+918310000414
contact@kannadabookpalace.com
+918310000414
contact@kannadabookpalace.com
₹110.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಅರಿವಿನ ಜಾಡು’ ಎಂಬ ಲೇಖನಗಳ ಸಂಚಯ ಕೃತಿಯ ಮುಖೇನ ಎಂದಿಗಿಂತ ವರ್ತಮಾನದ ಸಮಾಜಕ್ಕೆ ಅಗತ್ಯವೆಂದೆಣಿಸಿ, ಹೆಚ್ಚಾಗಿ ನಮ್ಮ ‘ಅನುಭಾವ’ ಹೇಳಿಕೊಡುವ ‘ಅರಿವು’ ಎಂಬ ಜೀವನದ ನಿಜ ಅಸ್ತಿತ್ವ-ಅನುಭೂತಿ ಶಕ್ತಿಯ ಅರಿವನ್ನು ಅರಿವಾಗಿಸಲು ಪ್ರಯತ್ನಿಸಿದ್ದಾರೆ ನಮ್ಮ ಕನ್ನಡ ಅಧ್ಯಯನ ಪೀಠದ ಸಂಶೋಧನಾ ಬಳಗದ ಮೆಚ್ಚುಗೆಯ ಮತ್ತು ಭರವಸೆಯ ವಿದ್ಯಾರ್ಥಿ ದಾವಲಸಾಬ ನರಗುಂದ ಅವರು.
“ಯಾವುದನ್ನೇ ಆಗಲಿ. ಅದನ್ನು ಅದರ ನಿಜ ಸ್ವರೂಪದಲ್ಲಿಯೇ ಅರಿವುದು ಜ್ಞಾನದ ಮುಖ್ಯ ಗುಣ” ಎನ್ನುತ್ತಾನೆ ಮ್ಯಾಥ್ಯು ಅರ್ನಾಲ್ಡ್. ನಮ್ಮಲ್ಲೇ ಜನಜನಿತವಾಗಿರುವ ವಚನ, ತತ್ವಪದ, ಕೀರ್ತನೆ ಇತ್ಯಾದಿಗಳ ಮೂಲಕ ಬಸವ, ಅಲ್ಲಮ, ಶರೀಫ, ಕನಕದಾಸ, ಕಡಕೋಳ ಮಡಿವಾಳಪ್ಪರಂತಹ ಅನುಭಾವಿಗಳನ್ನು ಮುಖಾಮುಖಿಯಾಗಿಸಿ ಸಮಾಜದ ಸ್ವಾಸಕ್ಕೋಸ್ಕರ ಅರಿವಿನ ವ್ಯಾಪಾರವಾಗಬೇಕೆನ್ನುವುದು ದಾವಲಸಾಬ ಅವರ ಬಹುತೇಕ ಲೇಖನಗಳ ಪ್ರಾಮಾಣಿಕ ಇರಾದೆಯಾಗಿದೆ.
ಮುಳಗುಂದ ಪರಿಸರದ ಕಾಲಭೈರವ ಪರಂಪರೆಯ ದರ್ಶನದೊಂದಿಗೆ ದೇವಾಲಯಗಳ ಜೀರ್ಣೋದ್ದಾರ, ನಿರ್ವಹಣೆಯ ಕುರಿತು ಯುವ ಬರಹಗಾರನ ಕಾಳಜಿ ಇಲ್ಲಿ ವ್ಯಕ್ತವಾಗಿದೆ. ಆಧುನಿಕ ಸಾಹಿತ್ಯದಲ್ಲೊಂದು ಸುತ್ತು ಹೊಡೆಸಿ, ಆಯಾ ಕಾಲಘಟ್ಟದ ಸಾಹಿತ್ಯ ಕಲಿಸಿಕೊಟ್ಟ ಮೌಲ್ಯಗಳ ಅರಿಯುವಿಕೆ ನಿಲ್ಲಬಾರದೆಂಬುದು ಯುವಮನಸ್ಸಿನ ಆಶಯವಾಗಿದೆ. ಕರ್ನಾಟಕ ಏಕೀಕರಣದ ದನಿ ಆಲೂರರ ಸೇವೆಯನ್ನು ಮರೆಯಬೇಡಿರೆಂದು ಕನ್ನಡ ಮನಸ್ಸುಗಳ ಎಚ್ಚರಿಸುವ ಹಂಬಲ ದಾವಲಸಾಬ ಅವರದು.ಕೊನೆಯಲ್ಲಿ ‘ಮೀ ರಕ್ಷಂ’ ಚಿತ್ರವೊಂದರ ‘ಕಲೆ ಯಾವ ಧರ್ಮ, ಜಾತಿಯ ಸೊತ್ತಲ್ಲ; ಅದು ಕಲಿಯುವವನ, ಕಲಿತವನ ಸೊತ್ತು’ ಎಂಬ ಸಂದೇಶವನ್ನಿಟ್ಟುಕೊಂಡು ಸಮಾಜದ ಕೋಮುವಾದಿತ್ವ, ಅವಕಾಶವಾದಿತ್ವ, ಮೂಲಭೂತವಾದಿತ್ವ ಶಕ್ತಿಗಳ ವಿರುದ್ಧ ಲೇಖಕರ ಮೃದುವಾದ ಪ್ರತಿಭಟನೆಯಿದೆ.ಹೀಗೆ ಸಮುದಾಯ ಸಾಮರಸ್ಯ, ಭಾವೈಕ್ಯತೆ.ದೇಶದ ಬಹುತ್ವದ ಬಗೆಗಿರುವ ಕಾಳಜಿ ಒಂದೆಡೆಯಾದರೆ, ಇವುಗಳ ಯಶಸ್ಸಿಗೆ ಭಂಗ ತರುವ ಕಾಣದ ಕೈಗಳ ಆತಂಕವೂ ಲೇಖಕರಿಗಿದೆ.
ದಾವಲಸಾಬ ಅವರ ಸಂವೇದನಾಶೀಲ ಮನಸ್ಸು. ಪ್ರಸ್ತುತ ಸಮಾಜದ ಮನಸಿಗೊಪ್ಪದ ಆಗುಹೋಗುಗಳಿಗೆ ಬಿಸಿಯಾಗಿ ಹೇಳಲೋಗಿ ಕೆಲವೊಮ್ಮೆ ಬಿಸಿಯುಸಿರಾಗುತ್ತದೆ. ಒಟ್ಟಾರೆ ದಿನದ. ಅಧ್ಯಾತ್ಮದ ಅರಿವಿನಿಂದ ಸಮಾಜವ ಕಾಪಾಡಬಹುದೆಂಬ ದಾವಲಸಾಬರ ಆಶಯ, ನಿಲುವು ಒಪ್ಪಿತವಾದದ್ದೆ.ಈ ಕನಸುಕಂಗಳ ಯುವಕನ ಸಾರಸ್ವತಲೋಕದಲ್ಲಿನ ಪುಟ್ಟ ಪುಟ್ಟ ಹೆಜ್ಜೆಗಳು ದೈತ್ಯರೂಪದ ಹೆಜ್ಜೆಗಳಾಗಲಿ ಎಂದು ನಾನು ಮನದುಂಬಿ ಹಾರೈಸುವೆ.
ಪ್ರೊ. ರಾಜೇಂದ್ರ ನಾಯಕ
ಡೀನರು, ಕಲಾನಿಕಾಯ
‘ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.