+918310000414
contact@kannadabookpalace.com
+918310000414
contact@kannadabookpalace.com
₹200.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ನಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನ ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 13 ಕೃತಿಗಳು, 400 ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013 ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016 ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ದಿ ಪಡೆದಿದೆ. ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ಆಸಕ್ತಿ ಮೂಡಿಸಲು ಕಳೆದ 6 ವರ್ಷಗಳಿಂದ ಇವರು ನಡೆಸಿಕೊಂಡು ಬರುತ್ತಿರುವ ಉತ್ತರ ಕನ್ನಡ ಜಿಲ್ಲಾ ಚರಿತ್ರಾ ಅಭಿಯಾನ’ ಆದರ್ಶ ಸಮಾಜದ ಸ್ಥಾಪನೆಗೊಂದು ಮಾದರಿ ಯೋಜನೆಯಾಗಿದೆ. ಪ್ರಸ್ತುತ ಮಂಗಳೂರಿನಲ್ಲಿ ಪ್ರಾಚಾರ್ಯರಾಗಿ ಸಲ್ಲಿಸುತ್ತಿರುವ ಇವರು ‘ಬನವಾಸಿ ಮತ್ತು ಕದಂಬರ ಇತಿಹಾಸ ಎಂಬ ಈ ಕೃತಿಯಲ್ಲಿ ಬನವಾಸಿ ಪ್ರದೇಶದ ಐತಿಹಾಸಿಕ ಹಿನ್ನೆಲೆ ಹಾಗೂ ಕನ್ನಡದ ಪ್ರಥಮ ಸಾಮ್ರಾಜ್ಯ ಸ್ಥಾಪಕರೆನಿಸಿದ ಕದಂಬರ ಕುರಿತು ಸಮಗ್ರ ಮಾಹಿತಿಯನ್ನು ವಸ್ತುನಿಷ್ಠವಾಗಿ ಉಲ್ಲೇಖಿಸಿರುತ್ತಾರೆ. ಈ ಕೃತಿಯಲ್ಲಿ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಕುರಿತಾಗಿದ್ದ ಪೂರ್ವಾಗ್ರಹಗಳು, ಗೊಂದಲಗಳನ್ನು ನಿವಾರಿಸಿ ಸ್ಪಷ್ಟತೆಯ ಆವರಣಕ್ಕೊಳಪಡಿಸಿದ್ದಾರೆ. ಅಂತೆಯೇ ಕದಂಬರ ರಾಜಕೀಯ ಇತಿಹಾಸ, ಬನವಾಸಿಯಲ್ಲಿ ನಡೆದ ಉತ್ಪನನಗಳು, ಕದಂಬರ ಶಾಸನಗಳ ಕುರಿತು ಈ ಕೃತಿಯಲ್ಲಿ ಮಾಹಿತಿಗಳವೆ. ಕನ್ನಡ ನಾಡನ್ನು ಪ್ರೀತಿಸುವ, ಆರಾಧಿಸುವ ಪ್ರತಿಯೊಬ್ಬರ ಮನೆ ಮತ್ತು ಮನಗಳಲ್ಲಿ ಇರಬೇಕಾದ ಕೃತಿ ಇದಾಗಿದೆ.
– ಪ್ರಕಾಶಕರು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.