+918310000414
contact@kannadabookpalace.com
+918310000414
contact@kannadabookpalace.com
₹300.00
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಸಂಶೋಧನೆ, ಅನುವಾದ ಮೊದಲಾದ ಪ್ರಕಾರಗಳ ಕೆಲಸಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಮೋಹನ ಕುಂಟಾರ್‌ರ ಕೃತಿಗಳ ಸಮಗ್ರ ವಿಮರ್ಶೆ ಇದು. ಅವರ ಕೊಡುಗೆಗಳು ಬಿಡಿಬಿಡಿಯಾಗಿ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಪ್ರಕಟ ವಾಗಿದ್ದಲ್ಲದೆ, ಅನೇಕ ಸಂಶೋಧನಾ ಗ್ರಂಥಗಳಲ್ಲಿಯೂ ಅವರ ಕೃತಿಗಳು ವಿಮರ್ಶೆಗೊಳಗಾಗಿವೆ. ಪ್ರಸ್ತುತ ವಿಶ್ವನಾಥ ನಾಗಠಾಣ ಅವರು ಕುತೂಹಲದಿಂದ ಕುಂಟಾರ್‌ರ ಕೃತಿಗಳನ್ನು ತಲಸ್ಪರ್ಶಿಯಾಗಿ ಓದಿ, ವಿಶ್ಲೇಷಣೆ ಮಾಡಿರುವುದು ಇಲ್ಲಿನ ವಿಶೇಷ. ಪಿಎಚ್.ಡಿ. ಅಧ್ಯಯನ ಮಾಡುವ ಸಂಶೋಧಕರು ಹೆಚ್ಚಾಗಿ ಏಕ ವ್ಯಕ್ತಿಕೇಂದ್ರಿತ ಕೃತಿಗಳನ್ನು ಅಧ್ಯಯನ ಮಾಡುವುದು ಸಾಮಾನ್ಯ. ಆದರೆ ನಾಗಠಾಣ ಅವರು ಶುದ್ಧ ಸಾಹಿತ್ಯ ಪ್ರೀತಿಯಿಂದ ಕುಂರ್ಟಾ ಕೃತಿಗಳನ್ನು ನಿಷ್ಠೆಯಿಂದ ಓದಿ, ವಿಮರ್ಶಾತ್ಮಕ ಒಳನೋಟಗಳನ್ನು ಬೀರುವಂತೆ ವಿವರಿಸಿರುವುದನ್ನು ಇಲ್ಲಿ ಕಾಣಬಹುದು. ಕುಂಟಾರ್‌ರ ಸಾಹಿತ್ಯದ ಮೂಲಕವೇ ಬರವಣಿಗೆಯ ಒಲವು ಮೂಡಿಸಿಕೊಂಡ ನಾಗಠಾಣ ಅವರು ಕನ್ನಡ ಲೇಖಕ ರಾಗಿ ಈ ಕೃತಿಯ ಮೂಲಕ ಉದ್ಘಾಟನೆಗೊಂಡಿದ್ದಾರೆ.
ಪ್ರಸ್ತುತ ಕೃತಿಯಲ್ಲಿ ಅವರು ನಿರಪೇಕ್ಷವಾದ ಓದು, ವಸ್ತುನಿಷ್ಠವಾದ ಅಧ್ಯಯನ, ನಿಸ್ಪೃಹ ಭಾಷೆ ಇತ್ಯಾದಿ ಗಳ ಮೂಲಕ ಕುಂಟಾರ್‌ರ ಸಾಧನೆಯನ್ನು ಮುನ್ನೆಲೆಗೆ ತಂದಿದ್ದಾರೆ. ಅವರ ಕೃತಿಗಳ ಒಳತೋಟಿಗಳನ್ನು ಸಾರ ರೂಪದಲ್ಲಿ ದಾಖಲಿಸಿದ್ದಾರೆ. ಮೂರಾಲ್ಕು ವರ್ಷಗಳ ಪರಿಶ್ರಮದ ಫಲವಾಗಿ ಪ್ರಸ್ತುತ ಕೃತಿ ರೂಪು ಪಡೆದಿದೆ. ಗ್ರಂಥ ರಚನೆಗಾಗಿ ನಾಗಠಾಣ ಅವರು ಅಭಿನಂದ ನಾರ್ಹರು.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.