You are currently viewing ಸ್ವಾತಂತ್ರ್ಯದ ಅಭಿಲಾಷೆ

ಸ್ವಾತಂತ್ರ್ಯದ ಅಭಿಲಾಷೆ

ನೀಲ ನಭದಲಿ ರಾರಾಜಿಸಿದ ತ್ರಿವರ್ಣ ಧ್ವಜವು
ಕೊನೆಗೊಂಡಿತು ಬ್ರಿಟಿಷರ ದಾಸ್ಯವು
ಭಾರತೀಯರ ದಮನಿಯಲಿ ರೋಮಾಂಚನ
ದೇಶಭಕ್ತಿಯ ನುಡಿ ನಮನ

ರಾಷ್ಟ್ರ ನಾಯಕರ ಬಲಿದಾನದ ಫಲ
ಭಾಷೆ ನಾಡಿನ ಬಗ್ಗೆ ಅಭಿಮಾನ ಹೊಂದಿದ ನೆಲ
ಆಂತರಿಕ ಕಲಹ ಒಗ್ಗಟ್ಟಿನ ಕೊರತೆ
ಈ ಮಧ್ಯೆ ಬೆಳಗಿತು ಸ್ವಾತಂತ್ರ್ಯದ ಹಣತೆ

ಹುತಾತ್ಮರಾದ ವೀರಯೋಧರು
ಹರಿಸಿದರು ತಮ್ಮ ನೆತ್ತರು
ಅವರೇ ನಿಜ ದೇಶಭಕ್ತರು
ಸರ್ವರ ಮನಮನದಲ್ಲೂ ಅಮರರು

ಶಾಸ್ತ್ರಿ ಭಗತ್ ಸಿಂಗ್ ಮತ್ತೊಮ್ಮೆ ಹುಟ್ಟುವರೇ?
ನಾಡಿನ ಸಮಸ್ಯೆಯ ಪರಿಹರಿಸುವರೇ?
ನಾಳಿನ ಪ್ರಜೆಗಳ ಸಿದ್ದಗೊಳಿಸುವ ನಿರ್ಮಾತೃರು
ಅವರೇ ನಮ್ಮ ಶಾಲಾ ಶಿಕ್ಷಕರು

ಕೋಟಿ ಸಮಸ್ಯೆಯ ದಾಟಿ
ಒಳ್ಳೆಯದಕ್ಕೆ ನಡೆಸೋಣ ಪೈಪೋಟಿ
ನಮಗಿರಬಾರದು ಯಾರು ಸರಿಸಾಟಿ
ನಿಲ್ಲೋಣ ನಾವೆಲ್ಲ ಕ್ರೌರ್ಯತನವ ಮೆಟ್ಟಿ

ಏಳಿರಿ ಏಳಿರಿ ನಾಡ ಎಡೆ ಗಮನ ನೀಡಿರಿ
ಸಾಗಿರಿ ಸಾಗಿರಿ ಧರ್ಮದ ಪಥದೆಡೆ ಸಾಗಿರಿ
ಭವಿಷ್ಯದತ್ತ ನಯನವ ತೋರಿರಿ
ದೃಢ ನಿಷ್ಠೆ ಗೌರವದಿಂದ ಮುನ್ನುಗ್ಗುತಿರಿ

ನಾಡ ಏಳಿಗೆಗೆ ದುಡಿಯಿರಿ
ಎಲ್ಲ ಸಮಸ್ಯೆಯ ಮೆಟ್ಟಿನಿಲ್ಲಿರಿ
ಅಲ್ಪ ಕಾಯ ಅಪಾರ ಕೀರ್ತಿ
ನಿಜ ನಾಯಕರ ಗುಣಗಳೇ ಇದಕ್ಕೆ ಸ್ಫೂರ್ತಿ

ಉಷಾ ಪ್ರಶಾಂತ್
ಸಿದ್ದಾಪುರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ