ಬೆನ್ನ ಮೇಲದು ಹರೆದ ಹನ್ನೆರಡು ತುತುಗಳ ಅಂಗಿ
ಅದೆಷ್ಟು ಬದುಕ್ಕಿದ್ದವ ಬಡತನ ಹಸಿವನ್ನು ನುಂಗಿ
ತಾ ಕಾಣದ ಜಗತ್ತನ್ನು ತೋರುವ ದೈವವು ಅಪ್ಪಾ
ಆ ಮನವದ ಕಾಳಜಿ ಅರಿಯದೆ ಹೋದವರೇ ಬೆಪ್ಪ
ಅವನೊಂತರಾ ಸರಿ ದಾರಿ ತೋರುವ ದಿಕ್ಸೂಚಿ
ಸಾಗುವ ನಮ್ಮ ಎಳ್ಗೆಯಬಾಳ ರಥದ ಸಾರಥಿ
ದುಡಿದು ದಣಿವ ಆ ಜೀವಕ್ಕೆ ಸೂರ್ಯಾನದೆ ಆರತಿ
ಜಗತ್ತಲ್ಲಿ ಹೋಲಿಕೆಗಳೆ ಇಲ್ಲದ ವಾತ್ಸಲ್ಯದ ಮೂರ್ತಿ
ಸಿಟ್ಟೆಂಬ ಸುಳ್ಳು ಪರದೆಯ ಹೊತ್ತವನು ಹೊರಗೆ
ಕರುಣೆ ಕಾಳಜಿ ಎಂಬ ಕರುಣಾಸಗರವೆ ತನ್ನೊಳಗೆ
ಸಾಧನೆಯ ಪ್ರತಿ ಹೆಜ್ಜೆಗೆ ಅವರೇ ದಾರಿಯ ದೀವಳಿಗೆ
ತಪ್ಪು ತಿದ್ದಿ ಸರಿದಾರಿ ತೋರಿ ನಿಲ್ಲುವರು ನಮ್ಮ ಕಾವಲಿಗೆ
ಜಗತ್ತಲ್ಲಿ ಪ್ರೀತಿ ವಾತ್ಸಲ್ಯ ಬತ್ತದ ಭಾವಿ ಈ ಜೀವಿ
ತನಗಾಗಿ ಒಂದು ದಿನವು ಜೀವಸದ ಈ ಸಂಜೀವಿ
ಅದೆಷ್ಟೇ ದುಡ್ಡು ಕೊಟ್ಟು ತಿರುಗಿದರು ದೇಶ ವಿದೇಶ
ಸಿಗದು ಅಪ್ಪನ ಹೆಗಲರಿ ಪಡೆದ ದಿನದ ಸಂತಸ
ಅವರೇನು ಅರಮನೆಯ ಅರಸನಲ್ಲವೇ ಅಲ್ಲ
ಮಗಳನ್ನು ಯುವರಾಣಿಯಂತೆ ಬೆಳಿಸಿದನಲ್ಲ
ಮಗನಗಿಗೂ ಹೆಗಲಾಗಿ ಪ್ರತಿ ಕ್ಷಣ ನಿಲ್ಲುವನಲ್ಲ
ಜೊತೆಗಿದ್ದರೆ ಜಗತ್ತೇ ಬೆನ್ನ ಹಿಂದೆ ನಾಮುಂದೆ
ಕೃಷ್ಣ ಸಖಿ ನಾಗರತ್ನ
(ಅಂಚಟಗೇರಿ)
ಜಿಲ್ಲಾ :ಧಾರವಾಡ
ತಾಲೂಕ:ಹುಬ್ಬಳ್ಳಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ತಂದೆಯ ಪುಸ್ತಕ-ಮಗಳ ಮುಖಪುಟ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ