ಭೂಮಿ ತೂಕದಾಕೆ
₹200.00
ಮನೆ ಮನ ಗೆದ್ದವಳು
| Book Details |
|---|
| ಪ್ರಧಾನ ಸಂಪಾದಕರು : ಶ್ರೀಮತಿ ಚಂದ್ರಕಲಾ ಎಂ ಇಟಗಿಮಠ |
| ಸಹ ಸಂಪಾದಕರು : ಶ್ರೀ ಮಹಾಂತೇಶ ಬೇರಗಣ್ಣವರ, |
| ಸಹ ಸಂಪಾದಕರು : ಶಿವಲೀಲಾ ಎಸ್ ಧನ್ನಾ |
| Publisher : ಕಪ್ಪತ್ತಗಿರಿ ಪ್ರಕಾಶನ |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಎದುರಿಗೆ ಬಂದಾಗ
ಅವಳ ಎದೆ ನೋಡಬೇಡಿ ನಿಮ್ಮ ತಾಯಿಯ ಎದೆಹಾಲು
ಕುಡಿದದ್ದನ್ನೊಮ್ಮೆ ನೆನಪಿಸಿಕೊಳ್ಳಿ
ಒಂದುಕ್ಷಣ ಎದೆಯೊಳಗೆ ಚೂರಿಯಾಡಿಸುವ ಅನುಭವವಾಗದಿದ್ದರೆ ನಾವು ಮನುಷ್ಯರಾಗಿ ಹುಟ್ಟಿದ್ದಕ್ಕೆ ಅರ್ಥವಿಲ್ಲ. ಸುಮಾರು ನೂರಾನಲವತ್ತು ಕವಿಗಳು ರಾಜ್ಯದ ಮೂಲೆಮೂಲೆಯಿಂದಲೂ ಹೆಣ್ಣಿನ ಕುರಿತು ಬರೆದಿರುವ ಕವನಗಳನ್ನು ಸಂಪಾದಿಸಿ ಸಂಕಲಿಸಿದ್ದಾರೆ. ಇದೊಂದು ಗಮನಾರ್ಹವಾದ ಕೆಲಸ. ಹೆಣ್ಣು ತಾಯಿಯಾಗಷ್ಟೇ ಅಲ್ಲ, ಹೆಂಡತಿಯಾಗಿ, ಪ್ರೇಯಸಿಯಾಗಿ, ಸಹೋದರಿಯಾಗಿ, ಮಗಳಾಗಿ ಜೀವನದ ಹಲವು ಸಂಬಂಧಗಳಲ್ಲಿ ನಿಂತು ನಮ್ಮ ಬಾಳು ಬೆಳಗಿದ್ದಾಳೆ. ಸಹನೆ ತೋರಿದ್ದಾಳೆ. ನೂರಾವೊಂದು ತಪ್ಪಿಗೆ ಸುದರ್ಶನ ಚಕ್ರ ಹಿಡಿದು ತರಿದು ಹಾಕುವ ಬದಲು ಎಲ್ಲ ತಪ್ಪುಗಳನ್ನು ಸಹಿಸಿ ಒಪ್ಪಿಕೊಂಡಿದ್ದಾಳೆ. ಹೆಸರೇ ಇರದ ಸಂಬಂಧದಲ್ಲೂ ಅವಳು ತೋರುವ ಘನತೆ ಅಪಾರ. ಸಂಬಂಧವನ್ನು ಉಳಿಸಿಕೊಳ್ಳಲು ಸದಾ ಶ್ರಮಿಸುವ ಹೆಣ್ಣಿನ ಪ್ರೇಮ ಜಗದ ಕಣ್ಣಿಗೆ ಯಾವತ್ತೂ ವ್ಯಭಿಚಾರಿಯಾಗಿ ಕಾಣುತ್ತಾಳೆ.
ಇಲ್ಲಿನ ಹೆಚ್ಚಿನ ಕವಿತೆಗಳಲ್ಲಿ ಅಮ್ಮನಿದ್ದಾಳೆ. ಕೆಲವು ಕವಿತೆಗಳು ಹೆಣ್ಣಿನ ಸಮಗ್ರ ಚಿತ್ರಣ ನೀಡಿವೆ. ಹೆಣ್ಣಿನ ಎಲ್ಲ ಮುಖಗಳನ್ನು ಸಶಕ್ತವಾಗಿ ಕಟ್ಟಿಕೊಡುವ ಕವಿತೆಗಳಿವೆ.
ಹಮ್ಮು ಬಿಮ್ಮು ಗರ್ವ ಎಲ್ಲ ಕಳೆದು ಹೋಗಿದೆ ನಾನು ಹೆಣ್ಣೆಂದು ಮನವರಿಕೆಯಾದ ದಿನದಿಂದ
ಎನ್ನುವ ಸಾಲುಗಳು ನಮ್ಮನ್ನು ಕಲಕುತ್ತವೆ. ಎಲ್ಲ ಕಿರೀಟಗಳನ್ನಷ್ಟೇ ಅಲ್ಲ. ಮನ ನೋಯಿಸಿಸುವ ಎಲ್ಲ ತೆಗಳಿಕೆ, ಆಪಾದನೆ ಗಳನ್ನು ಕಳೆದುಕೊಂಡು ಬರಿಯ ಹೆಣ್ಣೆಂದು ಉಳಿಯುವ ದಿನ ಬರಲಿ ಎಂಬುದು ಈ ಭೂಮಿ ತೂಕದಾಕೆಗೆ ನನ್ನ ಹಾರೈಕೆ.
ಶ್ರೀಮತಿ ಶ್ರೀದೇವಿ ಕೆರೆಮನೆ
ಸಾಹಿತಿಗಳು ಅಂಕಣ ಬರಹಗಾರರು
ಸೂರ್ವೆ, ಅಂಕೋಲಾ




Reviews
There are no reviews yet.