SKU: 13337

ಗಿಡ ಮರಗಳ ಸ್ವರ ಮೇಳ

180.00

Author : ಡಾ. ಗುರುಮೂರ್ತಿ ಪೆಂಡಕೂರು

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಈ ಕೃತಿಯಲ್ಲಿ ವರ್ಣಿಸಿದ್ದೆಲ್ಲ ನಮಗೆ ಪರಿಚಿತ ಮರಗಳೇ ಎಂಬಂತೆ ಮೇಲ್ನೋಟಕ್ಕೆ ತೋರುತ್ತದೆ. ಆಲ, ಹಲಸು, ಹುಣಿಸೆ, ನೇರಳೆ, ನುಗ್ಗೆ ಇವೆಲ್ಲ ಎಲ್ಲರಿಗೂ ಗೊತ್ತಿದೆಯೆಂದೇ ನಾವು ಭಾವಿಸುತ್ತೇವೆ. ಆದರೆ ಸಾರ್ವಜನಿಕ ಮುಗ್ಧತೆ ಅದೆಷ್ಟೋ ಬಾರಿ ನಾವೆಣಿಸಿದ್ದಕ್ಕಿಂತ ಜಾಸ್ತಿ ಇರುತ್ತದೆ. ದಿನವೂ ಸಂಪಿಗೆ ಮರದ ನೆರಳಲ್ಲೇ ಗಾಡಿಯನ್ನು ಪಾರ್ಕ್ ಮಾಡುವ ವ್ಯಕ್ತಿಗೆ ಸಂಪಿಗೆ ಮರದ ಬಗ್ಗೆ ಏನೇನೂ ಗೊತ್ತಿರುವುದಿಲ್ಲ. ತಾನು ಸಂಪಿಗೆಯ ಘಮಘಮ ದಳಗಳ ಮೇಲೆ ಹೆಜ್ಜೆಯಿಡುತ್ತ ಸಾಗಿದರೂ ಯಾವ ಮರದ ಕೆಳಗೆ ಗಾಡಿಯನ್ನು ನಿಲ್ಲಿಸಿದ್ದೇನೆ ಎಂಬುದು ಗೊತ್ತಿರುವುದಿಲ್ಲ. ಮನದ ಒಳಗಣ್ಣು ತೆರೆದರೆ ಮಾತ್ರ ಹೊರಗಿನ ಬಿಂಬ ಒಳಕ್ಕೆ ಪ್ರವೇಶ ಮಾಡುತ್ತದೆ. ಇಲ್ಲವಾದಲ್ಲಿ ಎದುರಿಗೇ ದಿನವೂ ಕಾಣುವ ವೃಕ್ಷವೂ ಅಗೋಚರವೇ ಆಗಿರುತ್ತದೆ.

ಡಾ. ಪೆಂಡಕೂರರು ಈ ಅರವತ್ತು ಸಸ್ಯಗಳ ಕುರಿತು ನಮ್ಮ ಒಳಗಣ್ಣು ತೆರೆಯುವಂತೆ ಮಾಡಿದ್ದಾರೆ. ದೃಕ್ತದ ಇರವು ನಮ್ಮ ಅರಿವಿಗೆ ಬಂದರೆ ಅದರೊಂದಿಗೆ ಬದುಕುವ ದುಂಬಿ, ಜೇನ್ನೊಣಗಳೂ, ಗೊರವಂಕ- ಕಾಜಾಣಗಳೂ, ಸರೀಸೃಪ-ಬಂದಳಿಕೆಗಳ ಜೀವಜಾಲದ ವಿಸ್ಮಯಕರ ನೇಯ್ದೆಯೂ ನಮ್ಮ ಗಮನಕ್ಕೆ ಬರುತ್ತದೆ ತಾನೆ? ಈ ನಿಸರ್ಗ ನಿರ್ಮಿತ ಕೌದಿ ಅನ್ನಿ, ಕವನ ಅನ್ನಿ, ಸಸ್ಯ ಸ್ವರಮೇಳ ಅನ್ನಿ-ಜೀವವಿಕಾಸದ ಆ ಕಲಾ ಚಮತ್ಕಾರವನ್ನು ಅಕ್ಷರಗಳ ಮೂಲಕ ತೋರಿಸುವ ಉತ್ತಮ ಕೆಲಸ ಇಲ್ಲಿ ಸಾಕಾರವಾಗಿದೆ.

ನಾಗೇಶ ಹೆಗಡೆ, ಬೆಂಗಳೂರು

Rating This Book

Reviews

There are no reviews yet.

Be the first to review “ಗಿಡ ಮರಗಳ ಸ್ವರ ಮೇಳ”

Your email address will not be published. Required fields are marked *