SKU: 18706

ಜ್ಞಾನ ಬಿಂದಿಗೆ

150.00

Book Details
Author : ಶಿವಲೀಲಾ ಎಸ್ ಧನ್ನಾ
Publisher : ಸ್ನೇಹಾ ಪ್ರಕಾಶನ
Pages : 96

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

ಬೇಳಂದ ತಾಲೂಕಿನ ಜವಳಿ(ಡಿ) ಗ್ರಾಮದ ಶಿವಲೀಲಾ. ಎಸ್. ಧನ್ನಾ. ಇವರು ಬಮ್ಮಅಂಗೇಶ್ವರ ಮಠದ ಪರಮಶಿಷ್ಯರು. ಬದುಕಿನಲ್ಲಿ ಅನೇಕ ನೋವು ನಲವುಗಳನ್ನು ಅನುಭವಿಸಿ ಜೀವನವೇ ಸಾಕಪ್ಪ ಎನ್ನುವ ಇಕ್ಕಟ್ಟಿನ ಬಿಕ್ಕಟ್ಟಿನ ಪರಸ್ಥಿತಿಗಳನ್ನು ಎದುರಿಸಿ. ಸಮಾಜದಲ್ಲಿ ಒಂದು ಆದರ್ಶ ಬದುಕನ್ನು ರೂಪಿಸಿಕೊಳ್ಳಬೇಕೆಂದು ನಿರ್ಧರಿಸಿ. ಗುರುವಿನ ಆಶೀರ್ವಾದ ಪಡೆದುಕೊಂಡು ಅತ್ಮಸ್ಥೆರ್ಯದೊಂದಿಗೆ ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ಮತ್ತು ಅಧ್ಯಾತ್ಮದ ನೆಲೆಗಟ್ಟಿನಲ್ಲಿ ಕಾವ್ಯ ಸಾಹಿತ್ಯವನ್ನು ಬರೆಯಲಿಕ್ಕೆ ಪ್ರಾರಂಭಿಸಿದರು.

ಈ ಸದ್ಯ ಲೋಕಾರ್ಪಣೆಗೊಳ್ಳಲಿರುವ ಅವರು ರಚಿಸಿರುವ ಈ “ಜ್ಞಾನ ಬಿಂದಿಗೆ” ಎಂಬ ಸಂಪುಟದಲ್ಲಿರುವ ವಚನಗಳು ಇವು ಬೇರೇನು ಅಲ್ಲ ಅವರ ನಿತ್ಯ ಜೀವನದಲ್ಲಿ ಅನೇಕ ಪ್ರಸಂಗಗಳಲ್ಲಿ ಕಂಡುಂಡ ಅನುಭವದ ನುಡಿಗಳಾಗಿದ್ದು ಯುವ ಪೀಳಿಗೆಗಳಿಗೆ ಮಾರ್ಗಸೂಚಿ ಎಂಬಂತೆ ಬೌದ್ಧಿಕ, ಅಧ್ಯಾತ್ಮಿಕ, ದಾರ್ಶನಿಕ ಹಾಗೂ ನೈತಿಕ ಅನುಭವಗಳ ಸಂಕೀರ್ಣವಾಗಿದೆ. ಇಂತಹ ವಚನ ರಚನೆಯ ಸ್ಫೂರ್ತಿ ಅವರಲ್ಲಿ ಬರಬೇಕಾದರೆ ಇದೊಂದು ದೈವ ಕೃಪೆ. ಇವರ ವಚನಗಳಿಗೆ ಅಂಕಿತನಾಮ ಇಟ್ಟರುವ ಆ ಕಾರಣಿಕ ಗುರುಸಿದ್ದ ಬಮ್ಮಲಿಂಗೇಶ್ವರ ಅವರ ಕೃಪೆ ಅನ್ನಬಹುದು.

ಈ ಕೃತಿ ಎಲ್ಲ ಮನುಕುಲದ ಜೀವಿಗಳ ಆದರ್ಶ ಬದುಕಿಗೊಂದು ದಾರಿದೀಪವಾದ ವಚನ ಸಂಪುಟ. ಇನ್ನು ಹೆಚ್ಚು ಹೆಚ್ಚು ಸಮಾಜ ಮಾದರಿಯ ಜೀವನದ ಮೌಲ್ಯ ಕೂಡಿಕೊಂಡಿರುವ ನುಡಿ ನೈವಿದ್ಯವನ್ನೊಳಗೊಂಡ ಸಾಹಿತ್ಯ ಸೇವೆಯ ಕೃತಿಗಳು ರಚನೆ ಮಾಡುವ ಶಕ್ತಿ ಗುರುಸಿದ್ದ ಬಮ್ಮಲಿಂಗೇಶ್ವರ ಕರುಣಿಸಲಿ ಎಂದು ಈ ಸಾರಾಂಶದ ನುಡಿಗಳೊಂದಿಗೆ ಶುಭ ಹಾರೈಸುತಿದ್ದೇವೆ ಇತಿ ಶುಭಂ, ಇತ್ಯಾಶಿಕ್ಷಾ

ಪೂಜ್ಯ ಶ್ರೀ. ಷ. ಬ್ರ. ಶ್ರೀಕಂಠ ಶಿವಾಚಾರ್ಯ
ಮಹಾ ಸ್ವಾಮಿಗಳು

ಬಮ್ಮಲಿಂಗೇಶ್ವರ ಬೃಹನ್ಮರ
ನಾಗಣಸೂರ ರೇವೂರ್ ಜೇವೂರ
ನಾಗೂರ,ಪಂಜಗಿ, ಇಂಡಿ, ಸೋಲಾಪುರ ಹಾಗೂ
ಅಖಿಲ ಭಾರತ ವೀರಶೈವ ಅಂಗಾಯತ ಶಿವಾಚಾರ್ಯ ಸಂಸ್ಥೆಯ
ನೂತನ ರಾಷ್ಟ್ರೀಯ ಉಪಾಧ್ಯಕ್ಷರು

Rating This Book

Reviews

There are no reviews yet.

Be the first to review “ಜ್ಞಾನ ಬಿಂದಿಗೆ”

Your email address will not be published. Required fields are marked *

Top Books