ಮೈಸೂರು ಸಂಸ್ಥಾನದಲ್ಲಿ ಶಿಕ್ಷಣ ಪಡೆದ ಪ್ರಥಮ ತಲೆಮಾರಿನ ದಲಿತರು ಚಾರಿತ್ರಿಕ ನೋಟ
₹220.00
Author : ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
Publishers Name : ಯಾಜಿ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಭಾರತದ ಜನತೆಗೆ ಶತಶತಮಾನಗಳಿಂದಲೂ ಸಹಜ ಶಿಕ್ಷಣ ಪ್ರಕೃತಿಕವಾಗಿಯೇ ಬಂದಿದೆ. ಈ ಪ್ರಬುದ್ಧ ಜ್ಞಾನದ ಶಿಕ್ಷಣ ಅವರವರು ಮಾಡುವ ಕಸುಬು ಹಾಗೂ ನೆಲೆಸಿರುವ ಸ್ಥಳದ ಪರಿಸರಕ್ಕೆ ಸಂಬಂಧಿಸಿದಂತೆ ಸಹಜವಾಗಿ ಬಂದಿದೆ. ಈ ಜ್ಞಾನಕ್ಕೆ ಯಾವ ಆಕ್ಷರ ಜ್ಞಾನವು ಬೇಕಾಗಿಲ್ಲ ಎಂಬುದಕ್ಕೆ ಮಾನವ ಬದುಕು ಹಾಗೂ ಜೀವನ ಸಾಗಿ ಬಂದಿರುವ ಚರಿತ್ರೆಯೇ ಸಾಕ್ಷಿಯಾಗಿದೆ. ಅಕ್ಷರ ಕಲಿಯುವ ಶಿಕ್ಷಣದಿಂದ ಮಾತ್ರ ಒಂದು ವರ್ಗವೇ ಅದರ ಮೀಸಲಾತಿಯನ್ನು ಮಾತ್ರ ಶತಶತಮಾನಗಳಿಂದಲೂ ತನ್ನದಾಗಿಸಿಕೊಂಡಿರುವುದಕ್ಕೆ ಭಾರತದ ಇತಿಹಾಸವೇ ಸಾಕ್ಷೀಕರಿಸಿದೆ. ಬಹುಸಂಖ್ಯಾತ ಜನರನ್ನು ಹೊಂದಿರುವ ಭಾರತದಲ್ಲಿ, ಕೇವಲ ಬೆರಳೆಣಿಕೆಯಷ್ಟು ಸಣ್ಣ ವರ್ಗ ದೇವರು ಧರ್ಮದ ಹೆಸರಿನಲ್ಲಿ ಅಕ್ಷರದ ಶಿಕ್ಷಣವನ್ನು ತಮ್ಮ ಸೊತ್ತಾಗಿಸಿಕೊಂಡಿದ್ದಕ್ಕಾಗಿ ಪ್ರಪಂಚದಲ್ಲಿ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ ಬಹುಜನರ ಶಿಕ್ಷಣಮಟ್ಟ ಮಾತ್ರ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ಆರಂಭದ ಕಾಲಘಟ್ಟದಲ್ಲಿ ಎರಡಂಕಿಯನ್ನು ದಾಟದಂತಾಯಿತು. ಇಂತಹ ಸಂದರ್ಭದಲ್ಲಿಯೇ ಮೈಸೂರು ಸಂಸ್ಥಾನದಲ್ಲಿ ಪ್ರಪ್ರಥಮವಾಗಿ ಪ್ರಜಾಪ್ರಭುತ್ವದ ಹಿನ್ನೆಲೆಯಿಂದ ರಾಜಪ್ರಭುತ್ವವನ್ನು ಅನಾವರಣಗೊಳಿಸಿದ ಪ್ರಗತಿಪರ ಅರಸ ಹತ್ತನೇ ಚಾಮರಾಜ ಒಡೆಯರ್ ಹಾಗೂ ಅವರ ಮಗ ನಾಲ್ವಡಿ ಭೂಪ, ಮನೆಮನೆ ದೀಪ’ ಎಂದು ಜನಸಾಮಾನ್ಯರಿಂದ ಕರೆಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಲಿತರ ಅಕ್ಷರದ ಶಿಕ್ಷಣಕ್ಕೆ ಅತ್ಯಂತ ಹೆಚ್ಚು ಒತ್ತನ್ನು ನೀಡಿ ಚರಿತ್ರೆಯಲ್ಲಿ ಮಹಾನ್ ಮಹಾರಾಜರೇ ಆದರು. ಇವರು ದಲಿತರಿಗೆ ಕೇವಲ ಅಕ್ಷರದ ಶಿಕ್ಷಣವನ್ನೇ ನೀಡದೆ ಸಾಂಸ್ಕೃತಿಕವಾಗಿಯೂ ಮುಖ್ಯ ವಾಹಿನಿಗೆ ಬರಲು ಆಡಳಿತಾತ್ಮಕ ಕಾನೂನುಗಳನ್ನು ಜಾರಿಗೆ ತಂದರು. ಅಕ್ಷರದ ಮೀಸಲಾತಿಯನ್ನು ತಮ್ಮದಾಗಿಸಿಕೊಂಡಿದ್ದವರು ಶತಶತಮಾನಗಳಿಂದ ನಿರ್ಮಿಸಿಕೊಂಡಿದ್ದ ಅಭದ್ರವಾದ ಸ್ವಲಕ್ಷರವಂತರ ಆಜ್ಞಾನದ ಅಣೆಕಟ್ಟಿನ ಬಾಗಿಲನ್ನು ತೆರೆದು ಶಿಕ್ಷಣವು ಪ್ರತಿಯೊಬ್ಬ ಸಿಗುವಂತೆ ಮಾಡಿದರು. ಈ ಸಾಧನೆ ಭಾರತದ ಮಟ್ಟಿಗೆ ಮಹಾನ್




Reviews
There are no reviews yet.