SKU: 18629

Hallu muri

Original price was: ₹150.00.Current price is: ₹140.00.

Book Details
Author : Mahantesh Beragannavara
Publisher : Sahitya Prakashana
Pages : 96

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

ಹತ್ತು ಬರೆದು ಹೊತ್ತು ಮಾರುವದಕ್ಕಿಂತ ಮುತ್ತಿನಂತಹದು ಒಂದು ಬರೆದು ಜನರ ಮನೆ ಮನದ ಮಾತಾಗಬೇಕೆಂದು ಹೊರಟಿರುವ ಬಂಡಾಯದ ಕವಿ ಮಹಾಂತೇಶ ಬೇರಗಣ್ಣವರು.

ಮಾನವನು ದಾನವನಾಗಿ ಆಸ್ತಿಕತೆಯ ಸೀಮೆಯನ್ನು ದಾಟಿ. ನಾಸ್ತಿಕತೆಯ ನರಕದತ್ತ ಸಾಗುತ್ತಿರುವ ಇಂದಿನ ಘಾತುಕವಾದ ವಿಚಿತ್ರ ಕಾಲಘಟ್ಟದಲ್ಲಿ. ಮಾನವನ ಮನಸ್ಸಿನ ಶಾಂತಿ ಕಳಚಿ ಬೀಳುವುದಲ್ಲದೆ,ತನ್ನ ಮನಸ್ಸಿನ ಮೌಲ್ಯವನ್ನು ಕೂಡ ಕಳೆದುಕೊಳ್ಳುತ್ತಿದೆ. ಸತ್ಯ, ಧರ್ಮ, ಆಚಾರ ವಿಚಾರ, ನೀತಿ ನಡವಳಿಕೆ ನೆಲಗಚ್ಚುತ್ತಿವೆ. ಅನೀತಿ, ಅತ್ಯಾಚಾರ, ಭ್ರಷ್ಟಾಚಾರ ಪೊಳ್ಳು-ಸುಳ್ಳುಗಳೇ ಸಾಮ್ರಾಜ್ಯವಾಳುತ್ತಿವೆ. ಮುಖವಾಡ ಧರಿಸಿಕೊಂಡು ಗೋಮುಖ ವ್ಯಾಘ್ರದಂತಿರುವ ಜನಗಳ ಹಗಲು ವೇಷ. ಭೂತಾಯಿಗೆ ಬೆವರಹರಿಸುವ ರೈತ ಪ್ರತಿನಿತ್ಯ ಕುಡಿಯುವನೊಬ್ಬ ಸಾಲಕ್ಕಾಗಿ ವಿಷ. ಇಂತಹ ಅಂಧಕಾರದ ಕಗ್ಗತ್ತಲಿನಲ್ಲಿ ಸಹೋದರನ ಕಣ್ಣಿಗೆ ಕಂಡದ್ದು ಕಳ್ಳರ ಬಾಯಲ್ಲಿ ಗಾಂಧೀಜಿಯ ತತ್ವಾದರ್ಶಗಳು. ಭ್ರಷ್ಟರ ತಿರಗಳ ಮೇಲೆ ರಾಜನೀತಿಯ ಕಿರೀಟ, ಕಳ್ಳ ಸ್ವಾಮೀಜಗಳ ಪರದೆ ಹಿಂದಿನ ಆಟ. ಹೊಟ್ಟೆ ತುಂಬಿದವನಿಗೆ ಮೃಷ್ಟಾನ್ನ ಭೋಜನ, ಅರ್ಥವಿಲ್ಲದ ರಾಜಕೀಯ ಕೂಟವೇ ವಿಜೃಂಭಿಸುವಾಗ ಪ್ರಸ್ತುತ ಸಮಾಜದ ವಿದ್ಯಮಾನಗಳ ವ್ಯಥೆಯು ಈ “ಹಲ್ಲುಮುದಿ” ಎಂಬ ಭಾವ ಬಿತ್ತಿಯ ಹೊತ್ತಿಗೆಯಲ್ಲಿ ತೋಡಿಕೊಂಡಿದ್ದಾರೆ.

ಕವಿಯ ಭಾವನಾತ್ಮಕ ನುಡಿ ನೈವೇದ್ಯದ ಅಕ್ಷರ ಪ್ರಣತೆಯಲ್ಲಿ ಸೋಲು-ಗೆಲುವು, ನೋವು-ನಲಿವು, ದ್ವೇಷ ಆಕ್ರೋಶ, ಮಾನ ಅಪಮಾನ ಅಷ್ಟೇ ಅಲ್ಲದೆ ಕೆಂಡದುಂಡೆಯ ಮುಂದೆ ಬೆಳಕೆಂಬ ಕೂಸಿನ ಆಟದಂತೆ ಕಟು ಸತ್ಯ, ಕಠೋರ ವಾಸ್ತವ ಮತ್ತು ನಮ್ಮ ನಿಮ್ಮೆಲ್ಲರ ಸ್ಥಾನುಭವ ತಲೆ ತಲೆಮಾರುಗಳ ಲೋಕಾನುಭವ ತುಂಬಿ ತುಳುಕುತ್ತ. ಒಳಗಣ ಸತ್ಯ ಹೊರಗಣ ಮಹತ್ವ ಏಕೀಕರಣದ ತಾತ್ವಿಕ ಹೂರಣ. ಅಕ್ಷರ ರಾಕ್ಷಸ ಬೇರಗಣ್ಣವರ ಬಂಡಾಯದ ರಕ್ತ ಕುದಿಯುವ ಕಾವ್ಯದ ತಾಲಮು ಮಾರ್ಧನಿಸುತ್ತದೆ. ಒಂದೊಂದು ಪದಗಳಲ್ಲಿಯೂ ಭೋರ್ಗರೆಯುವ ಸತ್ಯ

ಸಹೋದರರ ಬರಹಗಳು ಕಾಲ್ಪನಿಕ ಕಥೆಗೆ ಮುನ್ನುಡಿಯಾಗದೆ, ನೈಜತೆಯನ್ನು ಎತ್ತಿ ತೋರಿಸುವ ಕೈಗನ್ನಡಿಯಾಗಿದೆ. ಉತ್ತಮ ಸಾಹಿತ್ಯ ರಚನೆಯಿಂದ ಸಮಾಜವನ್ನು ಒಳ್ಳೆಯ ಮಾರ್ಗದೆಡೆಗೆ ಕೊಂಡೊಯ್ಯಬಹುದು.ಈ”ಹಲ್ಲುಮುರಿ”ಕೃತಿಯಲ್ಲಿರುವ ಸಾಲುಗಳು ಕವಿತೆಗಳಲ್ಲ. ಸಮಾಜಕ್ಕೆ ನೀಡಿರುವ ಜನಜಾಗೃತಿಯ ಕಹಳೆಯಾಗಿದೆ. ಇವರ ಜಾಗತೀಕರಣದ ಜಾಗಟೆಯಿಂದ ಸಮಾಜ ಒಂದಿಷ್ಟು ಜಾಗೃತವಾದರೆ ಸಾಕು ಎಂಬುದೇ ಕವಿಯ ಆಶಯ…

ಶಿವಲೀಲಾ ಎಸ್. ಧನ್ನಾ ಜವಳಿ (ಡಿ) ಲೇಖಕಿ. ಜಿಲ್ಲಾ ಕಲ್ಬುರ್ಗಿ

Rating This Book

Reviews

There are no reviews yet.

Be the first to review “Hallu muri”

Your email address will not be published. Required fields are marked *

Top Books

Jnanabharathi – 1

Original price was: ₹250.00.Current price is: ₹230.00.