+918310000414
contact@kannadabookpalace.com
+918310000414
contact@kannadabookpalace.com
₹150.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಆರಂಭ ಘಟ್ಟದ ಭಾರತೀಯ ಕಾದಂಬರಿಗಳಲ್ಲಿ ಒಂದಾದ ‘ಕುಂದಲತ’ ಪ್ರೇಮ ಮತ್ತು ಪ್ರಭುತ್ವದ ವಿಷಯಗಳಿಂದ ಒಂದು ಅದ್ಭುತ ‘ತ್ರಿಲ್ಲರ್’. ಇದು ಮಲಯಾಳಂನ ಮೊದಲ ಕಾದಂಬರಿ ಎಂದೇ ಹೆಸರಾಗಿದೆ. ಇದು ರಮ್ಯ ಸಂಪ್ರದಾಯದ ರಚನೆಯಾಗಿದ್ದು ಇಂಗ್ಲಿಷ್, ಸಂಸ್ಕೃತ ಸಾಹಿತ್ಯಗಳಿಂದ ಪ್ರೇರಣೆ ಪಡೆದಿದೆ. ಎರಡು ಪ್ರೇಮಕತೆಗಳು ಹಾಗೂ ಒಂದು ಯುದ್ಧ ವೃತ್ತಾಂತದ ಮೂಲಕ ಸ್ವಾರಸ್ಯಕರವಾದ ಕತೆಯನ್ನು ಇದರಲ್ಲಿ ಹೆಣೆಯಲಾಗಿದೆ.
ಇದನ್ನು ಕೇರಳ ನೆಲದ ಕತೆಯಾಗಿ ಹೇಳದೇ ಇರಬಹುದು. ಆದರೆ ಕೇರಳೀಯ ಓದುಗರ ಮನಸ್ಸನ್ನು ಸೆಳೆಯುವ ಉದ್ದೇಶಕ್ಕಾಗಿ ಸೃಷ್ಟಿಯಾಗಿದೆ. ಮುಖ್ಯವಾಗಿ ಮಹಿಳಾ ಓದುಗರನ್ನು ಗಮನದಲ್ಲಿಟ್ಟುಕೊಂಡು ರಚಿತವಾಗಿರುವ ಈ ಕಾದಂಬರಿ ಆ ಮಿತಿಯನ್ನು ಮೀರಿ ಎಲ್ಲಾ ವರ್ಗದ ಸುಶಿಕ್ಷಿತರನ್ನು ತಣಿಸುವ ಸಾಮರ್ಥ್ಯವನ್ನು ಹೊಂದಿದೆ. ಯುದ್ಧ ಮತ್ತು ಪ್ರೇಮ ಎಲ್ಲಾ ಕಾಲದ ರಂಜನೀಯ ವಸ್ತು ವಿಷಯವಾಗಿರುವುದರಿಂದ ಪ್ರಸ್ತುತ ಕಾದಂಬರಿ ಕಾಲ್ಪನಿಕವಾದರೂ ಕಾಲಾತೀತವಾಗಿ ಮೂಡಿ ಬಂದಿದೆ. ಇದು ಕಾದಂಬರಿಯ ಸಂಪೂರ್ಣ ಲಕ್ಷಣಗಳನ್ನು ಒಳಗೊಂಡಿಲ್ಲವಾದರೂ ಮಲಯಾಳಂ ಕಾದಂಬರಿಗಳ ಮುನ್ನುಡಿಯೆಂಬಂತೆ ಗಮನಾರ್ಹವೆನಿಸಿದೆ. ಹಾಗೆಯೇ ಮಲಯಾಳಂ ಕಾದಂಬರಿ ಸಾಹಿತ್ಯ ಪ್ರಕಾರದ ಉಗಮ ಸಮೀಪಿಸುತ್ತಿದೆ ಎಂಬುದನ್ನು ಈ ಕೃತಿ ತೋರಿಸಿಕೊಟ್ಟಿದೆ ಎಂಬ ಕಾರಣಕ್ಕೂ ಮಹತ್ವ ಪಡೆದಿದೆ. ಪ್ರಸ್ತುತ ಕಾದಂಬರಿಯನ್ನು ಹೃದ್ಯವಾಗಿ ಅನುವಾದಿಸಿರುವ ಮೋಹನ ಕುಂಟಾರ್ ಅವರು ಕನ್ನಡದಲ್ಲಿ ಸಂಶೋಧಕರಾಗಿ, ಅನುವಾದಕರಾಗಿ ಹೆಸರಾದವರು. ಮಲಯಾಳಂ ಕನ್ನಡ ಸಂಬಂಧದ ಬಗೆಗಿನ ಅವರ ಅನೇಕ ಬರವಣಿಗೆಗಳು ಈಗಾಗಲೇ ಕನ್ನಡದಲ್ಲಿ ಗಮನ ಸೆಳೆದಿವೆ. ಪ್ರಸ್ತುತ ಕಾದಂಬರಿಯ ಕುರಿತ ಪ್ರಸ್ತಾವನೆ ಮತ್ತು ಕಾದಂಬರಿ ಇವು ಅವರ ಸಂಶೋಧನ ಪ್ರಜ್ಞೆ ಮತ್ತು ಅನುವಾದ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಕನ್ನಡ ಓದುಗರಿಗೆ ಮಲಯಾಳಂನ ಮೊದಲ ಕಾದಂಬರಿಯ ಕುರಿತ ಪರಿಚಯವನ್ನು ಸಮಥ- ರ್*ವಾಗಿ ಇದರಲ್ಲಿ ಕುಂಟಾರ್ ಮಾಡಿದ್ದಾರೆ.
-ಸಿ.ವೆಂಕಟೇಶ, ಹಂಪಿ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.