SKU: 17390

ಕನಕ-ಪುರಂದರ

120.00

ರಂಗಪಠ್ಯ

Author : ಮೋಹನಚಂದ್ರ ಉರ್ವಾ

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಕನಕ-ಪುರಂದರ ಹೊಸಬಗೆಯ ನಾಟಕ ಎಂದು ಯಾಕೆ ಹೇಳಬೇಕಾಯಿತು ಎಂದರೆ. ಇದು ಏಕಕಾಲಕ್ಕೆ ವಿಡಂಬನೆಯೂ, ಆಧ್ಯಾತ್ಮಿಕ ಅರಿವೂ ಉಂಟಾಗುವ ಪ್ರಯತ್ನ ಹೊಸ ಬಗೆಯದು. ಒಂಬತ್ತು ದೃಶ್ಯಗಳ ಈ ನಾಟಕವನ್ನು ಒಂಬತ್ತು ಅಧ್ಯಾಯಗಳ ನಾಟಕವೆಂದು ಪರಿಗಣಿಸಬೇಕು. ಕನಕ-ಪುರಂದರ ಇತಿಹಾಸ-ವರ್ತಮಾನ-ಅಧ್ಯಾತ್ಮ-ಸಮಕಾಲೀನ ರಾಜಕೀಯ ಮುಂತಾಗಿ ಹತ್ತು ಹಲವು ರಂಗ ಸಾಧ್ಯತೆಗಳನ್ನು ನಿರೂಪಿಸುತ್ತಾ ಹೋಗುತ್ತದೆ. ಈ ನಾಟಕವನ್ನು ಯಾವುದೇ ದೃಶ್ಯದಿಂದ ಆರಂಭಿಸಿ ಯಾವುದೇ ದೃಶ್ಯದಿಂದ ಕೊನೆ ಗೊಳಿಸಿದರೂ ಅಥವಾ ಯಾವುದೇ ಒಂದು ದೃಶ್ಯವನ್ನು ಆಯ್ದುಕೊಂಡು ಗಂಭೀರವಾಗಿ ಅಭಿನಯಿಸಿದರೂ ನಾಟಕದ ಸಂವಹನಕ್ಕೆ ಏನು ಕೊರತೆ ಉಂಟಾಗಲಾರದು.

ಐಕೆ ಬೊಳುವಾರು

ರಂಗತಜ್ಞ, ಮಕ್ಕಳ ರಂಗಭೂಮಿಯ ಪ್ರತಿಪಾದಕ-ಪುತ್ತೂರು

ರಂಗಪಠ್ಯದ ರಚನೆ ಅದೊಂದು ಅದ್ಭುತ ಸೃಷ್ಟಿ, ಕನಕದಾಸ ಮತ್ತು ಪುರಂದರದಾಸರನ್ನು ಮುಂದಿಟ್ಟುಕೊಂಡು ಇತಿಹಾಸವನ್ನು ಸಮಕಾಲೀನಗೊಳಿಸಿ ಹಲವು ಪ್ರಶ್ನೆಗಳನ್ನು ಇದರಲ್ಲಿ ಪ್ರಸ್ತಾಪಿಸಿದ ರೀತಿ ಬೆರಗು ಹುಟ್ಟಿಸುವಂತಿದೆ. ಅದರಲ್ಲೂ ರೇಖಾತ್ಮಕಕತೆ ಇಲ್ಲದ ಈ ರಂಗಕೃತಿ ಒಂದು ವಿನೂತನ ಅನುಭವವನ್ನು ಖಂಡಿತಾ ಕೊಡಬಲ್ಲುದು.

ಸದಾಶಿವ ಕುಂಬ್ಳೆ (ಮೇಷ್ಟ್ರು) ಮಂಗಳೂರು

ವಿಶ್ರಾಂತ ಪ್ರಾಂಶುಪಾಲರು, ಯಕ್ಷಗಾನ ಕಲಾವಿದರು

ಹದಿನೈದನೇ ಶತಮಾನದ ಅಮೂರ್ತ (intangible) ಮತ್ತು ಅಲೌಕಿಕ ‘ದಾಸತ್ವ’ ಹಾಗೂ ಪ್ರಸ್ತುತ ಕಾಲಘಟ್ಟದ ಮೂರ್ತ (tangible) ಮತ್ತು ಲೌಕಿಕ ಗ್ರಹಿಕೆಗಳ ದಾಸತ್ವಗಳ ನಡುವಿನ ಗೊಂದಲ ಮತ್ತು ಸಂಘರ್ಷವನ್ನು ‘ಕನಕ-ಪುರಂದರ’ ನಾಟಕದ ಮೂಲಕ ಗೆಳೆಯ ಮೋಚ ಕಟ್ಟಿಕೊಟ್ಟಿದ್ದಾರೆ. ಕನಕದಾಸ ಮತ್ತು ಪುರಂದರದಾಸ ಪಾತ್ರಗಳು ಮೂರ್ತವನ್ನು ತಿರಸ್ಕರಿಸಿ ಅಮೂರ್ತಗಳ ದಾಸತ್ವವನ್ನು ಸ್ವೀಕರಿಸಿ ಅದನ್ನು ಹಿಂಬಾಲಿಸುವ ಪ್ರತೀಕವಾಗಿ ನಿಲ್ಲುತ್ತಾರೆ. ಇದಕ್ಕೆ ಪ್ರತಿಯಾಗಿ ‘ನಟದಾಸ’ ಮತ್ತು ‘ನಟಿದಾಸಿ’ಯ ಪಾತ್ರಗಳು ವರ್ತಮಾನದ ಮೂರ್ತದ ಹಿಂದೆ ಬಿದ್ದಿರುವ ಮನೋಭಾವಗಳನ್ನು ಪ್ರತಿನಿಧಿಸುತ್ತದೆ.

ನಾ ಶ್ರೀನಿವಾಸ (ಪಾಪು)

ನಾಟಕಕಾರ, ರಂಗ ಶಿಕ್ಷಕ, ಮೈಸೂರು

ಹದಿನೈದನೆ ಶತಮಾನದ ದಾಸಪರಂಪರೆಯನ್ನು ಆಧುನಿಕ ರಾಜಕೀಯ ಮತ್ತು ಧಾರ್ಮಿಕ ಸಂದರ್ಭಗಳೊಂದಿಗೆ ಮೇಲೈಸಿ, ಶೈವ ಮತ್ತು ವೈಷ್ಣವರ ನಡುವಿನ ಭಿನ್ನತೆಗಳನ್ನು ಆಳವಾಗಿ ಅಧ್ಯಯನ ಮಾಡಿ, ಅಂದಿನ ರಾಜಕೀಯ ಮತ್ತು ಧಾರ್ಮಿಕ ಸಂಕೀರ್ಣತೆಗಳನ್ನು ಅನಾವರಣಗೊಳಿಸಿದ್ದಾರೆ. ಈ ಮೂಲಕ ದಾಸ ಚಳುವಳಿಯ ಇನ್ನೊಂದು ಮಗ್ಗುಲನ್ನು ಪರಿಚಯಿಸುವ ಪ್ರಯತ್ನ ಅರ್ಥಪೂರ್ಣವೆನಿಸುತ್ತದೆ.

ಐಡಾ ಡಿ’ಸೋಜ

ಸಹಾಯಕ ಪ್ರೊಫೆಸರ್, ಪಿಎಸ್‌ಪಿಎಚ್. ಮಾಹೆ-ಮಣಿಪಾಲ

Rating This Book

Reviews

There are no reviews yet.

Be the first to review “ಕನಕ-ಪುರಂದರ”

Your email address will not be published. Required fields are marked *