+918310000414
contact@kannadabookpalace.com
+918310000414
contact@kannadabookpalace.com
₹130.00
Book Deatils |
---|
Author : Jayadevi Gayakwad |
Publisher : Sapna Book House |
ISBN : 139789354569258 |
Language : Kannada |
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ವ್ಯಾಪಾರೋದ್ಯಮಕ್ಕೆ ಪ್ರಶಸ್ತ ನಗರವೆಂದು ಭಾರತದ ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ವ್ಯವಹಾರ ಚಾತುರ್ಯದಿಂದ ಕೋಟಿಗಟ್ಟಲೆ ಸಂಪಾದಿಸಿದರೂ ಕನ್ನಡ ಸಂಸ್ಕೃತಿಯ ಮುಖ್ಯವಾಹಿನಿಯಲ್ಲಿ ಬೆರೆಯದೆ ದ್ವೀಪಗಳಾಗಿ ಉಳಿದವರ ನಡುವೆ ಸುರೇಶ್ ಷಾ ಕುಟುಂಬ ಭಿನ್ನವಾಗಿ ನಿಂತು, ಕನ್ನಡಿಗರು ಹೆಮ್ಮೆಪಡುವ ಕೆಲಸ ಮಾಡಿದೆ. 57 ವರ್ಷಗಳ ಹಿಂದೆ ದೂರದೃಷ್ಟಿಯ ಕನಸಿನ ಫಲವೆಂಬಂತೆ ಗಾಂಧಿನಗರದಲ್ಲಿ ನೆಟ್ಟ ‘ಸಪ್ನ ಬುಕ್ ಹೌಸ್’ ಎಂಬ ಸಸಿ ಈಗ ಹಲವರಿಗೆ ಆಸರೆಯಾಗುವ, ನೆರಳು ನೀಡುವ ಮಹಾವೃಕ್ಷವಾಗಿ ಮುಗಿಲೆತ್ತರಕ್ಕೆ ಬೆಳೆದಿದೆ. ಬೆಂಗಳೂರಿನಲ್ಲಿ ಹತ್ತು ಶಾಖೆಗಳು ಸೇರಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸುಸಜ್ಜಿತವಾದ ಮಳಿಗೆಗಳನ್ನು ತೆರೆದು, ಹೊರರಾಜ್ಯದ ತಮಿಳುನಾಡಿನಲ್ಲಿ ಮೂರು ಶಾಖೆಗಳನ್ನು ಮತ್ತು ನವದೆಹಲಿಯಲ್ಲಿ ಶಾಖಾ ಕಛೇರಿಯನ್ನು ತೆರೆದಿರುವುದು ಹೆಮ್ಮೆಯ ಸಂಗತಿ. ಮಾರಾಟ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ‘ಸಪ್ಪ’ ಮಳಿಗೆಗಳಿಗೆ ಭೇಟಿ ನೀಡುವುದೆಂದರೆ ಒಂದು ಪುಸ್ತಕೋತ್ಸವದಲ್ಲಿ ಭಾಗವಹಿಸಿದ ಸಂತೋಷವನ್ನು ಅನುಭವಿಸಿದಂತೆ. ಒಂದೇ ಸೂರಿನಡಿ ಎಷ್ಟು ವೈವಿಧ್ಯಮಯವಾದ ಪುಸ್ತಕಗಳು.! ಪುಸ್ತಕಪ್ರೇಮಿಗಳ ಅಭಿರುಚಿ ತಣಿಸುವ ಹಲವು ಪ್ರಕಾರದ ಪುಸ್ತಕಗಳು, ಅಲ್ಲಿ ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿರುವುದನ್ನು ನೋಡುವುದೇ ಕಣ್ಣನಗಳಿಗೆ ಹಬ್ಬ.
ಲೇಖಕರು, ಓದುಗರು, ಮಾರಾಟಗಾರರು, ಮುದ್ರಕರು, ಪ್ರಕಾಶಕರ ಸಮಾಗಮದಂತೆ ಕಾಣುವ ‘ಕನ್ನಡ ರಾಜ್ಯೋತ್ಸವ ಪುಸ್ತಕ ಹಬ್ಬ’ದ ಪರಿಕಲ್ಪನೆ, ಆಚರಣೆ ‘ಸಪ್ಪ’ ವೈಶಿಷ್ಟ್ಯಗಳಲ್ಲಿ ಅತ್ಯಂತ ಜನಪ್ರಿಯವಾದುದು. ಕನ್ನಡ ಪುಸ್ತಕ ಸಂಸ್ಕೃತಿಯ ಹಿರಿಮೆಯನ್ನು ಅನನ್ಯ ಎನಿಸುವಂತೆ ಔನ್ನತ್ಯಕ್ಕೇರಿಸಿರುವ ಸುರೇಶ್ ಷಾ ಅವರಿಗೆ ಕರ್ನಾಟಕ ಸರ್ಕಾರ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಭಾರತದ ಅತಿದೊಡ್ಡ ಪುಸ್ತಕ ಭಂಡಾರವೆಂದು ‘ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್’ ಹಾಗೂ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ದಾಖಲೆಯಲ್ಲೂ ಪುಸ್ತಕಪ್ರಿಯ ಕನ್ನಡಿಗರ ಹೃದಯ ಸಿಂಹಾಸನದಲ್ಲೂ ಸ್ಥಾನ ಪಡೆದುಕೊಂಡಿರುವ ‘ಸಪ್ನ ಬುಕ್ ಹೌಸ್’ ನಮ್ಮೆಲ್ಲರ ಹೆಮ್ಮೆ.
ಸಿರಿಗನ್ನಡ ಗೆಲ್ಲಲಿ, ಪುಸ್ತಕ ಸಂಸ್ಕೃತಿ ಹಬ್ಬಲಿ.
ಡಾ. ಬೈರಮಂಗಲ ರಾಮೇಗೌಡ
ಅಧ್ಯಕ್ಷರು,
ಬಿ.ಎಂ.ಶ್ರೀ. ಪ್ರತಿಷ್ಠಾನ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.