SKU: 13323

ಪ್ರೇಮಪತ್ರ

350.00

ವೈಕಂ ಮುಹಮ್ಮದ್ ಬಷೀರ್ ಕತೆಗಳು

Author : ಅನುವಾದ ಮೋಹನ ಕುಂಟಾರ್

Publishers Name : ಯಾಜಿ ಪ್ರಕಾಶನ

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ವೈಕಂ ಮುಹಮ್ಮದ್ ಬಷೀರ್ ಅವರ ಇಪ್ಪತ್ತಮೂರು ಕಥೆಗಳನ್ನು ಗೆಳೆಯ ಮೋಹನ ಕುಂಟಾರ್ ಅವರು ಕನ್ನಡಿಸಿದ್ದಾರೆ. ಅನುವಾದವೆನ್ನುವುದು ಎರಡು ನುಡಿಗಳ ನಡುವೆ ಸೇತುವೆ ಕಟ್ಟುವ ಕೆಲಸ. ಕನ್ನಡ-ಮಲಯಾಳಂ ನುಡಿಗಳ ಪ್ರದರ್ಶಕ ಕಲೆ ಮತ್ತು ಸಾಹಿತ್ಯಗಳ ನಡುವೆ ಸಂವಾದ ಏರ್ಪಡಿಸುವ ಅವರ ಉತ್ಸಾಹಕ್ಕೆ ಸುಮಾರು ಇಪ್ಪತ್ತೈದು ವರ್ಷಗಳ ಚರಿತ್ರೆ ಇದೆ. ಕನ್ನಡ ಮಲಯಾಳಂ ಸುಡಿಗಳ ನಡುವೆ ಇದುವರೆಗೆ ನಡೆದಿರುವ ಕೊಳುಕೊಡೆಗಳ ಸ್ವರೂಪದ ಸ್ಪಷ್ಟವಾದ ಅರಿವೂ ಕುಂಟಾರ್ ಬರಹದಲ್ಲಿ ವ್ಯಕ್ತವಾಗುತ್ತದೆ. ಮೋಹನ ಕುಂಟಾರ್ ಇದೀಗ ಎರಡನೆಯ ಬಾರಿಗೆ ಬಷೀರ್ ಅವರ ಕಥೆಗಳ ಅನುವಾದ ಸಂಕಲನವನ್ನು ರೂಪಿಸಿದ್ದಾರೆ. ಅನುವಾದವು ಕನ್ನಡಕ್ಕೆ ಹೊಂದಿಕೊಳ್ಳಬೇಕು ಅನ್ನುವುದಕ್ಕಿಂತ ಮಲಯಾಳಂ ಕಥೆಯನ್ನು ಅದಷ್ಟೂ ಮಟ್ಟಿಗೆ ಅದು ಇರುವ ಹಾಗೇ ತೋರುವ ನುಡಿಕನ್ನಡಿ ಆಗಬೇಕು ಅನ್ನುವುದು ಮೋಹನ ಕುಂಟಾರ್ ಅವರ ಈ ಸಂಕಲನದ ಉದ್ದೇಶ. ಇದರಿಂದ ಬಷೀರ್ ಅವರ ನುಡಿ ಬಳಕೆ, ಂಗ್ಯ, ವಿನೋದ ಧೋರಣೆ ಇವು ಮಲಯಾಳಂನಲ್ಲಿ ಹೇಗೆ ವ್ಯಕ್ತವಾಗಿವೆ ಅನ್ನುವುದನ್ನು ಕನ್ನಡ ಓದುಗರು ಊಹಿಸಿಕೊಳ್ಳಲು ಅನುಕೂಲವಾಗಿದೆ. ವಿನೋದದ ಧಾಟಿ ಮುಖ್ಯವಾಗಿರುವ, ಪ್ರೀತಿಯ ವಸ್ತುವನ್ನು ಒಳಗೊಂಡಿರುವ ಕಥೆಗಳನ್ನು ಆಯ್ದುಕೊಂಡಿರುವುದರಿಂದ ಮಲಯಾಳಂಗೆ ಸಹಜವೆನಿಸುವ, ಇಂದಿನ ಕನ್ನಡದ ಕಥೆಗಳ ಭಾಷೆಗೆ ಹೊಂದದ ಸಂಸ್ಕೃತ ಪದಗಳ ಬಳಕೆ ವೈನೋದಿಕಕ್ಕೆ ಬಹಳ ಚೆನ್ನಾಗಿ ಹೊಂದಿಕೊಳ್ಳುವಂತಾಗಿದೆ.

ಕುಂಟಾರ್ ಅವರ ಪ್ರಾಮಾಣಿಕವಾದ ಆಸಕ್ತಿ, ಶ್ರಮಗಳ ಫಲವಾಗಿ ಮೂಡಿರುವ ಈ ಸಂಕಲನ ಅವರ ಇದುವರೆಗಿನ ಹನ್ನೊಂದು ಅನುವಾದ ಕೃತಿಗಳಲ್ಲಿ ಮುಖ್ಯವಾದ ಸ್ಥಾನವನ್ನು ಪಡೆದಿದೆ. ಓದಿನ ಸಂವೇದನೆಯನ್ನು ಬೆಳೆಸುವ ಇಂಥ ಅನುವಾದವನ್ನು ರೂಪಿಸಿದ ಮೋಹನ ಕುಂಟಾರ್ ಅವರಿಗೆ ಅಭಿನಂದನೆಗಳು.

– ಓ.ಎಲ್. ನಾಗಭೂಷಣ ಸ್ವಾಮಿ

Rating This Book

Reviews

There are no reviews yet.

Be the first to review “ಪ್ರೇಮಪತ್ರ”

Your email address will not be published. Required fields are marked *

Top Books