ಹೆತ್ತು ಹೊತ್ತು ನಮ್ಮನು ಸಾಕಿದವಳೆ
ನೀನಿದ್ದರೆ ಜೀವನಕೊಂದು ಜೀವಕಳೆ
ನೀನೆಂದರೆ ತ್ಯಾಗ ಸಹನೆಯ ಹೊಳೆ
ತೊಳೆಯುವೆ ಮನಸಿನ ಕಹಿಕೊಳೆ
ಹಸಿವಿಂದ ಕೂಗಿದರೂ ನಿನ್ನೊಡಲು
ಕುಡಿಗಳ ಹಸಿವು ನೀಗಿದವಳು
ಎಲ್ಲದರಲ್ಲೂ ನೀ ಮುನ್ನುಗ್ಗುವಳು
ಪ್ರತಿಯೊಂದನ್ನೂ ಗೆದ್ದು ಸಾಧಿಸಬಲ್ಲವಳು
ನಿನ್ನ ಆಗಮನದಿಂದ ಮನಸಿಗೆ ಸಂಚಲನ
ನಿನ್ನ ನಿರ್ಗಮನದಿಂದ ನೋವುಗಳ ಸಂಕಲನ
ನಿನ್ನ ಮುಗುಳ್ನಗೆಯಿಂದ ಜಗಕೆ ಸಿರಿತನ,
ನಿನ್ನ ಕಣ್ಣೀರು ನಮಗೆ ಶಾಪ ಶೋಕಾಚರಣ.
ನೀನೊಂದು ಅಪರೂಪದ ಸೋಜಿಗ,
ಎಳೆಯುವೆ ಸಂಸಾರದ ನೊಗ,
ನಡೆಸುವೆ ಬದುಕೆಂಬ ಹಡಗ,
ನಿನಗೆ ನಮಿಸಿದರೆ ಉಳಿವುದು ಈ ಜಗ.
ನೀನೆಂದರೆ ನೋವ ನುಂಗುವ ಅರಸಿ,
ಮನದ ಚಿಂತೆ ತೋರದ ಮಾನಸಿ,
ಓ ಮೂಢರೇ ತಾಯಿಯನ್ನು ಗೌರವಿಸಿ,
ತಾಯಿ ಮನದ ಭಾವವ ಕೊಲ್ಲದೇ ಉಳಿಸಿ..
ಅಕ್ಕಮಹಾದೇವಿ ರಾಜು ಪಾಟೀಲ
ಶಿಕ್ಷಕಿಯರು
ಧಾರವಾಡ
9164718277