+918310000414
contact@kannadabookpalace.com
+918310000414
contact@kannadabookpalace.com
₹120.00
| Book Details |
|---|
| Author : ಸಂಜಯ ಜಿ. ಕುರಣೆ |
| Publisher : ಕುರಣೆ ಪ್ರಕಾಶನ |
| Pages : 88 |
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಅಕ್ಷರ ಪೊನಿಸಿ ಅಂದವಾದ ಸಾಹಿತ್ಯ ಮಾಲೆ ತಯಾರಾಗುವುದು ಭಾವಜೀವಿಯಿಂದ ಮಾತ್ರ ಸಾಧ್ಯ. ಕೇವಲ ಅಕ್ಷರಗಳ ಗುಂಪು ಓದುಗರನ್ನು ಸೃಷ್ಟಿ ಮಾಡುವುದಿಲ್ಲ.ಮತ್ತೆ ಮತ್ತೆ ಓದಲು ಹಚ್ಚುವ ಅನುಭವಜನ್ಯ ಅಕ್ಷರಗಳನ್ನು ನಾವು ಎಲ್ಲರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಂತಹ ಸುಂದರ ಸಾಮಾಜಿಕ ಚಿತ್ರಣದ, ವಾಸ್ತವದಲ್ಲಿ ಓದುಗರ ಮನಸ್ಸಿಗೆ ತಾಗಿ, ಸದಾ ಕಾಲ ಉಳಿಯುವ, ಮೆಲುಕು ಹಾಕುವ ಸಾಹಿತ್ಯ ರಚನೆ ಕೆಲವರಿಗೆ ಮಾತ್ರ ಸಾಧ್ಯ. ಅಂತವರಲ್ಲಿ ಕವಿ ಸಾಹಿತಿ ಸರಳ ಸಜ್ಜನಿಕೆಯ ಶ್ರೀ ಸಂಜಯ ಗೋಪಾಲ ಕುರಣಿ ಅವರೂ ಒಬ್ಬರು.
ಮೂಲತಃ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಸುಂದರ ಗ್ರಾಮ ಕೃಷ್ಣ ಕಿತ್ತೂರ್ ಗ್ರಾಮದವರಾದ ಶ್ರೀಯುತರು ಸದ್ಯ ಸದ್ಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಐನಾಪುರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಂದಿನಿಂದಲೂ ಸಾಹಿತ್ಯದ ಅಪಾರ ಅಭಿರುಚಿ ಹೊಂದಿರುವ ಸಂಜಯ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಭೀಮ ಜ್ಯೋತಿ, ಶಿಕ್ಷಣವೇ ಶಕ್ತಿ, ಬೆಳದಿಂಗಳ ಚಂದ್ರ, ಅನೇಕ ಸಾಹಿತ್ಯ ಪ್ರಶಸ್ತಿಗಳನ್ನು ಗಳಿಸಿವೆ. ಶ್ರೀಯುತರು ಹಲವಾರು ಮೇರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಪ್ರಸ್ತುತ ಕಾದಂಬರಿಯಲ್ಲಿ ಬಡವರ ಬೆವರಿನ ಫಲ ಎಷ್ಟು ಸಿಹಿಯಾಗಿರುತ್ತದೆ ಎಂಬುದರ ಕುರಿತಾಗಿದೆ. ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಗ್ರಾಮೀಣ ಜನರ ಜೀವನಮಟ್ಟ, ಅನಕ್ಷರತೆ, ಬಡತನ ಯಾವ ರೀತಿಯಾಗಿ ಸಾಧನೆಗೆ, ಪ್ರತಿಭೆಗೆ ಅಡೆತಡೆ ಉಂಟುಮಾಡುತ್ತದೆ. ಹಾಗೂ ಇದನ್ನೆಲ್ಲ ಮೀರಿ ಹಳ್ಳಿ ಪ್ರತಿಭೆಗಳು ಆತ್ಮಸ್ಥೆರ್ಯದಿಂದ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಹಾಗೂ ಅದಕ್ಕೆ ಸಿಗುವ ಗೌರವ ಎಂತಹುದು ಎಂಬುದನ್ನ ಈ ಕಾದಂಬರಿಯ ಪ್ರಶಾಂತ್ ಎಂಬ ಬಾಲಕನ ಸಾಧನೆ ರೂಪದಲ್ಲಿ ತಿಳಿಸಿದ್ದಾರೆ.
ಹಸಿವು ಬಡತನ ಸಾಮಾಜಿಕ ಕ್ರೌರ್ಯ ಎಲ್ಲವನ್ನೂ ಮೆಟ್ಟಿ ನಿಲ್ಲುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ ಸಾಧ್ಯ ಎಂಬುದನ್ನು ಚೆನ್ನಾಗಿ ನಿರೂಪಿಸಿದ್ದಾರೆ. ದೇಶದ ಮೂಲ ಬೇರು ಬುದ್ಧ, ತೇರು ಬಸವ, ಹಾಗೂ ಭೀಮ ಭಾರತದ ವಾಸ್ತವ ಬಿಚ್ಚಿಟ್ಟಿದ್ದಾರೆ. ಭೀಮ ಭಾರತಕ್ಕೆ ಬುದ್ಧನೇ ಕಂದೀಲು ಎಂಬ ನೈಜ ಸತ್ಯವನ್ನು ಒತ್ತಿ ಹೇಳಿದ್ದಾರೆ. ನಿಜಕ್ಕೂ ಇವರ ಕಾದಂಬರಿ ಓದುಗರ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ. ಶ್ರೀಯುತ ಸಂಜಯ ಕುರಣಿ ಅವರಿಗೆ ಒಳ್ಳೆಯದಾಗಲಿ. ಎಲ್ಲರೂ ಓದಿ ಪ್ರೋತ್ಸಾಹ ನೀಡೋಣ. ಸದಾ ಬರೆಯುತ್ತಾ ಇರಿ.
ಇಂತಿ ನಿಮ್ಮವ
ಎಸ್. ಎಂ. ಲೋಕನ್ನವರ
ಅಧ್ಯಕ್ಷರು ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘ, ಚಿಕ್ಕೋಡಿ ಪ್ರಧಾನ ಗುರುಗಳು ಕೆ.ಎಚ್.ಪಿ.ಎಸ್. ಗೋಸಬಾಳ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.