ಜರ್ನಿ ಆಫ್ ಜ್ಯೋತಿ
₹200.00
Author : ಜ್ಯೋತಿ. ಎಸ್
Publishers Name : ಅಮೃತ ಪ್ರಕಾಶನ ಬೆಂಗಳೂರು
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ನಾನಿದನ್ನು ಜ್ಯೋತಿ ಅವರ ಪಯಣದ ಕತೆ ಎಂದುಕೊಂಡು ಓದುತ್ತಾ ಹೋದೆ. ಪುಟ ತೆರೆಯುತ್ತಾ ಹೋದ ಹಾಗೆ ತೆರೆದುಕೊಂಡದ್ದು ಸಮಗ್ರ ಕರ್ನಾಟಕ. ನಮ್ಮ ಕನ್ನಡ ನಾಡಿನ ವಿವಿಧ ಕ್ಷೇತ್ರಗಳ ಮೌನ ಸಾಧಕರ ಚಿತ್ರಗಳನ್ನು ಈ ಪುಸ್ತಕದಲ್ಲಿ ಜ್ಯೋತಿ ಅಕ್ಕರೆ, ಆತ್ಮೀಯತೆ ಮತ್ತು ಸಹಜ ಉಲ್ಲಾಸದಿಂದ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕದಲ್ಲಿ ಬರುವ ಸಾಧಕರೆಲ್ಲ ಸಕಲ ಅವಕಾಶಗಳ ನಡುವೆ ಸಾಧಿಸಿ ಗೆದ್ದವರಲ್ಲ. ಬದುಕಿನ ದಾರಿ ಮುಗಿಯಿತು ಎಂದಾಗ, ಕತ್ತಲ ಹಾದಿಯಲ್ಲಿ ಏಕಾಂಗಿಯಾಗಿ ನಡೆಯಬೇಕಾಗಿ ಬಂದಾಗ, ಮುಚ್ಚಿದ ಬಾಗಿಲಿಗೆ ಬೆನ್ನು ತಿರುಗಿಸಿ ಹೊಸದಾರಿ ಹುಡುಕಿಕೊಂಡು ಹೊರಟಾಗ, ಅವಮಾನಿಸಿದವರನ್ನು ತನ್ನ ಸೃಜನಶೀಲತೆಯಿಂದ ಎದುರಿಸಿ ನಿಂತಾಗ ಅರಳಿದ ಹೊಸ ಬದುಕಿನ ಕತೆಗಳು ಇಲ್ಲಿವೆ. ಇದನ್ನು ಓದುತ್ತಾ ಓದುತ್ತಾ ಜ್ಯೋತಿಯ ಜರ್ನಿ ನಮ್ಮ ಪಯಣವೂ ಆಗುತ್ತದೆ. ಇದು ಕೇವಲ ಬಹಿರಂಗದ ಪ್ರಯಾಣ ಅಲ್ಲ. ಜ್ಯೋತಿಯವರ ಅಂತರಂಗದ ಪ್ರಯಾಣವೂ ಇಲ್ಲಿದೆ. ತಾನೇ ಹುಡುಕಿಕೊಂಡು ನಡೆದಾಡಿದ ಈ ಹಾದಿಯ ಸುದೀರ್ಘ ಯಾತ್ರೆಯಲ್ಲಿ ಜ್ಯೋತಿ ನಿಜವಾದ ದೇವರುಗಳನ್ನು ಕಂಡಿದ್ದಾರೆ. ಇಲ್ಲಿಗೆ ಕತೆ ಮುಗಿಯಿತು ಅಂದುಕೊಳ್ಳುವ ಹೊತ್ತಿಗೆ, ಮತ್ತೊಂದು ಹೊಸ ಕತೆ ಶುರುಮಾಡುತ್ತದೆ ಬದುಕು. ಅಂಥ ಹೊಸಕತೆಗಳಿಗೆ ಪ್ರೇರಣೆಯಾಗಬಲ್ಲ ವ್ಯಕ್ತಿಚಿತ್ರಗಳು ನಮ್ಮನ್ನು ವಿನೀತರನ್ನಾಗಿ ಮಾಡುತ್ತವೆ. ಛಲದಿಂದ ಬದುಕನ್ನು ಮುನ್ನೆಡಸಲಿಕ್ಕೆ `ಸ್ಫೂರ್ತಿಯಾಗುತ್ತವೆ.
| ಜೋಗಿ




Reviews
There are no reviews yet.