ಏಕಾಂಗಿ ಕವಿಯತ್ರಿಯ ಪ್ರವಾಸ ಡೈರಿ (೧೯೩೮)
₹120.00
ಸಂಪಾದಕರು: ಡಾ. ಶಾಂತಾನಾಗರಾಜ್
Publishers Name : ಯಾಜಿ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಮಹಿಳಾ ಹರಿದಾಸರ ಪರಂಪರೆ ಸಾಕಷ್ಟು ಹಿಂದಿನಿಂದಲೇ ಇತ್ತು. ಆದರೆ ದೀಕ್ಷೆ ತೊಟ್ಟು, ತಾಳ, ತಂಬೂರಿ. ಗೋಪಾಲಬುಟ್ಟಿ ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿ, ಹಾಡುತ್ತಾ ಕುಣಿಯುತ್ತಾ ಮನೆಮನೆಗೆ ಹೋಗಿ ಮಧುಕರ ವೃತ್ತಿ ಮಾಡಿದ್ದು, ಊರೂರು ತಿರುಗುತ್ತಾ ಹರಿಭಕ್ತಿಯನ್ನು ಜನಕ್ಕೆ ಪ್ರಸಾರ ಮಾಡಿದ್ದು, ಅಂಬಾಬಾಯಿಯವರನ್ನು ಬಿಟ್ಟರೆ ಬೇರಾವ ಮಹಿಳಾ ಹರಿದಾಸರೂ ಕರ್ನಾಟಕದಲ್ಲಿ ಕಾಣುವುದಿಲ್ಲ. ೨೦ನೆಯ ಶತಮಾನದಲ್ಲಿ ಸ್ವಾತಂತ್ರ್ಯಪೂರ್ವದ ದಶಕಗಳಲ್ಲಿ ಹುಟ್ಟಿ ಬಾಳಿದ ಅಂಬಾಬಾಯಿ ಅಪರೂಪದ ಆತ್ಮಪ್ರಜ್ಞೆ ಹಾಗೂ ಸಂವೇದನಾಶೀಲ ಸ್ವತಂತ್ರ ವ್ಯಕ್ತಿಯಾಗಿ ನಮ್ಮೆದುರು ತೆರೆದುಕೊಳ್ಳುತ್ತಾರೆ.
ಏಕಾಂಗಿಯಾಗಿ ಸುತ್ತುವುದೇ ಅಲ್ಲದೇ ಹರಿಭಕ್ತಿಯ ಹಣತೆಯನ್ನು ಎದೆಎದೆಗಳೆಲ್ಲದರಲ್ಲೂ ಹಚ್ಚುತ್ತಾ ಲೋಕದ ಜನರನ್ನು ಸಜ್ಜನಿಕೆ. ಸನ್ಮಾರ್ಗ, ಮೋಕ್ಷದ ಕಡೆಗೆ ಕರೆದೊಯ್ಯಬಹುದು ಎನ್ನುವ ದೃಢ ನಂಬಿಕೆಯ ಧನಾತ್ಮಕ ವೈರಾಗ್ಯ ಈಕೆಯದು. ಸುಖವಾಗಿ ದೊರೆತ ಮನೆಜನರ ಆದರ ಆತಿಥ್ಯ ಗಳೊಳಗೇ ಉಳಿದು ಸಾಹಿತ್ಯ ರಚಿಸಿ ದಿನದೂಡಬಹುದಿತ್ತು. ಆದರೆ ತಮ್ಮ ಗುರುಗಳಿಂದ ತಿಳಿದಿದ್ದ ದಾಸಕೂಟದ ಮಹಾನ್ ಅಭಿಯಾನದಲ್ಲಿ ಈಕೆ ತಮ್ಮನ್ನು ಗುರುತಿಸಿಕೊಂಡದ್ದು ಅವರಿಗಿದ್ದ ಸಾಮಾಜಿಕ ಪ್ರಜ್ಞೆಯ ದ್ಯೋತಕವೇ ಆಗಿದೆ.
-ಡಾ. ಬಿ.ಎನ್. ಸುಮಿತ್ರಾಬಾಯಿ




Reviews
There are no reviews yet.