Indira Gandhi
₹350.00 Original price was: ₹350.00.₹300.00Current price is: ₹300.00.
| Book Details |
|---|
| Author : Inder MalhotraInder Malhotra |
| Publishers : Hemantha Saithtya |
| ASIN : B0B2LMGL4H |
| Paperback : 446 pages |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಇದೊಂದು ಭಾರತದ ಅತ್ಯಂತ ವರ್ಚಸ್ವೀ ಮತ್ತು ಪ್ರಭಾವಶಾಲಿ ಮುಖಂಡರೊಬ್ಬರ ನಿರ್ಣಯಾತ್ಮಕವಾದ, ತೀಕ್ಷ್ಮವಾದ ಮತ್ತು ಮೇರೆ ಮೀರದ, ಅನೇಕ ಸಂದರ್ಭಗಳ ಜೊತೆಗಿನ ವಿವರಣೆ. ಇದೊಂದು ಈ ಕಾಲದವರೆಗಿನ ಪರಿಷ್ಕೃತ ಆವೃತ್ತಿ. ಇಂದಿರಾ ಅವರ ಬಾಲ್ಯದಿಂದ ಗುಂಡುಗಳಿಗೆ ಆಹುತಿಯಾಗುವವರೆಗೂ ಅವರ ಜೀವನದ ಪುಟಗಳ ವಿವರಣೆ ಇದರಲ್ಲಡಗಿದೆ. ಅವರು ತೀರಿಹೋದ ನಂತರದಲ್ಲಿ ಅವರ ವಂಶಪಾರಂಪರ್ಯ, ವಾಸ್ತವದಲ್ಲಿ ಇರುವ ಸ್ಥಿತಿಯ ಸಂಗತಿಗಳನ್ನು ಓದುಗರಿಗೆ ನೀಡುತ್ತಲಿದೆ. ಸುಮಾರು ಎರಡು ದಶಕದ ಅವರ ಆಳ್ವಿಕೆಯಲ್ಲಿಯ ಅವರ ರಾಜಕೀಯ ಮತ್ತು ವೈಯಕ್ತಿಕ ಜೀವನದ ಮುಖಗಳನ್ನು ಅಭಿವ್ಯಕ್ತಪಡಿಸಲಾಗಿದೆ. ಅವರು ‘ಮೂಕಗೊಂಬೆ’ಯಿಂದ ‘ಚಕ್ರವರ್ತಿಣಿ’ಯಾಗಿ ವಿಕಸನ ಹೊಂದಿದ ರೀತಿ, ಅವರ 25.6.1975ರ ತುರ್ತುಪರಿಸ್ಥಿತಿಯಿಂದ ರಾಜಕೀಯದಿಂದ ಇನ್ನೇನು ಪ್ರಪಾತಕ್ಕೆ ಜಾರಿಹೋದರೋ ಅನ್ನುವಷ್ಟರಲ್ಲಿ ಫಿನಿಕ್ಸ್ ಪಕ್ಷಿಯ ಹಾಗೆ ಪುನಃ ಮೇಲೇರಿ ಬಂದು,ಅನೇಕ ಆಕಸ್ಮಿಕ ರಾಷ್ಟ್ರೀಯ ಸಮಸ್ಯೆಗಳಿಂದ ರೇಷ್ಮೆಹುಳದಂತೆ ಸುತ್ತಿಕೊಂಡು ಅದರಲ್ಲೇ ಅಂತ್ಯ ಕಂಡಿದ್ದು ಅತೀ ಬೇಸರದ ಸಂಗತಿ. ರಕ್ಷಿಸುವವರೇ ಭಕ್ಷಿಸಿದರೆ ಏನು ಮಾಡುವುದು? ಒಬ್ಬ ಅಸಾಮಾನ್ಯ ವ್ಯಕ್ತಿಯ ನಿರ್ಬಂಧಪಡಿಸುವ ವಿವರಣೆ ಕಥೆ ಇದಲ್ಲ. ಇದೊಂದು ಸ್ವತಂತ್ರೋತ್ತರ ಭಾರತದ ಚಿತ್ತಾಕರ್ಷಕ ಅಧ್ಯಯನವಾಗಿದೆ.
ಇಂದರ್ ಮಲ್ಲೋತ್ರಾ, ಭಾರತ ಪ್ರಖ್ಯಾತ ಪತ್ರಕರ್ತರು. ಅವರು ಇಂದಿರಾರ ಪತಿ ಫಿರೋಜ್ ಗಾಂಧಿಯವರ ಮಿತ್ರರಲ್ಲೊಬ್ಬರು. Times of India, New Delhi 1978-85 ส ಸಂಪಾದಕರಾಗಿದ್ದವರು. State man – The Guardian London (1965-95) ನಿಯಮಿತ ಲೇಖನದಾತರಾಗಿದ್ದವರು. ಅವರು Nehru Fellow (1986-87), Woodrew Fellow (1992-93) ಪ್ರಶಸ್ತಿ ಪಡೆದಿದ್ದವರು. ದೇಶವಿದೇಶದ ಉಪನ್ಯಾಸಕರು. ಅವರ ಈ ಕೃತಿ 1989ರಲ್ಲಿ ಮೊದಲು, ನಂತರ 2014ರಲ್ಲಿ ಪರಿಷ್ಕೃತಗೊಂಡಿದೆ. ತಮ್ಮ ಅತ್ಯುತ್ತಮ ಕೃತಿಗಳಲ್ಲಿ ಇದೂ ಒಂದಾಗಿದೆ.
“ಮಲ್ಲೋತ್ರಾರ ಈ ಪುಸ್ತಕವು ಇಲ್ಲಿಯವರೆಗೆ ಭಾರತೀಯರೊಬ್ಬರ ಬಗ್ಗೆ ಬರೆದ ಅತ್ಯಂತ ಶ್ರೇಷ್ಠ ಜೀವನ ಚರಿತ್ರೆಗಳಲ್ಲೊಂದು”
-‘Sunday’ Daily News




Reviews
There are no reviews yet.