SKU: 17848

ಕೊಡಲಿ ಕಾವು

180.00

Book Details
Author : ಚಿರಂಜೀವಿ ರೋಡಕರ್
Publisher : ಉಜ್ವಲ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

‘ಕಥೆ’ ಎನ್ನುವುದು ಒಂದು ಸೃಜನಶೀಲ ವಿಸ್ಮಯ ಅದು ಕಥೆಗಾರನ ಮನಸ್ಸಿನೊಳಗೆ ಹೀಗೆ ಹುಟ್ಟಿ. ಹೀಗೆ ಬೆಳೆದು ಕಥೆಯ ರೂಪ ಪಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಕಥೆಗಾರನಿಗೆ ತಾನಿರುವ ಪರಿಸರದಲ್ಲಿರುವ ಘಟನೆ. ವಸ್ತು, ಪಾತ್ರ ಹಾಗೂ ಸನ್ನಿವೇಶಗಳನ್ನು ಕಥೆಯೊಳಗೆ ತರುವುದು ಸುಲಭದ ಕೆಲಸವೇನೂ ಅಲ್ಲ..

“ದೇವರು, ದೈವ, ನಂಬಿಕೆ, ಮತ್ತು ಆಚರಣೆಯ ವಿಚಾರದಲ್ಲಿ ಇಡಿಯಾಗಿ ಆ ಊರಿನ ವ್ಯವಸ್ಥೆಯನ್ನು ಆವರಿಸಿರುವ ಮೂಢನಂಬಿಕೆ ಎಂದೇ ಹೇಳಬೇಕು! ಆ ಮೂಢನಂಬಿಕೆಯೇ ರತ್ನಮ್ಮನನ್ನು ತನ್ನ ಮಗಳು ಕುಸುಮ ದೊಡ್ಡವಳಾದ ವಿಚಾರವನ್ನು ಮುಚ್ಚಿಡುವಂತೆ ಮಾಡಿ. ಆಕೆಯ ಮದಿವಿಯನ್ನು ಮುಂದೂಡತ್ತ ಬರುತ್ತದೆ. ಅದೇ ಕುಸುಮಳ ಕುರಿತು ಊರ ಪಡ್ಡೆ ಹುಡುಗರಲ್ಲಿ ಆಸೆ ಹುಟ್ಟುವಂತೆ ಮಾಡುತ್ತದೆ! ಕೊನೆಗೆ ಈ ಎಲ್ಲ ಕ್ರಿಯೆಗಳೇ ಆಕೆಯ ಕೊಲೆಗೆ ಕಾರಣವಾಗುತ್ತದೆ. ಆದರೆ ಕುಸುಮಳ ಕೊಲೆಯನ್ನು ಯಾರು ಮಾಡಿದರು? ಎಂಬ ಊಹೆಯನ್ನು ಕಥೆಗಾರ ಓದುಗನಿಗೆ ಬಿಡುವಲ್ಲಿಗೆ ಇಡಿಯಾಗಿ ವ್ಯವಸ್ಥೆಯ ವಿರುದ್ಧ ದಿಕ್ಕಾರ ಕೂಗುವಂತೆ ಮಾಡುತ್ತಾನೆ…” ‘ಕುಸುಮ’ ಕತೆಯಿಂದ ಯುವ ಕಥೆಗಾರ ಚಿರಂಜೀವಿ ರೋಡಕರ್ ಅವರಿಗೆ ಬರವಣಿಗೆಯಲ್ಲಿ ಅಪಾರವಾದ ಆಸಕ್ತಿಯಿದೆ. ಕಥೆ ಬರೆಯಬೇಕೆಂಬ ಹುಮ್ಮಸ್ಸು ಇದೆ. ಹೀಗಾಗಿ ಅವರು ಹೆಚ್ಚೆಚ್ಚು ಕಥೆಗಳನ್ನು ಓದಿಕೊಂಡು ಭವಿಷ್ಯದಲ್ಲಿ ಉತ್ತಮವಾದ ಕಥೆಗಳನ್ನು ಬರೆಯಬಲ್ಲರು ಎಂಬುದನ್ನು ಈ ಕಥೆಗಳು ಸಾಕ್ಷೀಕರಿಸುತ್ತವೆ. ಅದರಂತೆ ಮುಂದಿನ ದಿನಗಳಲ್ಲಿ ಚಿರಂಜೀವಿ ರೋಡಕರ್ ಅವರು ಚಿಂತನೆಗೀಡು ಮಾಡುವಂಥ ಮತ್ತಷ್ಟು ಕಥೆಗಳನ್ನು ಬರೆಯಬಲ್ಲರು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು ಚಿರಂಜೀವಿ ರೋಡಕರ್ ಅವರಿಗೆ ಎಲ್ಲ ರೀತಿಯಲ್ಲಿ ಒಳ್ಳೆಯದಾಗಲಿ.

Rating This Book

Reviews

There are no reviews yet.

Be the first to review “ಕೊಡಲಿ ಕಾವು”

Your email address will not be published. Required fields are marked *

Top Books