SKU: 13294

ಶಾಂತಿ ಬೀಜಗಳ ಜತನ

120.00

ಕವಿತೆಗಳು

Author : ಡಾ. ಪ್ರಕಾಶ ಗ. ಖಾಡೆ

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿ ತಮ್ಮಷ್ಟಕ್ಕೇ ತಾವು ನಿವಾಂತವಾಗಿ ಮತ್ತು ನಿರಂತರವಾಗಿ ಕವಿತೆ ಬರೆಯುತ್ತ, ಜಾನಪದ ಜಾಡು ಹುಡುಕುತ್ತ, ಅಕ್ಷರಗಳ ಜೊತೆಗೆ ಆಟವಾಡುತ್ತ, ಧ್ಯಾನಸ್ಥ ಸ್ಥಿತಿಯಲ್ಲಿ ಸಾಹಿತ್ಯವನ್ನು ಧೇನನಿಸುವ ಡಾ. ಪ್ರಕಾಶ ಖಾಡೆಯವರ ಕವಿತೆಗಳನ್ನು ಓದಿದರೆ ಕನ್ನಡ ಸಾಹಿತ್ಯದ ಈಗಿನ ಪ್ರವಾಹ ಮತ್ತು ಪ್ರವಾಸ ಯಾವ ಕಡೆಗೆ ಸಾಗುತ್ತಿದೆಯೆಂದು ಗೊತ್ತಾಗುತ್ತದೆ.

ಸ್ಪಷ್ಟ ವಿಚಾರ, ಸಮರ್ಥ ನಿರೂಪಣೆ, ಅನಾವಶ್ಯಕ ಶಬ್ಬಗಳ ತಡೆ ಹಾಗೂ ಓದುಗನ ಜೊತೆಗೆ ಒಂದು ಸಂವಾದ ಇವು ಡಾ. ಖಾಡೆಯವರ ಕಾವ್ಯದ

ವೈಶಿಷ್ಟ್ಯ

ಇಂದಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಹಾರೂ ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ. ಈ ಅಶಾಂತಿಯ ಪರ್ವದಲ್ಲಿ ಕಾವ್ಯ ಮಾತ್ರ ಶಾಂತಿಯನ್ನು ಅರಳಿಸಬಲ್ಲದು. ಕಪ ಅಕ್ಷರಗಳನ್ನು ಮತ್ತಿ ಕಾವ್ಯದ ಬೆಳೆಯನ್ನು ಬೆಳೆಯುತ್ತಾನೆ. ಈ ಬೆಳೆ ಮಾತ್ರ ಜಗತ್ತನ್ನು ಉಳಿಸಬಲ್ಲದು. ಡಾ. ಖಾಡೆಯವರ ಭಾಂಡಾರದಲ್ಲಿ ಶಾಂತಿ ಬೀಜಗಳ ದೊಡ್ಡ ಉಗ್ರಾಣವೇ ಇದೆ. ಅವುಗಳನ್ನು ಜತನವಾಗಿ ಕಾಯ್ದಿರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವನ್ನು ಅವರು ಕಾವ್ಯ ಮಾಧ್ಯಮದ ಮೂಲಕ ಮಾಡುತ್ತಿದ್ದಾರೆ.

ಡಾ. ಖಾಡೆಯವರ ಕವಿತೆಗಳನ್ನು ಓದಿದಾಗ ಒಬ್ಬ ಆಡಾಂತ ಸಂತನ ಜೊತೆಗೆ ಮಾತಾಡಿದಂತೆ ಅನ್ನಿಸಿತು.

ಡಾ. ಸರಜೂ ಕಾಟ್ಕರ್

Rating This Book

Reviews

There are no reviews yet.

Be the first to review “ಶಾಂತಿ ಬೀಜಗಳ ಜತನ”

Your email address will not be published. Required fields are marked *

Top Books