+918310000414
contact@kannadabookpalace.com
+918310000414
contact@kannadabookpalace.com
₹100.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಶ್ರೀಧರ ದೊಡಮನಿ ಅವರು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದವರು. ಶ್ರೀಯುತ ಮಾರುತಿ ಹಾಗೂ ಶ್ರೀಮತಿ ಮಂಜುಳಾ ದಂಪತಿಗಳಿಗೆ ಹಿರಿಯ ಮಗನಾಗಿ ಜನಿಸಿದರು. ಅಜ್ಜಿಯ ಪ್ರೀತಿಯ ಮಡಿಲಿನಲಿ ಬೆಳೆದರು. ‘ಮಂಜುಳ ಸುತ’ ಎಂಬ ಕಾವ್ಯನಾಮದಿಂದ ಕವನ ರಚಿಸಿ ಹೆಸರುವಾಸಿಯಾಗಿದ್ದಾರೆ. ಯುವ ಕವಿಗಳಾದ ಶ್ರೀಧರ ದೊಡಮನಿ ಅವರು ಸ್ವ-ಉದ್ಯೋಗ ನಡೆಸುತ್ತಿದ್ದಾರೆ. ಬಹುಮುಖ ಪ್ರತಿಭೆಯ ಸೃಜನಶೀಲ ಯುವಕವಿ, ಪ್ರೇಮಕವಿಗಳಾದ ಶ್ರೀಧರ ದೊಡಮನಿ ಅವರು ವಚನಗಳು, ಶಾಹರಿಗಳು, ಪ್ರೇಮ ಕವಿತೆ, ಕಾದಂಬರಿಯನ್ನ ಬರೆಯುವುದನ್ನು ಮೈಗೂಡಿಸಿಕೊಂಡಿದ್ದಾರೆ. ಶ್ರೀ ‘ಅನ್ನದಾನೇಶ್ವರ’ ಅವರ ಅಂಕಿತನಾಮ. ‘ಹೃದಯದರಸಿ’ ಎಂಬ ಶೀರ್ಷಿಕೆಯ ಈ ಕವನ ಸಂಗ್ರಹದಲ್ಲಿ ಇತರ ಕವನಗಳ ಜೊತೆ ಮೂವತ್ತಾರು ಪ್ರೇಮ ಕವನಗಳ ಅಧಿಕ್ಯವಿದೆ.
ಕವನವೆಂದರೆ ಮನಸ್ಸಿನಲ್ಲಿ ಮೂಡುವ ಚೆಲುವಿನ ಚಿಗುರುಗಳು. ಆಯಾ ಕ್ಷಣದ ಮನಸ್ಸಿನ ಲಹರಿಯಂತೆ ಅಂದಂದಿನ ಕಾವ್ಯ ಹುಟ್ಟುತ್ತದೆ. ವಯಸ್ಸು, ದೈಹಿಕ ಮತ್ತು ಮಾನಸಿಕ ಸ್ಥಿತಿಗತಿಗಳು ಸಾಮಾನ್ಯನನ್ನು ಕವಿಯಾಗಿಸಿ ಬಿಡುತ್ತವೆ. ಯಾರು ಇದನ್ನು ಗಮನಿಸಿ ನೀರಿರೆದು ಪೋಷಿಸುತ್ತಾರೋ ಅವರು ಇನ್ನೊಬ್ಬರ ಮೇಲೆ ಪ್ರಭಾವ ಬೀರುವ ಕವಿಯಾಗುತ್ತಾರೆ.
ಶ್ರೀಧರ ದೊಡಮನಿಯವರು ತಮ್ಮ ವಚನ, ರುಬಾಯಿ, ಚುಟುಕು, ಪ್ರೇಮ ಕವನಗಳನ್ನು ನಿಯತಕಾಲಿಕಗಳು ಅಂತರ್ಜಾಲ ತಾಣಗಳಲ್ಲಿ ಪ್ರಕಟಿಸುತ್ತಾ ಚಿರಪರಿಚಿತರು. ಇವರಿಗೆ ನಾಡಿನ ಸಮಾಚಾರ ಸೇವಾ ಸಂಘ ಮತ್ತು ನಾಡಿನ ಸಮಾಚಾರ ದಿನಪತ್ರಿಕೆ ಕೊಡ ಮಾಡುವ ‘ಸಾಹಿತ್ಯ ರತ್ನ’ ಪ್ರಶಸ್ತಿಯನ್ನು ಪಡೆದಿದ್ದಾರೆ. ರಾಜ್ಯ ಮತ್ತು ಹೊರರಾಜ್ಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತನ್ನ ಕವಿತ್ವವನ್ನು ಪರಿಚಯಿಸಿದ್ದಾರೆ.
ಹೃದಯದರಸಿ ಕವಿತೆಗಳ ಸಂಕಲನವಾಗಿದೆ. ಮೂವತ್ತಾರು ಪ್ರೇಮ ಕವಿತೆಗಳು ಇದರಲ್ಲಿ ಸೇರಿವೆ. ಸೊಗಸಾಗಿ ಹೃದಯದ ಭಾವಗಳನ್ನು ಹೊರಹೊಮ್ಮಿಸುವ ಕಲೆ ಅವರಿಗೆ ಒಲಿದಿದೆ. ಶ್ರೀಧರ ದೊಡಮನಿ ಅವರಿಗೆ ಸಾಹಿತ ಸಾಹಿತ್ಯ ಲೋಕದಲ್ಲಿ ಇನ್ನೂ ಹೆಚ್ಚಿನ ಶ್ರೇಯಸ್ಸು ಸಿಗಲಿ ಎಂದು ಶುಭ ಆಶಂಸೆಗಳು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.