+918310000414
contact@kannadabookpalace.com
+918310000414
contact@kannadabookpalace.com
₹70.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಭುವನೇಶ್ವರಿ ದು ಅಂಗಡಿಯವರು ಸೃಜನಶೀಲ ಪರೆಹ ಗಾರರು, ಕವಯಿತ್ರಿ, ಅಂತರಂಗ ಬಹಿರಂಗದಲ್ಲೂ ಸಾಹಿತ್ಯದ ಹೊದಿಕೆಯನ್ನು ಹೊದ್ದವರು.
ವಿಜ್ಞಾನ ಶಿಕ್ಷಕಿಯಾಗಿದ್ದುಕೊಂಡೇ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿ, ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಕೊಡುಗೆಯನ್ನು ನೀಡಲು ಕವನ ಸಂಕಲನಗಳನ್ನು ಹಾಗೂ ಲೇಖನಗಳ ಕೃತಿಗಳನ್ನು ರಚಿಸಿ ತಮ್ಮ ಇದುವಿಕೆಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಖಾತರಿಪಡಿಸಿಕೊಂಡಿದ್ದಾರೆ. ತಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಕಂಡುಂಡ ಅನುಭವ ವೇದ್ಯವಾದ ಅಂಶಗಳನ್ನು ಮೂರ್ತ ರೂಪಕ್ಕೆ ತಂದು ತಮ್ಮ ಕಾವ್ಯದಲ್ಲಿ ಕಟ್ಟಿ, ಸಹೃದಯನನ್ನು ನೇರವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳೊಂದಿಗೆ ಮಗುವಾಗಿ, ಹಿರಿಯರೊಂದಿಗೆ ಅನುಭವಿಯಾಗಿ, ಎಲ್ಲರೊಳಗೊಂದಾಗಿ ಕಲಿಯುವ ಸರಳ ವ್ಯಕ್ತಿತ್ವದವರು. ವಿದ್ಯಾಭ್ಯಾಸವೆಲ್ಲವೂ ವಿಜ್ಞಾನ ಪೂರಕವಾದವು. ಆದರೆ ಆಸಕ್ತಿ ಮಾತ್ರ ಸಾಹಿತ್ಯ ತಮ್ಮನ್ನು ಸದಾ ಕಾಡುವ ನಾಡುನುಡಿ, ಜಲ, ನಿಸರ್ಗದ ಪ್ರೇಮವನ್ನು ಸಾಹಿತ್ಯದ ಮುಖೇನ ಅಭಿವ್ಯಕ್ತ ಪಡಿಸಿದ್ದಾರೆ. ಮಕ್ಕಳ ಸಾಹಿತ್ಯದತ್ತ ಇವದು ತೋರಿಸಿರುವ ಒಲವು ವಿಶೇಷವಾದದ್ದು. ಗದಗ ಭಾಗದಲ್ಲಿ ಶಿಕ್ಷಕಿಯಾಗಿ, ಸಾಹಿತಿಯಾಗಿ ಪರಿಚಿತಗೊಂಡಿರುವ ಇವರು ತಮ್ಮ ಸಾಹಿತ್ಯದ ಮೂಲಕ ಕನ್ನಡ ಮನಸ್ಸುಗಳನ್ನು ಗೆಲ್ಲಲಿ. “ಹಾಡಿನ ಬಂಡಿ” ಮಕ್ಕಳ ಪದ್ಯಗಳ ಕೃತಿಗೆ ಬೆನ್ನುಡಿ ಪಡೆಯಲು ಕೇಳಿದ ಸಂದರ್ಭದಲ್ಲಿ ಕವಯತ್ರಿಯ ಮೇಲಿನ ಅಭಿಮಾನ ಬರೆಹ ರೂಪದಲ್ಲಿ ಅಭಿವ್ಯಕ್ತವಾಯಿತು. ಇವರ ರಚನೆಯ ಪದ್ಯಗಳು ಸುಂದರ ಹಾಗೂ ಹಾಡಲು ಸರಳ. ಅದರಲ್ಲೂ ಪಠ್ಯಕ್ಕೆ ಪೂರಕವಾದ ರಚನೆಗಳು ಎಂದು ಹೆಮ್ಮೆಯಿಂದ ಹೇಳಬಹುದು. ಇವರ”ಹಾಡಿನ ಬಂಡಿ” ಪದ್ಯ ಕೃತಿ ನಾಡಿನ ಮಕ್ಕಳ ಮನೆ-ಮನವನ್ನು ತಲುಪಿ ಹೆಚ್ಚೆಚ್ಚು ಓದುಗರನ್ನು ಸಂಪಾದಿಸಲಿ. ಕನ್ನಡ ಸಾರಸ್ವತ ಲೋಕದಲ್ಲಿ ಇವರ ಹೆಸರು ಅಜರಾಮರವಾಗಲಿ. ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಸಾಹಿತ್ಯ ಅಭಿಮಾನ ನೂರಾರು ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ.
ಸಿ. ಎನ್. ಅಶೋಕ
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು
ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತರು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.