ಚಿಗುರೆಲೆ ಸಂಭ್ರಮ
₹85.00 Original price was: ₹85.00.₹80.00Current price is: ₹80.00.
Author : ಶಾಹೀನಬಾನು ಎಂ. ಬಳ್ಳಾರಿ
Publishers Name : ಬಾನಾಡಿ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಇತ್ತೀಚಿಗೆ ಧಾರವಾಡದಲ್ಲಿ ಚಂದ್ರಶೇಖರ ಮಾಡಲಗೇರಿಯವರ ಸಾರಥ್ಯದಲ್ಲಿ ಬಸವಚೇತನ ಪ್ರಶಸ್ತಿ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಮುಖ್ಯ ಅತಿಥಿಗಳ ಸಾಲಿನಲ್ಲಿ ನಾನು ಆಸೀನನಾಗಿದ್ದೆ. ಆಗ ಧಾರವಾಡದ ಇಟಿಗಟ್ಟಿ ಶಾಲೆಯ ಶಿಕ್ಷಕಿ ಕವನ ವಾಚನ ಮಾಡಿದರು. ಅವರ ಕವನ ಬಹಳ ಹಿಡಿಸಿತು. ಕಾರ್ಯಕ್ರಮ ಮುಗಿದ ನಂತರ ಪರಿಚಯಿಸಿಕೊಂಡು, ಕವನ ಸಂಕಲನ ಹೊರ ತಂದಿರುವಿರಾ.? ಎಂದು ಕೇಳಿದೆ. ಇಲ್ಲ ಸರ್ ಪ್ರಕಟಿಸುವ ತಯಾರಿಯಲ್ಲಿದ್ದೇನೆ ಎಂದರು. ತಕ್ಷಣ ಮುನವಳ್ಳಿಯ ಶಿಕ್ಷಕ ಸಾಹಿತಿ ವೈ.ಬಿ. ಕಡಕೊಳ ಅವರ ಸಂಪರ್ಕ ಸಂಖ್ಯೆ ನೀಡಿ ಕವನ ಸಂಕಲನ ಪ್ರಕಟಣೆಯತ್ತ ತೊಡಗಿ, ಕಡಕೋಳ ಗುರುಗಳು ಮುನ್ನುಡಿ ಬರೆದು ಕೊಡುವರು ಜೊತೆಗೆ ಅವರ ಸಲಹೆ ಪಡೆಯಿರಿ, ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಕೂಡ ಮಾಡಿಯೇ ಬಿಡೋಣ ಎಂದು ಹೇಳಿದಾಗ, ಅವರು ಕವನ ಸಂಕಲನಕ್ಕೆ ಬೆನ್ನುಡಿ ಬರೆದು ಕೊಡಿ ಸರ್ ಎಂದರು. ಆಯಿತು ಎಂದು ಹೇಳಿ ಮನೆಗೆ ಬಂದೆನು. ಸಾಯಂಕಾಲ ಅವರ ಕವನಗಳನ್ನು ಕಳಿಸಿದರು. ಅವರ ಕವನ ಓದಿದ ರೀತಿ ಅವರ ಕವನದ ಸಾಲುಗಳನ್ನು ಕೇಳಿ ಮನೆಗೆ ಬಂದಿದ್ದ ನನಗೆ “ಚಿಗುರೆಲೆ ಸಂಭ್ರಮ” ಶೀರ್ಷಿಕೆಯ ಕವನ ಸಂಕಲನದ ಒಂದೊಂದು ಕವಿತೆಗಳು ಬಹಳ ಅರ್ಥಪೂರ್ಣವಾಗಿದೆಯಲ್ಲ… ಎನ್ನುತ್ತ, ಎಲ್ಲ ಕವನಗಳನ್ನು ಓದಿದೆ. ಇವರು ಸರಳ ಸುಂದರ ಕವನಗಳನ್ನು ಎಲ್ಲರಿಗೂ ಮನಮುಟ್ಟುವ ಹಾಗೆ ರಚಿಸಿರುವರು. ಈ ಕವಿತೆಗಳಲ್ಲಿ ನೆಲ-ಜಲ-ಪರಿಸರದ ಪ್ರೀತಿ, ಹಿರಿಯರ ಕಾಳಜಿ, ವ್ಯಾಕಣಾಂಶಗಳನ್ನು ಒಳಗೊಂಡು ಷಟ್ಟದಿ ಹಾಗೂ ಕಾಗುಣಿತದಲ್ಲಿ ಕವನ ಮೂಡಿ ಬಂದಿವೆ. ಸಾಹಿತ್ಯ ಲೋಕ ವಿಶಾಲವಾಗಿದ್ದು ಈ ನೆಲ ಕವಿಗಳ ಬೀಡು, ಬೇಂದ್ರೆಯ ನೆಲದಲ್ಲಿ ಉದಯಿಸಿ ಕಾವ್ಯ ಲೋಕಕ್ಕೆ ಚಿಗುರೆಲೆ ಸಂಭ್ರಮ ಕೃತಿ ಕೊಡುತ್ತಿರುವ ಗುರುಮಾತೆಯಿಂದ ಇನ್ನೂ ಹತ್ತಾರು ಕವನ ಸಂಕಲನ ಮೂಡಿ ಬರಲೆಂದು ಆಶಿಸುವೆ. ಇಂದಿನ ವ್ಯಾಟ್ಸಪ್ ನಂತಹ ತಂತ್ರಜ್ಞಾನ ಬಳಸಿ ಇವರು ಕವನಗಳನ್ನು ರಚಿಸುತ್ತ ಹತ್ತಾರು ಕವನಗಳಿಗೆ ಬಹುಮಾನ ಪಡೆದಿರುವುದನ್ನು ಕಂಡಾಗ ನೀವು ಇನ್ನೂ ಬೆಳೆಯುತ್ತೀರಿ.




Reviews
There are no reviews yet.