಯೊಬ್ಬರೂ ಈ ‘ಸಂಕ್ರಾಂತಿ ಸುಂದರಿ’ಯನ್ನು ನಿಮ್ಮದಾಗಿಸಿಕೊಳ್ಳಿ ಎಂದು ಆಹ್ವಾನಿಸುತ್ತೇನೆ.

Rating This Book

Reviews

There are no reviews yet.

Be the first to review “ಸಂಕ್ರಾಂತಿ ಸುಂದರಿ”

Your email address will not be published. Required fields are marked *

Top Books